Kitchen Hacks: ನಿಮ್ಮಿಷ್ಟದ ಮಣ್ಣಿನ ಪಾತ್ರೆ ಒಡೆಯಬಾರದು ಅಂದ್ರೆ ಹೀಗೆ ಮಾಡಿ

ಅಯ್ಯೋ..! ಇಷ್ಟಪಟ್ಟು ಮಣ್ಣಿನ ಪಾತ್ರೆ ಕೊಂಡುಕೊಂಡಿದ್ದೆ. ನಾಲ್ಕು ದಿನ ಆಗ್ಲಿಲ್ಲ. ಆಗ್ಲೇ ಒಡೆದು ಹೋಯ್ತು. ನನ್ನ ಹತ್ತಿರ ಮಣ್ಣು,ಗಾಜಿನ ಪಾತ್ರೆ ಇಟ್ಟುಕೊಳ್ಳೋಕೆ ಬರಲ್ಲ ಅಂತಾ ನೀವು ಬೇಸರಪಟ್ಟುಕೊಳ್ತಿದಿರಾ? ಈ ಪಾತ್ರೆಗಳು ಬಾಳಿಕೆ ಬರಬೇಕೆಂದರೆ ಹೀಗೆ ಮಾಡಿ


ಅಡುಗೆ ಮನೆ (Kitchen )ಅಂದವನ್ನು ಪಾತ್ರೆ(crockery)ಗಳು ಹೆಚ್ಚಿಸುತ್ತವೆ. ಸುಂದರ ಪಾತ್ರೆಗಳು,ಬಾಟಲ್ ಗಳನ್ನು ಮನೆ(Home)ಯಲ್ಲಿಡಲು ಎಲ್ಲರೂ ಬಯಸ್ತಾರೆ. ಮನೆಗೆ ಅತಿಥಿಗಳು ಬಂದಾಗ ಹೊಸ ಪಾತ್ರೆಗಳು ಹೊರಗೆ ಬರುತ್ತವೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಬಳಕೆ ಮಾಡ್ತಿದ್ದ ಮಣ್ಣಿನ ಪಾತ್ರೆಗಳು,ಭರಣಿಗಳು,ಗಾಜಿನ ಪಾತ್ರೆಗಳು ಈಗ ಫ್ಯಾಷನ್ (Fashion) ಆಗಿದೆ. ಇದರ ನಿರ್ವಹಣೆ ಕಷ್ಟ. ಹಾಗಾಗಿ ಅದು  ಶೋ ಕೇಸ್ ನಲ್ಲಿ ಜಾಗ ಪಡೆದಿದೆ. ಮಣ್ಣಿನ ಪಾತ್ರೆಗಳು ಇಟ್ಟಲ್ಲಿಯೇ ಬಿರುಕು ಬಿಡುತ್ತವೆ. ಗಾಜು ಹಾಗೂ ಮಣ್ಣಿನ ಪಾತ್ರೆಗಳು ದುಬಾರಿ. ಹೆಚ್ಚಿನ ಹಣ (Money )ಕೊಟ್ಟು ಮನೆಗೆ ತಂದ ಪಾತ್ರೆಗಳು ಬಹಳ ದಿನ ಬಾಳಿಕೆ ಬರದೆ ಹೋದ್ರೆ ಬೇಸರವಾಗುತ್ತದೆ. ಹಣ ಹಾಳಾಯ್ತು ಎಂಬ ನೋವಿರುತ್ತದೆ.ಪಾತ್ರೆಗಳು ಒಡೆಯದಂತೆ ರಕ್ಷಿಸಲು ಕೆಲವು ಸಲಹೆಗಳನ್ನು ಇಂದು ನಾವು ನಿಮಗೆ ಕೊಡ್ತೆವೆ. 

