ಇಂಟರ್‌ನೆಟ್‌ಗೆ ಬೆಂಕಿ ಹಂಚಿದ ಇಶಾ ಗುಪ್ತಾ ಲುಕ್‌: ಇದು ಹಾಟ್‌ನೆಸ್ ಅಲ್ಲ, ಶೇಮ್‌ಲೆಸ್ ಎಂದ ನೆಟ್ಟಿಗರು!

First Published | Jul 24, 2023, 4:49 PM IST

ಬಾಲಿವುಡ್ ನಟಿ ಇಶಾ ಗುಪ್ತಾ (Esha Gupta) ಅವರಿಗೆ ಸದಾ ಸುದ್ದಿಯಲ್ಲಿರುವುದು ಹೇಗೆ ಎಂದು ಗೊತ್ತು. ಆಗಾಗ ತಮ್ಮ ಹಾಟ್‌ ಫೋಟೋಗಳು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಮನೋರಂಜನೆ ನೀಡುತ್ತಾರೆ. ಈಗ ಮತ್ತೊಮ್ಮೆ ಸಖತ್‌ ಬೋಲ್ಡ್‌ ಆವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಫೋಟೋ ವೈರಲ್‌ ಆಗಿದೆ.

ಇಶಾ ಗುಪ್ತಾ  ತಮ್ಮ ನೆಚ್ಚಿನ  ಫುಟ್ಬಾಲ್‌ ತಂಡದ ಜೆರ್ಸಿಯನ್ನು ಪ್ರದರ್ಶಿಸುತ್ತಿರುವ ಮೂಲಕ ಫಿಫಾ ಮಹಿಳಾ ವಿಶ್ವಕಪ್‌ಗೆ ಸಜ್ಜಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

ಇಶಾ ಗುಪ್ತಾ ಅವರು ಭಾನುವಾರ ಇನ್‌ಸ್ಟಾಗ್ರಾಮ್‌ನಲ್ಲಿ ಕಪ್ಪು ಮತ್ತು ಬಿಳಿ ಗೆರೆಗಳಿರುವ 'ಜೀಪ್' ಎಂದು ಬರೆದಿರುವ  ಕ್ರಾಪ್-ಟಾಪ್ ಜುವೆಂಟಸ್ ಜರ್ಸಿಯನ್ನು ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

Tap to resize

FIFA ಮಹಿಳಾ ವಿಶ್ವಕಪ್‌ನ  ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸುವಾಗ ಮೊಬೈಲ್‌ ಹಿಡಿದು ಬಿಸಿಲು ಕಾಯಿಸುತ್ತ ಮಲಗಿರುವ ಇಶಾ ಗುಪ್ತಾ ಅವರು ಅದ್ಭುತವಾಗಿ ಕಾಣುತ್ತಿದ್ದಾರೆ
 

ಮತ್ತೊಂದು ಫೋಟೋದಲ್ಲಿ, ಇಶಾ ಅದೇ ಉಡುಪನ್ನು ಧರಿಸಿದ್ದು, ಸುತ್ತ ಹಸಿರು ಮರ ಗಿಡಗಳಿರುವ  ಬಾಲ್ಕನಿಯಲ್ಲಿ ಫೋನ್‌ ಹಿಡಿದು ನಿಂತು ಪೋಸ್‌ ನೀಡಿದ್ದಾರೆ
 

ಫೋಟೋವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ಸ್ವಲ್ಪ ಸಮಯದಲ್ಲೇ ಸಖತ್‌ ವೈರಲ್‌ ಆಗಿದ್ದು, ನಂತರ ಅಭಿಮಾನಿಗಳು ಫೈರ್ ಎಮೋಜಿಗಳನ್ನು ಬಳಸಿ ಕಾಮೆಂಟ್‌ ಮಾಡಿದ್ದಾರೆ.
 

 'ತುಂಬಾ ಹಾಟ್‌ ಆಗಿದೆ', 'ತುಂಬಾ ಸುಂದರವಾಗಿದೆ', 'ಸೆಕ್ಸಿನೆಸ್' ಎಂದು ಅಭಿಮಾನಿಗಳು ನಟಿಯನ್ನು ಶ್ಲಾಘಿಸಿ ಕಾಮೆಂಟ್‌ ಮಾಡಿ ಪ್ರೀತಿ ಸುರಿಸಿದ್ದಾರೆ.

ಇಶಾ ಗುಪ್ತಾ ಇತ್ತೀಚೆಗೆ ಪ್ರಕಾಶ್ ಝಾ ಅವರ ಆಶ್ರಮ್ 3 ನಲ್ಲಿ ಕಾಣಿಸಿಕೊಂಡರು. ಆಶ್ರಮ 3 ರಲ್ಲಿ, ಇಶಾ ಸೋನಿಯಾ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ.

Latest Videos

click me!