ಕರ್ನಾಟಕ, ತಮಿಳುನಾಡು, ಕೇರಳ- ಹೀಗೆ ದಕ್ಷಿಣ ಭಾರತದ ಯಾವ ರಾಜ್ಯಕ್ಕೆ ಯಾವ ಊರಿಗೆ ಹೋದರೂ ಬಹಳ ಸುಲಭವಾಗಿ ಸಿಗುವ ತಿಂಡಿಯೆಂದರೆ ಇಡ್ಲಿ. ಅದಕ್ಕೆ ಸೂಪರ್ ಕಾಂಬಿನೇಶನ್ ಎಂದರೆ ವಡೆ. ಇಡ್ಲಿಯ ವೆರೈಟಿಗಳು ಹಲವಾರು. ಬರೀ ಬಗೆಬಗೆಯ ಇಡ್ಲಿ ತಿಂದೇ ಜೀವನ ಸವೆಸಬಹುದು.
ಬೆಂಗಳೂರಿನಿಂದ ಅತ್ತ ಮೈಸೂರು ಕಡೆ ಹೊರಟವರು ಒಮ್ಮೆ ಬಿಡದಿಯಲ್ಲಿ ನಿಲ್ಲಿಸಿ ಅಲ್ಲಿರೋ ಅಸಂಖ್ಯ ಹೋಟೆಲ್‌ಗಳಲ್ಲಿ ಒಮ್ಮೆ ತಟ್ಟೆ ಇಡ್ಲಿ ತಿನ್ನದೆ ಹೋಗೋದೇ ಇಲ್ಲ. ಇತ್ತ ತುಮಕೂರು ಕಡೆ ಹೋಗೋರೂ ಅಲ್ಲಿನ ಹೋಟೆಲ್‌ಗಳಲ್ಲಿ ಹುಡುಕಿಕೊಂಡು ಹೋಗಿ ಇಡ್ಲಿ ಸೇವಿಸಿಯೇ ಮುಂದುವರಿಯೋದು. ಬೆಂಗಳೂರಿನಲ್ಲಿ ತಟ್ಟೆ ಇಡ್ಲಿ ಫೇಮಸ್ಸು. ಮೈಸೂರಿನಲ್ಲಿ ಅದು ಮಲ್ಲಿಗೆಯಷ್ಟೇ ಮಿದುವಾದ ಮಲ್ಲಿಗೆ ಇಡ್ಲಿ. ಮಂಗಳೂರು, ಉಡುಪಿ ಕಡೆಗೆ ಹೋದರೆ ಅಲ್ಲಿನ ಉಡುಪಿ ಬ್ರಾಹ್ಮಣರ ಹೋಟೆಲ್‌ನಲ್ಲಿ ಇಡ್ಲಿ- ವಡಾ ಸೇವಿಸದೆ ಹೋದವರ ಜೀವನ ವ್ಯರ್ಥ. ಬೆಳ್ಳಂಬೆಳಗ್ಗೆ ಹೋಟೆಲ್‌ಗೆ ಹೋಗಿ ಕಾಫಿ ಕೇಳಿದರೆ ಆತ ಇಲ್ಲವೆನ್ನಬಹುದು; ಆದರೆ ಇಡ್ಲಿ ಕೇಳಿದರೆ ಈಗಷ್ಟೇ ಹಿಟ್ಟು ಸುರಿದು ಬೇಯಿಸಿದ ಇಡ್ಲಿ ಹಬೆ ಪಾತ್ರೆಯಿಂದ ತಟ್ಟೆಗಿಳಿದು ನಿಮ್ಮ ಮುಂದೆ ಕೂರುತ್ತದೆ. ಕರ್ನಾಟಕ, ತಮಿಳುನಾಡು, ಕೇರಳ- ಹೀಗೆ ದಕ್ಷಿಣ ಭಾರತದ ಯಾವ ರಾಜ್ಯಕ್ಕೆ ಯಾವ ಊರಿಗೆ ಹೋದರೂ ಬಹಳ ಸುಲಭವಾಗಿ ಸಿಗುವ ತಿಂಡಿಯೆಂದರೆ ಇಡ್ಲಿ. ಅದಕ್ಕೆ ಸೂಪರ್ ಕಾಂಬಿನೇಶನ್ ಎಂದರೆ ವಡೆ.