ಒಂದಕ್ಕೊಂದರ ಮಧ್ಯೆ ಜಾಗವಿರಲಿ : ಎಲ್ಲರ ಮನೆಯಲ್ಲೂ ಪಾತ್ರೆಗಳನ್ನು ಇಡಲು ವಿಶಾಲವಾದ ಸ್ಥಳವಿರುವುದಿಲ್ಲ. ಪಾತ್ರೆಗಳನ್ನು ಒಂದಕ್ಕೊಂದು ಅಂಟಿಕೊಳ್ಳುವಷ್ಟು ಹತ್ತಿರಕ್ಕೆ ಇಡಲಾಗುತ್ತದೆ. ಒಂದು ಪಾತ್ರೆ ಮೇಲೆ ಇನ್ನೊಂದು ಪಾತ್ರೆಯನ್ನೂ ಇಡಲಾಗುತ್ತದೆ. ಸ್ಟೀಲ್ (Steel),ಆಲ್ಯೂಮಿನಿಯಂ ( Aluminum )ಪಾತ್ರೆಗಳಿಗೆ ಸಮಸ್ಯೆಯಿಲ್ಲ. ಆದ್ರೆ ಮಣ್ಣಿನ ಪಾತ್ರೆಗಳನ್ನು ಹತ್ತಿರವಿಟ್ಟಾಗ,ಪರಸ್ಪರ ಬಣ್ಣ ಅಂಟಿಕೊಳ್ಳುತ್ತದೆ. ಪಾತ್ರೆಗಳು ಒಡೆಯಲು ಕಾರಣವಾಗಬಹುದು. ಪಾತ್ರೆಗಳನ್ನು ಒಟ್ಟಿಗೆ ಇಡುವ ಅನಿವಾರ್ಯತೆ ಎದುರಾದಲ್ಲಿ ಖಂಡಿತವಾಗಿಯೂ ಎರಡು ಪಾತ್ರೆಗಳ ನಡುವೆ ಮೃದುವಾದ ಕಾಗದದ ತುಂಡನ್ನು ಇರಿಸಿ.

Latest Videos

ತೂಕದ ಬಗ್ಗೆ ಗಮನವಿರಲಿ : ಶೆಲ್ಫ್ (Shelf )ನಲ್ಲಿ ಪಾತ್ರೆಗಳನ್ನು ಇಡುವಾಗ ಯಾವಾಗಲೂ ಪಾತ್ರೆಗಳ ತೂಕವನ್ನು ಗಮನಿಸಬೇಕಾಗುತ್ತದೆ. ಯಾವಾಗಲೂ ಕೆಳಭಾಗದಲ್ಲಿ ಭಾರವಾದ ಮತ್ತು ದೊಡ್ಡದಾದ ಪಾತ್ರೆಗಳನ್ನು ಇರಿಸಬೇಕು. ಅದರ ಮೇಲೆ ಹಗುರವಾದ ಪಾತ್ರೆಗಳನ್ನು ಇರಿಸಬೇಕು. ಕಂಡ ಕಂಡಲ್ಲಿ ಪಾತ್ರೆಗಳನ್ನು ಇಡಬಾರದು. ಹಾಗೆ ಒಂದು ಜಾಗದಲ್ಲಿ 6-8 ಪಾತ್ರೆಗಳನ್ನು ಮಾತ್ರ ಇರಿಸಿ.

ತೊಳೆಯುವಾಗ ನೀರಿ(Water)ನ ತಾಪಮಾನ ನೋಡಿಕೊಳ್ಳಿ : ಪಾತ್ರೆ ಹಾಳಾಗಲು ನೀರು ಕಾರಣವೆಂದ್ರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಪಾತ್ರೆ ಬಿರುಕುಬಿಡಲು ನೀವು ಬಳಸುವ ನೀರಿನ ತಾಪಮಾನ ಕಾರಣವಾಗುತ್ತದೆ. ಹಾಗಾಗಿ ಪಾತ್ರೆ ತೊಳೆಯುವ ಮೊದಲು ನೀರಿನ ತಾಪಮಾನವನ್ನು ಪರೀಕ್ಷೆ ಮಾಡಿಕೊಳ್ಳಬೇಕು. ಪಾತ್ರೆ ಜಿಡ್ಡಾಗಿದೆ ಎಂಬ ಕಾರಣಕ್ಕೆ ಬಿಸಿ ನೀರನ್ನು ಪಾತ್ರೆಗೆ ಹಾಕ್ತೆವೆ. ನೀರು ತುಂಬಾ ಬಿಸಿಯಾಗಿದ್ದರೆ ಅಥವಾ ತಣ್ಣಗಿದ್ದರೆ  ಪಾತ್ರೆಗಳು ಬಿರುಕು ಬಿಡಬಹುದು. ಯಾವಾಗಲೂ ಹಗುರವಾದ ಸಾಮಾನ್ಯ ನೀರು ಅಥವಾ ಉಗುರುಬೆಚ್ಚನೆಯ ನೀರನ್ನು ಮಾತ್ರ ಪಾತ್ರೆ ತೊಳೆಯಲು ಬಳಸಬೇಕು. 

