ವಿದೇಶಿ ಧಾನ್ಯಗಳಿಗೇಕೆ ಮಾಡುವಿರಿ ಹಣ ವೇಸ್ಟ್? ಸ್ಥಳೀಯ ಧಾನ್ಯಗಳೇ ಬೆಸ್ಟ್

Suvarna News   | Asianet News
Published : Mar 05, 2020, 10:08 AM ISTUpdated : Mar 05, 2020, 10:21 AM IST
ವಿದೇಶಿ ಧಾನ್ಯಗಳಿಗೇಕೆ ಮಾಡುವಿರಿ ಹಣ ವೇಸ್ಟ್? ಸ್ಥಳೀಯ ಧಾನ್ಯಗಳೇ ಬೆಸ್ಟ್

ಸಾರಾಂಶ

ನಮ್ಮ ಸ್ಥಳೀಯ ಧಾನ್ಯಗಳೇ ಆರೋಗ್ಯದ ಕಣಜವಾಗಿರುವಾಗ ಚಿಯಾದಂಥ ಫಾರಿನ್ ಸೀಡ್‌ಗಳನ್ನು ದುಬಾರಿ ದರ ತೆತ್ತು ಆಮದು ಮಾಡಿಕೊಳ್ಳುವ ಅಗತ್ಯವಾದರೂ ಏನಿದೆ? ಅದರಲ್ಲಿಯೂ ಭಾರತದಲ್ಲಿ ನಮ್ಮ ಪೂರ್ವಿಕರ ನಮ್ಮ ಭೌಗೋಳಿಕ ಸನ್ನಿವೇಷ, ಆಚಾರ, ವಿಚಾರ, ಆರೋಗ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಆಹಾರ ಪದ್ಧತಿಯನ್ನು ಜಾರಿಗೆ ತಂದಿದ್ದು, ಅದೇ ನಮಗೆ ಒಳ್ಳೆಯದು...

ಧಾನ್ಯ ಹಾಗೂ ಬೀಜಗಳು ನೋಡಲು ಪುಟ್ ಪುಟಾಣಿಯಾದರೂ, ಪೋಷಕಸತ್ವಗಳ ಪವರ್ಹೌಸ್‌ಗಳು. ಸರ್ಕ್ಯುಲೇಶನ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಂತೆ ಎಲ್ಲ ಬೀಜಗಳಲ್ಲೂ ವಿಟಮಿನ್ಸ್, ಮಿನರಲ್ಸ್, ಫೈಟೋನ್ಯೂಟ್ರಿಯೆಂಟ್ಸ್ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿರುತ್ತವೆ. ಇವು ಹೃದಯದ ಸಮಸ್ಯೆಗಳು, ಡಯಾಬಿಟೀಸ್ ಹಾಗೂ ಹೈ ಬಿಪಿಯನ್ನು ದೂರವಿಡಲು ಸಹಾಯಕ. ಅಂದರೆ, ನಿಮ್ಮ ಆರೋಗ್ಯಕ್ಕಾಗಿ ನೀವು ಮಾಡಬಹುದಾದ ಒಂದು ಉತ್ತಮ ಕೆಲಸ ಎಂದರೆ ಪ್ರತಿದಿನ ಕೆಲ ಬೀಜಗಳನ್ನು ತಿನ್ನುವುದು. ಈ ಸಂದರ್ಭದಲ್ಲಿ ನೀವು ನೆನಪಿಡಬೇಕಾದುದೆಂದರೆ ಎಲ್ಲ ಬೀಜಗಳಲ್ಲೂ ಸಮಾನ ಪೌಷ್ಠಿಕಾಂಶಗಳಿರುತ್ತವೆ ಎಂಬುದು. ಹಾಗಿದ್ದರೂ ಭಾರತದಲ್ಲಿ ಕೆಲ ಬೀಜಗಳು ಸಿಕ್ಕಾಪಟ್ಟೆ ದುಬಾರಿಯಾಗಿದ್ದು ಜನಪ್ರಿಯತೆ ಗಳಿಸಿವೆ. ಅದಕ್ಕೆ ಒಂದೇ ಕಾರಣ ಎಂದರೆ ಅವು ವಿದೇಶದಿಂದ ಆಮದಾದವು ಎಂಬುದು.

ಅಯ್ಯೋ ತೂಕ ಇಳಿಸಿಕೊಳ್ಳಲು ಹೋಗಿ ವೀಕ್ ಆಗ್ತಾ ಇದೀರಾ? ಹೀಗ್ ತಿನ್ನಿ...