ಇಡ್ಲಿಯ ವೆರೈಟಿಗಳು ಹಲವಾರು. ಬರೀ ಬಗೆಬಗೆಯ ಇಡ್ಲಿ ತಿಂದೇ ಜೀವನ ಸವೆಸಬಹುದು. ಮಾಮೂಲಿ ಇಡ್ಲಿ, ಉದುರುದುರು ಇಡ್ಲಿ, ಗಟ್ಟಿ ಇಡ್ಲಿ, ಬಟ್ಟಲಿನಲ್ಲಿ ಎರೆದು ಕೊಡುವ ಅಗಲ ಇಡ್ಲಿ, ಬಿಡದಿಯ ತಟ್ಟೆ ಇಡ್ಲಿ, ನವುರಾದ ಮಲ್ಲಿಗೆ ಇಡ್ಲಿ, ಸಾಂಬಾರಿನಲ್ಲಿ ಮುಳುಗಿಸಿ ಕೊಡುವ ಪುಟಾಣಿ ತಿರುಪತಿ ಇಡ್ಲಿ, ಹಲಸಿನ ಎಲೆಯಲ್ಲಿ ಹಿಟ್ಟು ಎರೆದು ಹಬೆಯಲ್ಲಿ ಬೇಯಿಸಿ ಬಡಿಸುವ ಘಮ್ಮೆನ್ನುವ ಮೂಡೆ, ಬಾಳೆ ಎಲೆಯಲ್ಲಿ ಹಿಟ್ಟು ಹಾಕಿ ಬೇಯಿಸುವ ರುಚಿರುಚಿಯಾದ ಕೊಟ್ಟಿಗೆ, ಬೆಲ್ಲ ಹಾಕಿ ಮಾಡುವ ಸ್ವೀಟ್ ಇಡ್ಲಿ, ಹಲಸಿನ ಹಣ್ಣಿನ ಕಾಲದಲ್ಲಿ ಮಾಡುವ ಹಲಸಿನ ಹಣ್ಣಿನ ಇಡ್ಲಿ, ರಾಗಿ ಇಡ್ಲಿ, ರವೆಯಲ್ಲಿ ಮಾಡುವ ರವಾ ಇಡ್ಲಿ, ಕಾಂಚೀಪುರಂ ಇಡ್ಲಿ, ವೆಜಿಟೇಬಲ್ ಇಡ್ಲಿ, ಸ್ಟಫ್‌ಡ್ ಇಡ್ಲಿ, ಖಾರಾ ಇಡ್ಲಿ, ಮಸಾಲೆ ಇಡ್ಲಿ, ಸೌತೆಕಾಯಿ ಇಡ್ಲಿ- ಹೀಗೆ ನೂರಾರು ವೆರೈಟಿಗಳು. ದಕ್ಷಿಣ ಭಾರತೀಯರ ಇಡ್ಲಿ ಪ್ರಿಯತೆಯನ್ನು ಕಂಡು ಉತ್ತರ ಭಾರತದ ಹೋಟೆಲ್‌ಗಳಲ್ಲೂ ಇವುಗಳನ್ನು ಮಾಡುತ್ತಾರೆ. ಅಲ್ಲೂ ಈಗ ಮಸಾಲೆ ದೋಸೆ ಮತ್ತು ಇಡ್ಲಿಗಳು ಕಾಯಂ. ಆದರೆ ನಮ್ಮ ಉಡುಪಿ ಭಟ್ಟರಂತೆ ತಮಿಳುನಾಡಿನವರಂತೆ ಇಡ್ಲಿ ಮಾಡಲು ಅವರ್ಯಾರಿಗೂ ಬರೋಲ್ಲ.
ನಿಮಗೆ ಅಶ್ಯರ್ಯ ಆಗಬಹುದು. ನಾವೆಲ್ಲ ಇಷ್ಟೊಂದು ಸೇವಿಸುವ ಇಡ್ಲಿಯ ಮೂಲ ಭಾರತ ಅಲ್ಲ!
