ಇನ್ಮುಂದೆ ಸಿಗಲ್ಲ ಬಜಾಜ್‌ನ ಈ ಜನಪ್ರಿಯ 3 ಬೈಕ್, ಉತ್ಪಾದನೆ ಸ್ಥಗಿತಗೊಳಿಸಿದ ಕಂಪನಿ!

Published : Jan 03, 2025, 05:59 PM ISTUpdated : Jan 03, 2025, 06:32 PM IST

ಬಜಾಜ್ ಪಲ್ಸರ್ ಬೈಕ್‌ನ ಒಂದು ಮಾಡೆಲ್, ಇನ್ನೆರಡು ಬೈಕ್ ಸೇರಿದಂತೆ ಒಟ್ಟು 3 ಬೈಕ್ ಉತ್ಪಾದನೆಯನ್ನು ಬಜಾಜ್ ಸ್ಥಗಿತಗೊಳಿಸಿದೆ. ಈ ಮೂರು ಬೈಕ್‌ಗಳು ಇನ್ನು ಸಿಗುವುದಿಲ್ಲ. ಬಜಾಜ್ ಗುಡ್ ಬೈ ಹೇಳಿದ ಜನಪ್ರಿಯ ಬೈಕ್ ಯಾವುದು? ಸ್ಥಗಿತಕ್ಕೆ ಕಾರಣವೇನು? 

PREV
16
ಇನ್ಮುಂದೆ ಸಿಗಲ್ಲ ಬಜಾಜ್‌ನ ಈ ಜನಪ್ರಿಯ 3 ಬೈಕ್, ಉತ್ಪಾದನೆ ಸ್ಥಗಿತಗೊಳಿಸಿದ ಕಂಪನಿ!

ಬಜಾಜ್ ಭಾರತದಲ್ಲಿ ಅತ್ಯಂತ ಜನಪ್ರಿಯ ದ್ವಿಚಕ್ರವಾಹನ ಬ್ರ್ಯಾಂಡ್. ಭಾರತದಲ್ಲಿ ಮಾತ್ರವಲ್ಲ, ಹಲವು ದೇಶಗಳಿಗೆ ಬಜಾಜ್ ಬೈಕ್ ರಫ್ತು ಮಾಡಲಾಗುತ್ತಿದೆ. ದ್ವಿಚಕ್ರವಾಹನದಲ್ಲಿ ಅದರಲ್ಲೂ ಬೈಕ್ ಮಾಡೆಲ್‌ಗಳಲ್ಲಿ ಬಜಾಜ್ ಹಲವರ ನೆಚ್ಚಿನ ಬ್ರ್ಯಾಂಡ್, ಯುವಕರು,ವಯಸ್ಕರು, ಹಿರಿಯರು ಸೇರಿದಂತೆ ಎಲ್ಲರಿಗೂ ಸೂಕ್ತವಾಗುವ ಬೈಕ್ ಆಯ್ಕೆಗಳು ಬಜಾಜ್‌ನಲ್ಲಿದೆ. ಪ್ರಮುಖವಾಗಿ ಸ್ಪೋರ್ಟ್ಸ್ ಲುಕ್ ಹಲವರನ್ನು ಆಕರ್ಷಿಸಿದೆ. ಇದೀಗ ಬಜಾಜ್ ನಿರ್ಧಾರ ಹಲವರನ್ನು ಅಚ್ಚರಿಗೊಳಿಸಿದೆ.

26
Pulsar NS160 and NS200

ಬಜಾಜ್ ಇದೀಗ ತನ್ನ ಜನಪ್ರಿಯ ಮೂರು ಬೈಕ್‌ಗಳ ಉತ್ಪಾದನೆಯನ್ನು ನಿಲ್ಲಿಸಿದೆ. ಇನ್ಮುಂದೆ ಈ ಬೈಕ್ ಹೊಸದಾಗಿ ಖರೀದಿಸಲು ಲಭ್ಯವಿಲ್ಲ. ಕೇವಲ ಬಳಸಿದ ಬೈಕ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿರುವ ಸಾಧ್ಯತೆ ಇದೆ. ಅಷ್ಟಕ್ಕೂ ಬಜಾಜ್ ಸ್ಥಗಿತಗೊಳಿಸಿದ ಈ ಬೈಕ್ ಯಾವುದು? ಇದಕ್ಕೆ ಕಾರಣವೇನು?
 

