'ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗೋ ಕನಸು ಕಾಣುತ್ತಿದ್ದಾರೆ'

By Web DeskFirst Published Oct 14, 2019, 1:32 PM IST
Highlights

ನೆರೆ ಪರಿಹಾರ ಕುರಿತು ಕೇವಲ ಬಾಯಿ ಚಪಲಕ್ಕಾಗಿ ಮಾತನಾಡುವ ರಾಜಕಾರಣಿಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದ ಸಚಿವ ಬಿ. ಶ್ರೀರಾಮುಲು| ಮಾಜಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀರಾಮುಲು| ಸರ್ಕಾರದ ಬಗ್ಗೆ ನೆಗೆಟಿವ್ ಮಾತನಾಡಬೇಕು ಮಾತನಾಡ್ತಾರೆ ಮಾತಾಡ್ಲಿಬೀಡಿ| ಪ್ರವಾಹ ಉಂಟಾದ ವೇಳೆ ನಮ್ಮ ಸರ್ಕಾರ ಏನು ಸ್ಪಂದಿಸಬೇಕು ಆ ತರನಾಗಿ ಸ್ಪಂದಿಸಿದೆ| ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಬಾಯಿ ಚಪಲಕ್ಕೆ ಮಾತನಾಡುತ್ತಾರೆ| ಸಿದ್ದರಾಮಯ್ಯ ಅವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಿದ್ದಾರೆ| 

ಗದಗ(ಅ.14): ನೆರೆ ಪರಿಹಾರ ಕುರಿತು ಕೇವಲ ಬಾಯಿ ಚಪಲಕ್ಕಾಗಿ ಮಾತನಾಡುವ ರಾಜಕಾರಣಿಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಸಚಿವ ಬಿ. ಶ್ರೀರಾಮುಲು ಅವರು ಮಾಜಿ  ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಇಂದು ನಗರದಲ್ಲಿ ಮಾತನಾಡಿದ ಅವರು, ಸರ್ಕಾರದ ಬಗ್ಗೆ ನೆಗೆಟಿವ್ ಮಾತನಾಡಬೇಕು ಮಾತನಾಡ್ತಾರೆ ಮಾತಾಡ್ಲಿಬೀಡಿ, ಪ್ರವಾಹ ಉಂಟಾದ ವೇಳೆ ನಮ್ಮ ಸರ್ಕಾರ ಏನು ಸ್ಪಂದಿಸಬೇಕು ಆ ತರನಾಗಿ ಸ್ಪಂದಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಬಾಯಿ ಚಪಲಕ್ಕೆ ಮಾತನಾಡುತ್ತಾರೆ, ಸಿದ್ದರಾಮಯ್ಯ ಅವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶ್ರೀರಾಮಲುಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡೋ ವಿಚಾರಕ್ಕೆ ಸಂಬಂಧದ ಪ್ರಶ್ನೆ ಕೇಳಿದ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮಲು ಅವರು, ಈ ಬಗ್ಗೆ ನಾನು ಏನು ಹೇಳಲ್ಲಾ ಬಿಜೆಪಿ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತೊ ಅದಕ್ಕೆ ಬದ್ಧನಾಗಿರುತ್ತೇನೆ, ದೇವರು ಕರುಣಿಸಿದಾಗ ಡಿಸಿಎಂ ಸ್ಥಾನ ಸಿಕ್ಕೆ ಸಿಗುತ್ತೆ, ಮುಂದೆ ಒಳ್ಳೆ ಅವಕಾಶ ಸಿಗಬಹುದು ಕಾದು ನೋಡೋಣ ಎಂದು ಹೇಳಿದ್ದಾರೆ. 

ಉಪ ಚುನಾವಣೆಯಲ್ಲಿ 15 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು

ಉಪ ಚುನಾವಣೆಯಲ್ಲಿ ನಾವು 15 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಅನರ್ಹರಿಗೆ ಟಿಕೆಟ್ ನೀಡುವ ವಿಚಾರ ನಮ್ಮ ಪಕ್ಷದ ಹಿರಿಯರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ. 

ಬೈ ಎಎಲೆಕ್ಷನ್ ಬಳಿಕ ಸರ್ಕಾರ ಬೀಳುತ್ತೆ 

ಬೈ ಎಲೆಕ್ಷನ್ ಬಳಿಕ ಸರ್ಕಾರ ಬಿಳುತ್ತೆ ಅಂತ ವಿರೋಧ ಪಕ್ಷದ ಹೇಳಿಕೆ ನೀಡತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನಿಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು ಅವರು, ಕೆಲ ನಾಯಕರು ಗಿಣಿ ಶಾಸ್ತ್ರ ಪಂಚಾಂಗ ಹೇಳೋ ಕೆಲಸ ಮಾಡುತ್ತಿದ್ದಾರೆ, ಸರ್ಕಾರ ಬೀಳುತ್ತೋ ಬಿಡುತ್ತೋ ಅದು ಗಿಣಿಶಾಸ್ತ್ರ ಹೆಳೋ ಅವರ ಕೈಯಲ್ಲಿ ಇಲ್ಲಾ ಎಂದು ಹೇಳಿದ್ದಾರೆ.
 

click me!