ಬೆಂಗಳೂರಿನ ಸಿಗ್ನಲ್ ಇನ್ನು ಎಷ್ಟು ಹೊತ್ತಿದೆ? ಈಗ ಸ್ವದೇಶಿ ನ್ಯಾವಿಗೇಶನ್ ಆ್ಯಪ್ ಮ್ಯಾಪಲ್ಸ್‌ನಲ್ಲಿ ಲಭ್ಯ, ಗೂಗಲ್ ಮ್ಯಾಪ್‌ಗೆ ಪ್ರತಿಸ್ಪರ್ಧಿಯಾಗಿರುವ ಭಾರತದ ಮ್ಯಾಪಲ್ಸ್ ಬೆಂಗಳೂರಿನ ಪ್ರತಿ ಸಿಗ್ನಲ್ ಬಿದ್ದಿದೆಯಾ, ತೆರೆದಿದಾಯ ಎಲ್ಲಾ ಮಾಹಿತಿ ನೀಡುತ್ತೆ.
ಸ್ವಾವಲಂಬನೆ ಭಾರತ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಗೂಗಲ್ ಮ್ಯಾಪ್‌ಗೆ ಪ್ರತಿಯಾಗಿ ಭಾರತದಲ್ಲೇ ಅಭಿವೃದ್ಧಿಯಾಗ ಸ್ವದೇಶಿ ಮ್ಯಾಪಲ್ಸ್ ಆ್ಯಪ್ ಭಾರಿ ಸಂಚಲನ ಸೃಷ್ಟಿಸಿದೆ. ಇದು ಗೂಗಲ್ ಮ್ಯಾಪ್ ರೀತಿ ಕೇವಲ ನ್ಯಾವಿಗೇಶನ್ ಮಾತ್ರವಲ್ಲ, ರಸ್ತೆಯ ಪ್ರತಿ ಮಾಹಿತಿಯನ್ನು ಸವಾರರಿಗೆ, ಪ್ರಯಾಣಿಕರಿಗೆ ನೀಡುತ್ತದೆ.
26
ಬೆಂಗಳೂರು ಸಿಗ್ನಲ್ ಗೆಸ್ ಮಾಡಬೇಕಿಲ್ಲ
ಬೆಂಗಳೂರಿನ ಟ್ರಾಫಿಕ್ ವಿಶ್ವದೆಲ್ಲೆಡೆ ಮನೆ ಮಾತಾಗಿದೆ. ಇಲ್ಲಿ ಪ್ರತಿ ಸಿಗ್ನಲ್‌ನಲ್ಲಿ ಕಾದು ಗುರಿ ತುಲುವಾಗ ಸುಸ್ತಾಗುತ್ತೆ. ಇದೀಗ ಸಿಗ್ನಿಲ್ ಇನ್ನು ಎಷ್ಟು ಹೊತ್ತು ಬಿದ್ದಿರುತ್ತದೆ, ಯಾವಾಗ ಗ್ರೀನ್ ಲೈಟ್ ಆನ್ ಆಗುತ್ತೆ ಎಂದು ಕಾಯಬೇಕಿಲ್ಲ, ಗೆಸ್ ಕೂಡ ಮಾಡಬೇಕಿಲ್ಲ. ಕಾರಣ ಸ್ವದೇಶಿ ನಿರ್ಮಿ ಮ್ಯಾಪಲ್ಸ್ ನ್ಯಾವಿಗೇಶನ್ ಆ್ಯಪಲ್‌ನಲ್ಲಿ ಲೈವ್ ಮಾಹಿತಿ ನೀಡಲಿದೆ.
36
ಬೆಂಗಳೂರು ಮೊದಲು
ಮ್ಯಾಪಲ್ಸ್ ಆ್ಯಪ್‌ನಲ್ಲಿ ಹಲವು ಫೀಚರ್ಸ್ ನೀಡಲಾಗಿದೆ. ಸಿಗ್ನಲ್ ರೆಡ್ ಆಗಿದ್ದರೆ ಇನ್ನು ಎಷ್ಟು ಸಮಯವಿದೆ, ಎಲ್ಲಿ ಟ್ರಾಫಿಕ್ ಹೆಚ್ಚಿದೆ, ನಿಖರ ಗುರಿ ತಲುಪಿಸುವ ತಂತ್ರಜ್ಞಾನ ಇದರಲ್ಲಿ ನೀಡಲಾಗಿದೆ. ಟ್ರಾಫಿಕ್ ಸಿಗ್ನಲ್ ಕುರಿತು ನ್ಯಾವಿಗೇಶನ್ ಮ್ಯಾಪ್ ಲೈವ್ ನೀಡುತ್ತಿರುವುದರಲ್ಲಿ ಬೆಂಗಳೂರು ಮೊದಲು.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಕಾರಿನಲ್ಲಿ ಮ್ಯಾಪಲ್ಸ್ ನ್ಯಾವಿಗೇಶನ್ ಆ್ಯಪ್ ಬಳಕೆ ಮಾಡುವ ಮೂಲಕ ಸ್ವದೇಶಿ ಅಭಿವೃದ್ಧಿಪಡಿಸಿದ ಮ್ಯಾಪಲ್ಸ್ ಬಳಕೆಗೆ ಉತ್ತೇಜನ ನೀಡಿದ್ದರು. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಶ್ವಿನಿ ವೈಷ್ಣವ್ ಮ್ಯಾಪಲ್ಸ್ ಬಳಕೆ ಮಾಡಿದ್ದರು. ಈ ಮೂಲಕ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದರು.
56
ಭಾರತೀಯ ರೈಲ್ವೇಯಲ್ಲಿ ಮ್ಯಾಪಲ್ಸ್ ಬಳಕೆಗೆ ತಯಾರಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಕಾರಿನಲ್ಲಿ ಮ್ಯಾಪಲ್ಸ್ ಆ್ಯಪ್ ಬಳಕೆ ಮಾಡಿ ಅಚ್ಚರಿಗೊಂಡಿದ್ದರ. ಇದರ ಬೆನ್ನಲ್ಲೇ ಭಾರತೀಯ ರೈಲ್ವೇಯಲ್ಲಿ ಮ್ಯಾಪಲ್ಸ್ ನ್ಯಾವಿಗೇಶನ್ ಆ್ಯಪ್ ಬಳಕೆಗೆ ತಯಾರಿಗಳು ನಡೆಯುತ್ತಿದೆ. ರೈಲ್ವೇಯಲ್ಲಿ ಇಂಟಿಗ್ರೇಟೆಡ್ ಸಿಸ್ಟಮ್ ಮೂಲಕ ಮ್ಯಾಪಲ್ಸ್ ಬಳಕೆಗೆ ಮುಂದಾಗಿದೆ.
66
ಸ್ವದೇಶಿ ನಿರ್ಮಿತ ಆ್ಯಪ್ ಸಂಚಲನ
ಭಾರತದಲ್ಲಿ ಇದೀಗ ಸ್ವದೇಶಿ ನಿರ್ಮಿತ ಆ್ಯಪ್‌ಗಳ ಬಳಕೆ ಹೆಚ್ಚಾಗುತ್ತಿದೆ. ಜಿಮೇಲ್‌ಗೆ ಪ್ರತಿಯಾಗಿ ಝೋಹೋ ಮೇಲ್, ವ್ಯಾಟ್ಸಾಪ್‌ಗೆ ಪ್ರತಿಯಾಗಿ ಅರಟೈ, ಗೂಗಲ್ ಮ್ಯಾಪ್‌ಗೆ ಪ್ರತಿಯಾಗಿ ಮ್ಯಾಪಲ್ಸ್ ಆ್ಯಪ್ ಸೇರಿದಂತೆ ಹಲವು ಸ್ವಾಲಂಬಿ ನಡೆಗಳು ಹೆಚ್ಚಾಗುತ್ತಿದೆ. ಈ ಮೂಲಕ ವಿದೇಶಗಳ ಅವಲಂಬನೆ ತಗ್ಗಿಸುವ ಪ್ರಯತ್ನಗಳು ತೀವ್ರಗೊಂಡಿದೆ.