ವಿದೇಶದ್ದೆಲ್ಲ ಬೆಸ್ಟ್, ಸ್ಥಳೀಯವಾಗಿರುವುದೆಲ್ಲ ವರ್ಸ್ಟ್ ಎಂಬ ಕೆಟ್ಟ ನಂಬಿಕೆಯೊಂದು ಬಹುತೇಕ ಭಾರತೀಯರಲ್ಲಿದೆ. ಅದಕ್ಕೊಂದು ಉದಾಹರಣೆ ಎಂದರೆ ಚಿಯಾ ಸೀಡ್ಸ್. ಇದು ಮಧ್ಯ ಅಮೆರಿಕ ಭಾಗದಿಂದ ಇಲ್ಲಿಗೆ ಆಮದಾಗುವುದರಿಂದ ಬೆಲೆ ಬಲು ದುಬಾರಿ. ಆದರೆ, ಅದು ದುಬಾರಿ ಎಂಬ ಕಾರಣಕ್ಕೇ ಅದು ಉಳಿದೆಲ್ಲ ಬೀಜಗಳಿಗಿಂತ ಅತಿ ಹೆಚ್ಚು ಪೌಷ್ಠಿಕ ಸತ್ವ ಹೊಂದಿದೆ ಎಂದು ಜನರು ಕುರುಡಾಗಿ ನಂಬುವುದರಿಂದ ಈ ಬೀಜಗಳು ಈಗ ಹೋಟೆಲ್ ಮೆನುವಿನಲ್ಲೂ ಸ್ಥಾನ ಪಡೆಯುತ್ತಿವೆ. ಆದರೆ, ನಮ್ಮ ಸ್ಥಳೀಯ ಧಾನ್ಯಗಳೇ ಆರೋಗ್ಯದ ಕಣಜವಾಗಿರುವಾಗ ಚಿಯಾದಂಥ ಫಾರಿನ್ ಸೀಡ್‌ಗಳನ್ನು ದುಬಾರಿ ದರ ತೆತ್ತು ಕೊಳ್ಳುವ ಅಗತ್ಯವಾದರೂ ಏನಿದೆ? ಈ ಕೆಳಗಿನ ಕೆಲ ಸ್ಥಳೀಯವಾಗಿ ಬೆಳೆವ ಬೀಜಗಳು ಚಿಯಾ ಸೀಡ್ಸ್‌ನಷ್ಟೇ ಆರೋಗ್ಯಕಾರಿ. ಅಲ್ಲದೆ, ಸ್ಥಳೀಯ ಹವಾಮಾನದಲ್ಲಿ ಬೆಳೆವ ಧಾನ್ಯ ಬೀಜ, ತರಕಾರಿಗಳು ನಮ್ಮ ಜೀನ್ಸ್ ಹಾಗೂ ಮೆಟಾಬಾಲಿಸಂಗೆ ಹೆಚ್ಚು ಒಗ್ಗುತ್ತದೆಯಾದ್ದರಿಂದ ಅವುಗಳ ಲಾಭ ದೇಹಕ್ಕೆ ಹೆಚ್ಚು ಸಿಗುತ್ತದೆ. ಹಾಗಾಗಿ, ಇನ್ನು ನಿಮ್ಮ ಡಯಟ್‌ನಲ್ಲಿ ಆದಷ್ಟು ಸ್ಥಳೀಯವಾದ ಈ ಧಾನ್ಯಗಳನ್ನು ಸೇರಿಸಿಕೊಳ್ಳಿ. 

ಫ್ಲ್ಯಾಕ್ಸ್ ಸೀಡ್ಸ್
ಫ್ಲ್ಯಾಕ್ಸ್ ಸೀಡ್ಸ್ ಎಂದರೆ ಅಗಸೆ ಬೀಜ ಫೈಬರ್ ಹಾಗೂ ಒಮೆಗಾ 3 ಫ್ಯಾಟಿ ಆ್ಯಸಿಡ್‌ಗಳ ಕಣಜ. ಇದರೊಂದಿಗೆ ಪೊಟ್ಯಾಶಿಯಂ, ಮೆಗ್ನೀಶಿಯಂ, ಐರನ್ ಹಾಗೂ ಕ್ಯಾಲ್ಶಿಯಂಗಳು ಬೋನಸ್. 

'ಕೊತ್ತಂಬರಿಯನ್ನು ದ್ವೇಷಿಸುವವರ' ಫೇಸ್ಬುಕ್ ಪೇಜ್‌ಗೆ 248K ಫಾಲೋವರ್ಸ್ !...

ಸೂರ್ಯಕಾಂತಿ ಬೀಜಗಳು
ಪಾಲಿಅನ್‌ಸ್ಯಾಚುರೇಟೆಡ್ ಹಾಗೂ ಮೋನೋಸ್ಯಾಚುರೇಟೆಡ್ ಫ್ಯಾಟ್‌ಗಳಿಂದ ಶ್ರೀಮಂತವಾಗಿರುವ ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಬಿ3, ಬಿ5, ಬಿ6,ಇ ಹಾಗೂ ಫೋಲೇಟ್‌ಗಳೂ ಇವೆ. ಇದರೊಂದಿಗೆ ಸ್ವಲ್ಪ ಮಟ್ಟಿನ ಪ್ರೋಟೀನ್, ಐರನ್, ಮೆಗ್ನೀಶಿಯಂ, ಕಾಪರ್, ಝಿಂಕ್, ಮ್ಯಾಂಗನೀಸ್ ಹಾಗೂ ಸೆಲೆನಿಯಂಗಳು ಕೂಡಾ ಲಭ್ಯವಾಗುತ್ತವೆ. 