ಮಣ್ಣಿನ ಮಡಿಕೆಯಲ್ಲಿ ಆಹಾರವನ್ನೇಕೆ ಬೇಯಿಸಿ ತಿನ್ನಬೇಕು?

ನ್ಯೂಸ್ ಪೇಪರ್ (Newspaper )ಬಳಸಬೇಡಿ : ಬಹುತೇಕ ಮನೆಗಳಲ್ಲಿ ಡಿನ್ನರ್ ಸೆಟ್ ಗಳನ್ನು ನ್ಯೂಸ್ ಪೇಪರ್ ಗಳಲ್ಲಿ ಸುತ್ತಿಡುತ್ತಾರೆ. ಪಾತ್ರೆಗಳು ಒಡೆಯುವುದನ್ನು ತಡೆಯಲು ಹೀಗೆ ಮಾಡಲಾಗುತ್ತದೆ. ಆದರೆ ದಿನಪತ್ರಿಕೆಯ ಶಾಯಿ ಪಾತ್ರೆಗಳ ಮೇಲೆ ಬೀಳುತ್ತದೆ. ಇದರಿಂದ ಪಾತ್ರೆಯ ಹೊಳಪು ಮಸುಕಾಗುತ್ತದೆ. ದಿನಪತ್ರಿಕೆಗಳಲ್ಲಿ ಪಾತ್ರೆಗಳನ್ನು ಮಾತ್ರವಲ್ಲ ಆಹಾರವನ್ನೂ ಕಟ್ಟಬಾರದು.

ಎಚ್ಚರಿಕೆಯಿಂದ ಸ್ವಚ್ಛಗೊಳಿಸಿ : ಈ ಪಾತ್ರೆಗಳನ್ನು ತೊಳೆಯುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ತೊಳೆದ ನಂತರ  ಅವುಗಳನ್ನು ಸ್ವಚ್ಛ ಮತ್ತು ಮೃದುವಾದ ಬಟ್ಟೆಯ ಮೇಲೆ ತಲೆಕೆಳಗಾಗಿ ಇರಿಸಬೇಕು. ನೀರು ಹೊರಬಂದಾಗ ಅದನ್ನು ಸ್ವಚ್ಛವಾದ ಬಟ್ಟೆಯಿಂದ ಬಹಳ ಎಚ್ಚರಿಕೆಯಿಂದ ಒರೆಸಬೇಕು. ಸ್ವಲ್ಪ ಕೈ ಜಾರಿದರೂ ಪಾತ್ರೆಗಳು ಒಡೆಯುತ್ತವೆ. 

400 ರೈಲ್ವೆ ನಿಲ್ದಾಣದಲ್ಲಿನ್ನು ಮಣ್ಣಿನ ಪಾತ್ರೆಗಳಲ್ಲಿ ಊಟ, ತಿಂಡಿ, ತೀರ್ಥ!

ಸಿಂಕ್ (sink) ಹೀಗಿರಲಿ :  ಪಾತ್ರೆಗಳನ್ನು ಇಟ್ಟುಕೊಳ್ಳುವಾಗ ಅಥವಾ ತೊಳೆಯುವಾಗ ಅನೇಕ ಬಾರಿ ಕೈಯಿಂದ ಜಾರಿಬೀಳುತ್ತದೆ. ಮಣ್ಣಿನ ಹಾಗೂ ಗ್ಲಾಸಿನ ಪಾತ್ರೆಗಳು ಒಡೆಯುತ್ತವೆ. ಸಿಂಕ್ ರಬ್ಬರ್ (Rubber) ನಿಂದ ಮಾಡಿದ್ದಾಗಿದ್ದರೆ ಪಾತ್ರೆ ಒಡೆಯುವುದಿಲ್ಲ. ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಹಾಗೂ ಇಡುವಾಗ,ಬಳಸುವಾಗ ಆತುರಪಡಬಾರದು. ಒಡೆಯುವ ಪಾತ್ರೆಗಳನ್ನು ಎಣ್ಣೆ ಕೈನಲ್ಲಿ ಮುಟ್ಟಬಾರದು. ಹಾಗೆ ಬಿಸಿ ಬಿಸಿ ಪದಾರ್ಥಗಳನ್ನು ಅದರಲ್ಲಿ ಹಾಕಿದಾಗಲೂ ಕೆಲವೊಮ್ಮೆ ಒಡೆಯುತ್ತದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು.

click me!