36

ಬಜಾಜ್ ಪಲ್ಸರ್ ಎಫ್250
ಬಜಾಜ್ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಮಾಡೆಲ್ ಪಲ್ಸರ್. ಪಲ್ಸರ್‌ನಲ್ಲಿ ಹಲವು ಮಾಡೆಲ್‌ಗಳಿವೆ. 150 ಸಿಸಿಯಿಂದ ಹಿಡಿದು ಬೇರೆ ಬೇರೆ ಎಂಜಿನ್, ಮಾಡೆಲ್, ಸ್ಪೋರ್ಟ್ಸ್ ಲುಕ್ ಬೈಕ್‌ಗಳು ಲಭ್ಯವಿದೆ. ಈ ಪೈಕಿ ಬಜಾಜ್ ಪಲ್ಸರ್ ಎಫ್250 ಬೈಕ್ ಕೂಡ ಒಂದು. ಪಲ್ಸರ್ ಎಫ್250 ಬೈಕ್ ಇದೀಗ ಸ್ಥಗಿತಗೊಳಿಸಲಾಗಿದೆ. 

46

ಬಜಾಜ್ ಪಲ್ಸರ್ ಎಫ್250 ಬೈಕ್ ಬೇಡಿಕೆ ಅತೀ ಕಡಿಮೆಯಾಗಿದೆ. ಇದರ ಅಪ್‌ಡೇಟ್ ವರ್ಶನ್ ಬೈಕ್‌ಗಳು ಲಭ್ಯವಿರುವ ಕಾರಣ ಬಜಾಜ್ ಪಲ್ಸರ್ ಎಫ್250 ಬೈಕ್ ಬೇಡಿಕೆ ಇಲ್ಲದಾಗಿದೆ. 249 cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಈ ಬೈಕ್ ಮಾರಾಟದಲ್ಲಿ ಭಾರಿ ಕುಸಿತ ಕಂಡಿರುವ ಕಾರಣ ಈ ಬೈಕ್ ಸ್ಥಗಿತಗೊಳಿಸಲಾಗಿದೆ. 

56

ಬಜಾಜ್ ಪ್ಲಾಟಿನ 110 ಎಬಿಎಸ್
ಬಜಾಜ್ ಉತ್ಪಾದನೆ ಸ್ಥಗಿತಗೊಳಿಸಿದ 2ನೇ ಬೈಕ್ ಬಜಾಜ್ ಪ್ಲಾಟಿನಾ 110 ಎಬಿಎಸ್. ವಿಶೇಷವಾಗಿ ಅತೀ ಕಡಿಮೆ ಬೆಲೆಯ ಬೈಕ್ ಇದಾಗಿದೆ. ಮತ್ತೊಂದು ಗಮನಿಸಬೇಕಾದ ಅಂಶ ಎಂದರೆ ಪ್ಲಾಟಿನಾ ಬೈಕ್ ಮೇಲೇಜ್ 80ಕ್ಕೂ ಅಧಿಕ. ಹೀಗಾಗಿ ಹಲವರು ಪ್ಲಾಟಿನಾ ಬೈಕ್ ಖರೀದಿ ಮಾಡುತ್ತಿದ್ದರು. ಆದರೆ ಇದೀಗ ಪ್ಲಾಟಿನಾ 110 ಎಬಿಎಸ್ ಬೈಕ್ ಬೈಕ್ ಮಾರಾಟದಲ್ಲಿ ಕುಸಿತ ಕಂಡಿದೆ. ಹೀಗಾಗಿ ಸ್ಛಗಿತಗೊಳಿಸಲಾಗಿದೆ.

66

ಬಜಾಜ್ CT125X 
ಬಜಾಜ್ ಜನಪ್ರಿಯ ಬೈಕ್ ಪೈಕಿ CT125X  ಕೂಡ ಒಂದಾಗಿದೆ. ಆದರೆ ಬಜಾಜ್ ನಿರೀಕ್ಷಿದಷ್ಟು ಮಾರಾಟ ಕಂಡಿಲ್ಲ. ಪ್ರತಿ ತಿಂಗಳು ಇದರ ಮಾರಾಟ ಕುಸಿತ ಕಾಣುತ್ತಲೇ ಹೋಗಿದೆ. 124.4 ಸಿಸಿ ಎಂಜಿನ್ ಹೊಂದಿರುವ ಸಿಂಗಲ್ ಸಿಲಿಂಡರ್ ಬೈಕ್ 10bhp ಪವರ್ ಹಾಗೂ 11 Nm ಪೀಕ್ ಟ್ರಾಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಇದರ ಆರಂಭಿಕ ಬೆಲೆ 71,354 ರೂಪಾಯಿ(ಎಕ್ಸ್ ಶೋ ರೂಂ). ಇದೀಗ ಈ ಬೈಕ್ ಕೂಡ ಸ್ಥಗಿತಗೊಂಡಿದೆ.

Read more Photos on
click me!

Recommended Stories