ಕಾರ್ಕಳ (ಆ.2) : ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹೂಗಳಿಗೆ ಭಾರಿ ಬೇಡಿಕೆ ಕುದುರಿದೆ. ಶ್ರಾವಣ ಮಾಸದಲ್ಲಿ ನಾಗರ ಪಂಚಮಿ, ವರಮಹಾಲಕ್ಷ್ಮೀ ಪೂಜೆ, ಕೃಷ್ಣ ಅಷ್ಟಮಿ, ಗಣೇಶ ಚತುರ್ಥಿ ಹೀಗೆ ಸಾಲು ಸಾಲು ಹಬ್ಬಗಳು ಇರುವುದರಿಂದ ಜನರು ಹೂ ಖರೀದಿಗೆ ಮುಗಿಬಿದ್ದಿದ್ದಾರೆ. ಬೇಡಿಕೆ ತಕ್ಕಂತೆ ಹೂವುಗಳಲ್ಲಿರುವುದರಿಂದ ದುಪ್ಪಟ್ಟು ಹಣ ಕೊಟ್ಟು ಜನರು ಖರೀದಿಸತೊಡಗಿದ್ದಾರೆ. ಸರತಿ ಸಾಲಿನಲ್ಲಿ ಹಬ್ಬಗಳು ಬರುತ್ತಿದ್ದು ಧಾರ್ಮಿಕ ವಿಧಿ ವಿಧಾನಗಳಿಗೆ ಹೂಗಳಿಗೆ ಭಾರಿ ಪ್ರಾಧಾನ್ಯತೆ ಇದೆ. ಮಳೆಗಾಲದಲ್ಲಿ ಹೂವಿನ ಬೇಡಿಕೆ ಕಡಿಮೆ ಇದ್ದುದರಿಂದ ದರ ಕುಸಿತ ಸಹಜವಾಗಿದ್ದು, ಈ ಬಾರಿಯ ಹೂವಿನ ಬೆಲೆ ಹೆಚ್ಚಳದಿಂದ ಹೂ ಬೆಳೆಬೆಳೆಯುವ ರೈತರ ಮೊಗದಲ್ಲಿ ಸಂತಸ ಉಂಟುಮಾಡಿದೆ. ಆದರೆ ಮಧ್ಯವರ್ತಿಗಳ ಹಾವಳಿ ಬೆಲೆ ಏರಿಕೆಗೆ ಸವಾಲಾಗಿ ಪರಿಣಮಿಸಿದೆ.
ಅತೀ ಮಳೆಗೆ ತತ್ತರಿಸಿದ ಹೂ ಬೆಳೆಗಾರರು: ಶ್ರಾವಣದ ಮೊದಲ ಸೋಮವಾರವೂ ಹೂವಿಗಿಲ್ಲ ಬೆಲೆ
ಕಾರ್ಕಳ(Karkala), ಹೆಬ್ರಿ(Hebri), ಉಡುಪಿ(Udupi) ಹೂವಿನ ಮಾರುಕಟ್ಟೆಗಳಲ್ಲಿ ಸೇವಂತಿಗೆ, ಕಾಕಡ, ಜೀನಿಯಾ ಹೂವುಗಳು ಮೊಳವೊಂದಕ್ಕೆ 50-100 ರು.ಗಳ ತನಕ ಮಾರಾಟವಾಗುತ್ತಿವೆ. ಶಂಕರಪುರ ಮಲ್ಲಿಗೆ( ಉಡುಪಿ ಮಲ್ಲಿಗೆ) ಅಟ್ಟೆಗೆ ಸಾಮಾನ್ಯವಾಗಿ 600-800 ರು. ಇದ್ದು, ಪ್ರಸ್ತುತ ಅಟ್ಟೆಗೆ 1900-2200 ರು. ವರೆಗೆ ಮಾರಾಟವಾಗುತ್ತಿದೆ. ಕಳೆದ ಬಾರಿ ಸೇವಂತಿಗೆ ಕುಚ್ಚಿಯೊಂದಕ್ಕೆ 1500-2000 ರು. ವರೆಗೆ ಮಾರಾಟವಾಗುತ್ತಿದ್ದು ಈ ಬಾರಿ ರು. 2500-3000 ರು. ದರಕ್ಕೆ ಮಾರಾಟವಾಗುತ್ತಿದೆ. ಜೀನಿಯಾ ಕಳೆದ ಬಾರಿ 1000 -1500 ರು.ಗಳಿಗೆ ಮಾರಾಟವಾಗುತ್ತಿದ್ದರೆ, ಈ ಬಾರಿ 2000-3000 ವರೆಗೆ ಮಾರಾಟವಾಗುತ್ತಿದೆ.
ಹಿಂಗಾರ ಒಂದಕ್ಕೆ 200-500 ವರೆಗೆ ದರವಿದೆ. ಕೇದಿಗೆ ಕಟ್ಟು ಒಂದಕ್ಕೆ 200-300 ರು.ವರೆಗೆ ಮಾರಾಟ ವಾಗುತ್ತಿದೆ. ಕಾಕಡ 900-1200 ರು. ವರೆಗೆ ಮಾರಾಟವಾಗುತಿದ್ದು ಹೂವುಗಳಿಗೆ ಭಾರಿ ಬೇಡಿಕೆ ಬಂದಿದೆ.
Vastu Shastra: ಒಣಗಿದ ಹೂ ಶವಕ್ಕೆ ಸಮಾನ, ಪೂಜೆಗೆ ಬಳಸಿದ್ರೆ ಹಾಳಾಗತ್ತೆ ಭವಿಷ್ಯ, ವರ್ತಮಾನ
ಪಾವಘಡ, ಶಿವಮೊಗ್ಗ, ಬೆಂಗಳೂರು, ಚಿತ್ರದುರ್ಗ, ಮೈಸೂರು ಕಡೆಗಳಲ್ಲಿ ಹೂವುಗಳನ್ನು ತರಿಸುತ್ತಿದ್ದೇವೆ . ಈ ಬಾರಿಯ ಮಳೆ ಹಾಗೂ ಹವಾಮಾನ ವೈಪರೀತ್ಯಗಳಿಂದ ನಿರೀಕ್ಷಿತ ಮಟ್ಟದಲ್ಲಿ ಹೂವಿನ ಪೂರೈಕೆ ಅಗುತ್ತಿಲ್ಲ. ಅದ್ದರಿಂದ ಹೂವಿನ ಬೆಲೆ ಏರಿಕೆ ಕಂಡಿದೆ .
-ಪದ್ಮನಾಭ, ಹೂ ವ್ಯಾಪಾರಸ್ಥ, ಅಜೆಕಾರು.
ಈ ಬಾರಿ ಹೂವಿಗೆ ದರ ಹೆಚ್ಚಳವಾಗಿದೆ. ಆದುದರಿಂದ ಗ್ರಾಹಕರಿಗೆ ಸಂಕಷ್ಟವಾಗಲಿದೆ. ಹೂವುಗಳಿಗೆ ಮೊನ್ನೆಯಷ್ಟೇ ಕಡಿಮೆ ದರ ಇತ್ತು. ಇವತ್ತು ದುಪ್ಪಟ್ಟು ಬೆಲೆಗೆ ಮಾರಾಟ ವಾಗುವುತ್ತಿರುವುದು ಬೇಸರ ತರಿಸಿದೆ.
-ಶಶಿಕಾಂತ, ಗ್ರಾಹಕ, ಶಿರ್ಲಾಲು.