ಬೈಕ್ ಹಾಗೂ ಸ್ಕೂಟರ್ ಬೆಲೆ ಲಕ್ಷ ರೂಪಾಯಿ ದಾಟಿದೆ ಅನ್ನೋ ಮಾತುಗಳು ಖರೀದಿ ವೇಳೆ ಕೇಳಿ ಬರುತ್ತದೆ. ಎಕ್ಸ್ ಶೋ ರೂಂ ಬೆಲೆಗೆ, ತೆರಿಗೆ, ವಿಮೆ ಸೇರಿ ಇತರ ವೆಚ್ಚಗಳು ಸೇರಿ ಆನ್ ರೋಡ್ ಪ್ರೈಸ್ ಲಕ್ಷಕ್ಕೂ ಅಧಿಕವಾಗುತ್ತದೆ ಅನ್ನೋ ಚಿಂತೆ ಬೇಡ. ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಈಗಲೂ ಬೈಕ್ ಲಭ್ಯವಿದೆ. ಉತ್ತಮ ಮೈಲೇಜ್, ಬಾಳಿಕೆಯೂ ಈ ಬೈಕ್‌ಗಿದೆ. ಇಷ್ಟೇ ಅಲ್ಲ ಬ್ರ್ಯಾಂಡ್ ಕಂಪನಿಗಳ ಬೈಕ್‌ಗಳೇ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಉತ್ತಮ ಮೈಲೇಜ್ ನೀಡಬಲ್ಲ ಹಲವು ಬೈಕ್‌ಗಳಿವೆ. ಕೇವಲ 49,999 ರೂಪಾಯಿಯಿಂದ ಬೆಲೆ ಆರಂಭಗೊಳ್ಳುತ್ತಿದೆ. ಈ ಪೈಕಿ ಭಾರತದ ಮೋಸ್ಟ್ ಅಫರ್ಡೇಬಲ್ ಬೈಕ್ ಎಂದೇ ಜನಪ್ರಿಯವಾಗಿರುವ ಹೀರೋ ಹೆಚ್ಎಫ್ 100 ಮಾರಾಟದಲ್ಲೂ ದಾಖಲೆ ಬರೆದಿದೆ. ಇದರ ಆರಂಭಿಕ ಬೆಲೆ ಕೇವಲ 49,999 ರೂಪಾಯಿ(ಎಕ್ಸ್ ಶೋ ರೂಂ). 97.2 ಸಿಸಿ, ಏರ್‌ಕೂಲ್ಡ್ ಎಂಜಿನ್ ಹೊಂದಿರುವ ಈ ಬೈಕ್ ಒಂದು ಲೀಟರ್ ಪೆಟ್ರೋಲ್‌ಗೆ 65 ಕಿ.ಮಿ ಮೈಲೇಜ್ ನೀಡುತ್ತದೆ.
ಟಿವಿಎಸ್ ಬ್ರ್ಯಾಂಡ್ ಬೈಕ್‌ಗಳಿಗೆ ಭಾರತದಲ್ಲಿ ಬಾರಿ ಭೇಡಿಕೆ ಇದೆ. ಈ ಪೈಕಿ ಟಿವಿಎಸ್ ಸ್ಪೋರ್ಟ್ಸ್ ಇಎಸ್ ಬೈಕ್ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಬೈಕ್ ಬೆಲೆ ಕೇವಲ 69,746 ರೂಪಾಯಿ(ಎಕ್ಸ್ ಶೋ ರೂಂ). ಈ ಬೈಕ್ ಸಿಟಿ ರೈಡ್‌ನಲ್ಲಿ ಬರೋಬ್ಬರಿ 83.9 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು ಹೆದ್ದಾರಿಗಳಲ್ಲಿ 66.34 ಕಿ.ಮಿ ಮೈಲೇಜ್ ನೀಡಲಿದೆ. 109.7ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದೆ.
ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಬೈಕ್ ಪೈಕಿ ಹೀರೋ ಮತ್ತೊಂದು ಆಫರ್ ನೀಡುತ್ತಿದೆ. ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್‌ನ್ನು ಕೇವಲ 64,909 ರೂಪಾಯಿಗೆ(ಎಕ್ಸ್ ಶೋ ರೂಂ) ಖರೀದಿಸಲು ಸಾಧ್ಯವಿದೆ. ಇದರ ಮೇಲೈಜ್ 65 ಕಿಲೋಮೀಟರ್. 97.2 ಸಿಸಿ ಎಂಜಿನ್ ಹೊಂದಿದೆ. ವಿಶೇಷ ಅಂದರೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಐ3ಎಸ್ ಟೆಕ್ನಾಲಜಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
ಆಕರ್ಷಕ ವಿನ್ಯಾಸ, ಮೈಲೇಜ್ ಹಾಗೂ ಬೆಲೆ ಈ ಮೂರನ್ನು ಗಮನದಲ್ಲಿಟ್ಟು ಬೈಕ್ ಖರೀದಿಸುತ್ತಿದ್ದರೆ ಟಿವಿಎಸ್ ರೆಡಿಯಾನ್ ಉತ್ತಮ ಆಯ್ಕೆಯಾಗಿದೆ. ಇದರ ಬೆಲೆ 74,094 ರೂಪಾಯಿ(ಎಕ್ಸ್ ಶೋ ರೂಂ) ಇದು 10.9.7ಸಿಸಿ ಎಂಜಿನ್ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ ಸಿಟಿಯಲ್ಲಿ ಬರೋಬ್ಬರಿ 73.68 ಕಿಲೋಮೀಟರ್ ಮೈಲೇಜ್ ನೀಡಿದರೆ ಹೆದ್ದಾರಿಯಲ್ಲಿ 68.6 ಕಿಲೋಮೀಟರ್ ಮೈಲೇಜ್ ನೀಡಲಿದೆ. ಡಿಸ್ಕ್ ಬ್ರೇಕ್, ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.
ಹೀರೋ ಸ್ಪ್ಲೆಂಡರ್ ಬೈಕ್ ಭಾರತದ ಅತ್ಯಂತ ಜನಪ್ರಿಯ ಬೈಕ್. ಅತೀ ಹೆಚ್ಚು ಮಂದಿ ಈ ಬೈಕ್ ಬಳಸುತ್ತಿದ್ದಾರೆ. ಹಲವು ರೂಪಾಂತರ, ಅಪ್‌ಗ್ರೇಡ್ ಮೂಲಕ ಸ್ಪ್ಲೆಂಡರ್ ಬೈಕ್ ಬಿಡುಗಡೆಯಾಗಿದೆ. ಸ್ಪ್ಲೆಂಡರ್ ಬೈಕ್ ಬೆಲೆ 76,356 ರೂಪಾಯಿಂದ(ಎಕ್ಸ್ ಶೋ ರೂಂ). ಈ ಬೈಕ್ ಬರೋಬ್ಬರಿ 70 ಕಿ.ಮೀ ಮೈಲೇಜ್ ನೀಡುತ್ತದೆ.ಹಲವು ವೇರಿಯೆಂಟ್‌ಗಳು ಹಾಗೂ ಹಲವು ಬಣ್ಣದಲ್ಲಿ ಬೈಕ್ ಲಭ್ಯವಿದೆ.