ಆಹಾರ ತಜ್ಞ ಕೆ.ಟಿ. ಆಚಾರ್ಯ ಅವರು ಹೇಳುವ ಹಾಗೆ ಬಹುಶಃ ಇಡ್ಲಿ ಭಾರತಕ್ಕೆ ಬಂದದ್ದು ಇಂಡೋನೇಶ್ಯಾದಿಂದ. ಸುಮಾರು ೮೦೦- ೧೨೦೦ನೇ ಶತಮಾನದಲ್ಲಿ ಅದು ಇಲ್ಲಿಗೆ ಬಂದಿರಬಹುದು. ಆಗ ಆ ದೇಶವನ್ನು ಹಿಂದೂ ರಾಜರು ಆಳುತ್ತಿದ್ದರು, ಶೈಲೇಂದ್ರ, ಇಸಾಯನ ಹಾಗೂ ಸಂಜಯ ರಾಜವಂಶಗಳ ಕಾಲದಲ್ಲಿ ಅದು ಅಲ್ಲಿಂದ ಇಲ್ಲಿಗೆ ಬಂದಿರಬೇಕು. ಇಂಡೋನೇಶ್ಯಾದಲ್ಲಿ ಇದನ್ನು ಕೆಡ್ಲಿ ಎಂದು ಕರೆಯಲಾಗುತ್ತದೆ. ಕನ್ನಡ ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಎಂಬ ಕೃತಿಯಲ್ಲೂ ಇಡ್ಡಲಿಗೆ ಎಂಬ ತಿಂಡಿಯ ಉಲ್ಲೇಖ ಬರುತ್ತದೆ. ಸೋಮೇಶ್ವರ ಎಂಬಾತ ಬರೆದ ಮಾನಸೋಲ್ಲಾಸ ಎಂಬ ಸಂಸ್ಕೃತ ಕೃತಿಯಲ್ಲೂ ಇಡ್ಲಿಯ ಉಲ್ಲೇಖವಿದೆ. ಈ ಕೃತಿ 1130ನೇ ಇಸವಿಯದ್ದು, ಅದರಲ್ಲಿ ಇಡ್ಡರಿಕಾ ಎಂಬ ತಿಂಡಿಯ ರೆಸಿಪಿ ಕೊಡಲಾಗಿದೆ. ಆದರೆ ಈ ರೆಸಿಪಿಗಳಲ್ಲಿ ನಾವು ಈಗ ಮಾಡುವತೆ ಉದ್ದಿನ ಬೇಳೆಯ ಜೊತೆಗೆ ಅಕ್ಕಿ ಕಡಿಯ ಬಳಕೆ, ದೀಘ ಕಾಲ ಹುಳಿ ಬರಿಸುವಿಕೆ, ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡುವುದು ಈ ಮೂರು ಸಂಗತಿ ಮಿಸ್ಸಿಂಗು.
ದಿನಾ ಒಂದ್ ಲೋಟ ರಸಂ ಕುಡೀರಿ, ರೋಗಕ್ಕೆ ಗುಡ್ ಬೈ ಹೇಳಿ...
ಈ ಇಡ್ಲಿ ಅರಬ್ ದೇಶಗಳಿಂದ ಇಲ್ಲಿಗೆ ಬಂದದ್ದು ಆಗಿರಬಹುದು ಎಂದು ವಾದಿಸುವ ಕೆಲವು ತಜ್ಞರೂ ಇದ್ದಾರೆ. ಅವರು ಈಜಿಪ್ಟ್‌ನಲ್ಲಿ ಸಿಗುವ ಕೆಲವು ಸಾಕ್ಷ್ಯಗಳನ್ನು ಆಧರಿಸಿ, ಭಾರತಕ್ಕೆ ವ್ಯಾಪಾರಕ್ಕಾಗಿ ಬರುತ್ತಿದ್ದ ಅರಬ್ ವ್ಯಾಪಾರಿಗಳು ಇದನ್ನು ತಂದಿರಬಹುದು ಎಂದು ಹೇಳುತ್ತಾರೆ. ಆದರೆ ಇದನ್ನು ನಂಬಬೇಕಾದರೆ ಈಗಲೂ ಅರಬ್ ದೇಶಗಳಲ್ಲಿ ಇಡ್ಲಿ ಪಾಪ್ಯುಲರ್ ಆಗಿರೇಕು. ಆದರೆ ಹಾಗಿಲ್ಲ. ನಮ್ಮದು ಅಕ್ಕಿ ಹೆಚ್ಚಾಗಿ ಬೆಳೆಯುವ ದೇಶ. ಅದರಲ್ಲೂ ದಕ್ಷಿಣ ಭಾರತ ಸಾಕಷ್ಟು ನೀರು ಇರುವ, ಅಕ್ಕಿ ಬೆಳೆಯುತ್ತಿದ್ದ ಜಾಗ. ಆರಂಭ ಕಾಲದ ಇಡ್ಲಿಯ ಉಲ್ಲೇಖಗಳಲ್ಲಿ ಉದ್ದು ಸೇರಿಸುವ ಪ್ರಸ್ತಾಪ ಇಲ್ಲ. ಹೀಗಾಗಿ ಇಲ್ಲಿಯೇ ಶುದ್ಧ ಅಕ್ಕಿಯ ಇಡ್ಲಿಗಳು ತಯಾರಿ ಮೊದಲು ಆಗಿರಬೇಕು. ನಂತರ ಇದು ಒಂದು ಪ್ರದೇಶದಿಂದ ಇನ್ನೊಂದು ಕಡೆಗೆ ಹಬ್ಬುತ್ತ ಹೋದಂತೆ ಉದ್ದು ಸೇರ್ಪಡೆ ಆಗಿರಬೇಕು. ನಾನಾ ಅವತಾರಗಳೂ ಇದಕ್ಕೆ ಸೇರ್ಪಡೆ ಆಗಿರಬೇಕು. ಈಗಂತೂ ತಮ್ಮ ದೇಶದ ಹೆಮ್ಮೆಯ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಸಂಸ್ಥೆ, ಗಗನಯಾತ್ರಿಗಳಿಗೆ ಬಾಹ್ಯಾಕಾಶದಲ್ಲಿ ಸೇವಿಸಲು ರೆಡಿ ಫುಡ್ ಆಗಿ ಇಡ್ಲಿ, ಸಾಂಬಾರು ಮತ್ತು ಚಟ್ನಿಪುಡಿಯ ಪ್ಯಾಕೆಟ್‌ಗಳನ್ನು ಸಿದ್ಧಪಡಿಸುತ್ತಿದೆ. ಅಂದರೆ ಇಡ್ಲಿ ಭೂಮಿಯನ್ನೂ ದಾಟಿ ಬಾಹ್ಯಾಕಾಶವನ್ನೂ ತಲುಪಲಿದೆ ಅಂತ ಅರ್ಥ.
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಸೋರೆಕಾಯಿ ಹಲ್ವಾ, ಮೊಸರು ಬಜ್ಜಿ
ಇಡ್ಲಿ ಅತ್ಯಂತ ಆರೋಗ್ಯಕರ ಆಹಾರ. ಇದರಿಂದ ನಮ್ಮ ಬಾಡಿಗೆ ಬೇಕಾದ ಪೋಷಕಾಂಶಗಳೆಲ್ಲವೂ ಸಿಗುತ್ತೆ. ಉದಾಹರಣೆಗೆ ನೀವು ಬೆಳಗ್ಗೆ ಮೂರು ಇಡ್ಲಿ ತಿಂದರೆ, ಅದರಲ್ಲಿ 230 ಕ್ಯಾಲೊರಿ ಎನರ್ಜಿ, ೦.೪ .4ಗ್ರಾಂ ಕೊಬ್ಬು, 50 ಗ್ರಾಂ ಕಾರ್ಬೊಹೈಡ್ರೇಟ್, 7 ಗ್ರಾಂ ಪ್ರೊಟೀನ್, 5 ಗ್ರಾಂ ನಾರಿನಂಶ, 30 ಗ್ರಾಂ ಕ್ಯಾಲ್ಷಿಯಂ ಸಿಗುತ್ತೆ. ಇದರ ಜೊತೆ ಸಾಂಬಾರ್ ಅಥವಾ ಚಟ್ನಿ ಸೇರಿದರೆ ಸುಮಾರು 600 ಕ್ಯಾಲೊರಿ ನಿಮ್ಮ ದೇಹವನ್ನು ಸೇರುತ್ತೆ.