ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, 150km ಮೈಲೇಜ್, ಬೆಲೆ ಎಷ್ಟು?

Published : Dec 20, 2024, 02:38 PM IST

ಬಜಾಜ್ ಚೇತಕ್ ಹೊಸ ಫೀಚರ್, ಹೊಸ ಬ್ಯಾಟರಿ, ಹೊಸ ವಿನ್ಯಾಸದ ಮೂಲಕ ಬಿಡುಗಡೆಯಾಗಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮಿ ಮೈಲೇಜ್ ನೀಡಲಿದೆ. ಚಾರ್ಜಿಂಗ್ ಸಮಯ ಕೂಡ ಕಡಿಮೆ. ಇದರ ಬೆಲೆ ಎಷ್ಟು?  

PREV
16
ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, 150km ಮೈಲೇಜ್, ಬೆಲೆ ಎಷ್ಟು?

ಭಾರತದಲ್ಲಿ ಲಭ್ಯವಿರುವ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಬಜಾಜ್ ಚೇತಕ್ ಕೂಡ ಸ್ಥಾನ ಪಡೆದಿದೆ. ಹಲವು ದಶಕಗಳ ಬಳಿಕ 2020ರಲ್ಲಿ ಬಜಾಜ್ ಚೇತಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿತ್ತು. ಎಲೆಕ್ಟ್ರಿಕ್ ಚೇತಕ್ ಸ್ಕೂಟರ್ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಇದೇ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತಷ್ಟು ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿದೆ.
 

26

ನಿಯೋ ಕ್ಲಾಸಿಕ್ ಸ್ಟೈಲ್, ಮೆಟಾಲಿಕ್ ಬಾಡಿ, ಪವರ್‌ಟ್ರೇನ್, ಫೀಚರ್ಸ್ ಸೇರಿದಂತೆ ಹಲವು ಮಹತ್ತರ ಬದಲಾವಣೆಯೊಂದಿಗೆ ಹೊಸ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಮೂರು ವೇರಿಯೆಂಟ್‌ನಲ್ಲಿ ಸ್ಕೂಟರ್ ಲಭ್ಯವಿದೆ. 3502, 3501 ಹಾಗೂ 3503 ವೇರಿಯೆಂಟ್ ಹೊಸ ಚೇತಕ್ ಸ್ಕೂಟರ್‌ನಲ್ಲಿ ಲಭ್ಯವಿದೆ.
 

36

ಸರ್ಕ್ಯೂಲರ್ ಹೆಡ್‌ಲ್ಯಾಂಪ್, ಜೊತೆಗೆ ಡಿಆರ್‌ಎಲ್ ಹೊಂದಿದೆ. ವಿಶೇಷ ಅಂದರೆ ಸೀಟ್ ಹಾಗೂ ಫ್ಲೋರ್‌ಬೋರ್ಡ್ ಹಳೇ ಚೇತಕ್ ಇವಿಗಿಂತ ಉದ್ದವಾಗಿದೆ. ಹೀಗಾಗಿ ಹೆಚ್ಚು ಅರಾಮದಾಯಕ ಪ್ರಯಾಣ ಅಥವಾ ವಸ್ತುಗಳನ್ನು ಒಯ್ಯಲು ಸಹಕಾರಿಯಾಗಿದೆ. 35 ಲೀಟರ್ ಬೂಟ್ ಸ್ಪೇಸ್ ಹೊಸ ಚೇತಕ್ ಇವಿ ಹೊಂದಿದೆ.
 

46

ಮುಖ್ಯವಾಗಿ ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮಿ ಮೈಲೇಜ್ ರೇಂಜ್ ಹೊಸ ಚೇತಕ್ ಇವಿ ನೀಡಲಿದೆ. ಇನ್ನು ಚಾರ್ಜಿಂಗ್ ಸಮಯ ಕೂಡ ಕಡಿಮೆಯಾಗಿದೆ. 0-80 ಶೇಕಡಾ ಚಾರ್ಜ್ ಆಗಲು ಕೇವಲ 3 ಗಂಟೆ ಸಾಕು. ಮೂರು ವೇರಿಯೆಂಟ್ ಸ್ಕೂಟರ್ ಮೂರು ಬ್ಯಾಟರಿ ಪ್ಯಾಕ್ ಹೊಂದಿದೆ. ಹೀಗಾಗಿ ಒಂದೊಂದು ವೇರಿಯೆಂಟ್ ಮೈಲೇಜ್ ವ್ಯತ್ಯಾಸವಾಗಲಿದೆ. ಪ್ರಾಯೋಗಿಕವಾಗಿ 125 ಕಿ.ಮಿ ಮೈಲೇಜ್ ಖಚಿತವಾಗಿ ಸಿಗಲಿದೆ.
 

56

5 ಇಂಚಿನ TFT ಸ್ಕ್ರೀನ್ ಜೊತೆಗೆ ಡಿಜಿಟಲ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ರೈಡಿಂಗ್ ಕುರಿತು ಎಲ್ಲಾ ಮಾಹಿತಿಗಳು ಇದು ನೀಡಲಿದೆ. ನ್ಯಾವಿಗೇಶನ್, ಕರೆ ಸ್ವೀಕಾರ ಹಾಗೂ ತಿರಸ್ಕರಿಸುವಿಕೆ, ಮ್ಯೂಸಿಕ್, ಡಾಕ್ಯುಮೆಂಟ್ ಸ್ಟೋರೇಜ್, ಜಿಯೋ ಫೆನ್ಸಿಂಗ್, ಥೆಫ್ಟ್ ಅಲರ್ಟ್, ಆಕ್ಸಿಡೆಂಟ್ ಡಿಟೆಕ್ಷನ್, ಓವರ್ ಸ್ಪೀಡ್ ಅಲರ್ಟ್ ಸೇರಿದಂತೆ ಹತ್ತು ಹಲವು ಫೀಚರ್ಸ್ ಇದರಲ್ಲಿ ಲಭ್ಯವಿದೆ.
 

66

ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ 1.20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದು 3502 ವೇರಿಯೆಂಟ್ ಬೆಲೆಯಾಗಿದೆ. ಇನ್ನು3501  ವೇರಿಯೆಂಟ್ ಸ್ಕೂಟರ್ ಬೆಲೆ 1.27 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು 3503 ವೇರಿಯೆಂಟ್ ಸ್ಕೂಟರ್ ಬೆಲೆ ಬಹಿರಂಗವಾಗಿಲ್ಲ.
 

click me!

Recommended Stories