ಕುಂಬಳಕಾಯಿ ಬೀಜ
ಕುಂಬಳಕಾಯಿ ಬೀಜಗಳು ಪ್ರೋಟೀನ್ ಹಾಗೂ ಹೆಲ್ದೀ ಫ್ಯಾಟ್‌ಗಳಿಂದ ತುಂಬಿತುಳುಕುತ್ತಿರುತ್ತವೆ. ಇದರೊಂದಿಗೆ ಅಪರೂಪದ ಮಿನರಲ್ಸ್‌ಗಳು, ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲ ಕೆರೋಟೆನಾಯ್ಡ್ಸ್‌‌ನಂಥ ಆ್ಯಂಟಿ ಆಕ್ಸಿಡೆಂಟ್‌ಗಳೂ ಇದರಲ್ಲಿವೆ. 

ಎಳ್ಳು
ಕಪ್ಪು ಹಾಗೂ ಬಿಳಿ ಎಳ್ಳುಗಳೆರಡರಲ್ಲೂ ಪ್ರೋಟೀನ್, ಪೈಬರ್ ಹಾಗೂ ವಿಟಮಿನ್ ಬಿ6ಗೆ ಕೊರತೆಯಿಲ್ಲ. ಇದರೊಂದಿಗೆ ಕ್ಯಾಲ್ಶಿಯಂ, ಐರನ್, ಮೆಗ್ನೀಶಿಯಂ, ಪಾಸ್ಪರಸ್ ಇದರಲ್ಲಿ ಹೇರಳವಾಗಿದ್ದು, ಮೂಳೆಗಳ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು.

ಸೋಂಪು
ಸೋಂಪಿನ ಕಾಳುಗಳು ಅತ್ಯುತ್ತಮ ಮೌತ್ ಪ್ರೆಶನರ್ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಇದು ಫೈಬರ್, ವಿಟಮಿನ್ ಸಿ, ಕ್ಯಾಲ್ಶಿಯಂ, ಐರನ್, ಮ್ಯಾಂಗನೀಸ್, ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂಗಳನ್ನೂ ಅಧಿಕವಾಗಿ ಹೊಂದಿದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲದ ವಿಚಾರ. ಇದರೊಂದಿಗೆ ಆ್ಯಂಟಿ ಆಕ್ಸಿಡೆಂಟ್‌ಗಳು ಕೂಡಾ ಸೋಂಪಿನಲ್ಲಿ ಬಹಳಷ್ಟಿರುತ್ತದೆ.  

ಓಮಿನ ಕಾಳುಗಳು
ಹೊಟ್ಟೆ ಕೆಟ್ಟಾಗ ನಿಮ್ಮ ತಾಯಿ ಸ್ವಲ್ಪ ಓಮಿನ ಕಾಳನ್ನು ಅಗಿಯಲು ಹೇಳುವುದು ನಿಮಗೆ ಗೊತ್ತಿರಬಹುದು. ಆದರೆ ಪ್ರತಿ ದಿನ 1 ಚಮಚದಷ್ಟು ಓಮಿನ ಕಾಳನ್ನು ಸೇವಿಸುವ ಅಭ್ಯಾಸದಿಂದ ನಮ್ಮ ದೇಹಕ್ಕೆ ಹೆಚ್ಚಿನ ಪ್ರಯೋಜನಗಳಿವೆ. ಏಕೆಂದರೆ ಇವು ಫೈಬರ್, ಪ್ರೋಟೀನ್, ಕ್ಯಾಲ್ಶಿಯಂ, ಥೈಮಿನ್, ಐರನ್ ಮುಂತಾದ ಪೌಷ್ಠಿಕಸತ್ವಗಳ ಜೊತೆಗೆ ಇದರಲ್ಲಿ ಆ್ಯಂಟಿಫಂಗಲ್, ಆ್ಯಂಟಿಬ್ಯಾಕ್ಟೀರಿಯಲ್ ಹಾಗೂ ಆ್ಯಂಟಿ ಇನ್ಫ್ಲಮೇಟರಿ ಗುಣಗಳು ಇವೆ.

ಇವೆಲ್ಲವುಗಳ ಜೊತೆಗೆ ಪ್ರತಿನಿತ್ಯ ತಾವರೆ ಬೀಜಗಳು, ಗಸಗಸೆ, ಕಲ್ಲಂಗಡಿ ಹಣ್ಣಿನ ಬೀಜಗಳು, ದಾಳಿಂಬೆ ಬೀಜಗಳು ಕೂಡಾ ದೇಹದ ಪೌಷ್ಠಿಕ ಅಗತ್ಯಗಳನ್ನು ಕೊರತೆ ಬಾರದಂತೆ ಈಡೇರಿಸುತ್ತವೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?