Davanagere : ಕರಿಬಸವೇಶ್ವರ ಸ್ವಾಮಿಗೆ ನಾರಿಮಣಿಯರಿಂದಲೇ ರಥೋತ್ಸವ

By Suvarna News  |  First Published Dec 18, 2022, 9:17 PM IST

ದಾವಣಗೆರೆ ಹೊರ ವಲಯದಲ್ಲಿರುವ ಯರಗುಂಟೆ ಗ್ರಾಮದಲ್ಲಿ ಕರಿಬಸವೇಶ್ವರ ಸ್ವಾಮಿಯ  ಒಂದು ವಿಶೇಷ ರಥೋತ್ಸವ ನಡೆಯುತ್ತದೆ‌.   ಸಾಮಾನ್ಯವಾಗಿ ಜಾತ್ರೆ ಹಬ್ಬ ಅಂದ್ರೆ ಪುರುಷ ಪ್ರಧಾನವೇ ಹೆಚ್ಚು.  ಆದ್ರೆ ಈ ಜಾತ್ರೆಯಲ್ಲಿ ಮಹಿಳೆಯರೇ ರಥೋತ್ಸವ ನೆರವೇರಿಸುವುದು ವಿಶೇಷಗಳಲ್ಲಿ ಒಂದು.   


ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಡಿ.18): ಸಾಮಾನ್ಯವಾಗಿ ರಥೋತ್ಸವ ಅಂದ್ರೆ ಪುರುಷ ಪ್ರಧಾನವಾಗಿರತ್ತೆ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರೇ ಸೇರಿಕೊಂಡು ರಥ (ತೇರು) ಏಳಿತಾರೆ. ಮಹಿಳೆಯರು ಅದನ್ನ ನೋಡಿ ಭಕ್ತಿ ಪರವಶರಾಗ್ತಾರೆ. ಆದ್ರೆ, ಇಲ್ಲೊಂದು ಗ್ರಾಮದಲ್ಲಿ ನಡೆಯುವ ರಥೋತ್ಸವ ವಿಭಿನ್ನವಾಗಿದೆ. ಇಲ್ಲಿ ನಾರಿಯರೇ ರಥೋತ್ಸವದ ಮುಂದಾಳು  ಆಗಿರ್ತಾರೆ. ಮಹಿಳೆಯರು  ಬಂದು ಪೂಜೆ ಸಲ್ಲಿಸಿದ ಬಳಿಕವೇ ಇಲ್ಲಿ ರಥೋತ್ಸವ ನಡೆಯುವುದು ಸಂಪ್ರದಾಯವಾಗಿದೆ. ದಾವಣಗೆರೆ ಹೊರ ವಲಯದಲ್ಲಿರುವ ಯರಗುಂಟೆ ಗ್ರಾಮದಲ್ಲಿ ಕರಿಬಸವೇಶ್ವರ ಸ್ವಾಮಿಯ  ಒಂದು ವಿಶೇಷ ರಥೋತ್ಸವ ನಡೆಯುತ್ತದೆ‌. ಈ ಜಾತ್ರೆ ಬೇರೆ ಕಾರ್ಯಕ್ರಮಗಳಿಗಿಂತ ವಿಭಿನ್ನ ವಿನೂತನ‌. ಈ ಜಾತ್ರೆಯಲ್ಲಿ ಮಹಿಳೆಯರದ್ದೇ ಪಾರುಪತ್ತೆ. ಸಾಮಾನ್ಯವಾಗಿ ಜಾತ್ರೆ ಹಬ್ಬ ಅಂದ್ರೆ ಪುರುಷ ಪ್ರಧಾನವೇ ಹೆಚ್ಚು .ಜಾತ್ರೆ ಹಬ್ಬ ಸಮಾರಂಭಗಳಲ್ಲಿ ಮಹಿಳೆಯರು ಉತ್ಸವ ಮೂರ್ತಿಯಾಗಿರುತ್ತಾರೆ. ಆದ್ರೆ ಈ ಜಾತ್ರೆಯಲ್ಲಿ ಮಹಿಳೆಯರೇ ರಥೋತ್ಸವ ನೆರವೇರಿಸುವುದು ವಿಶೇಷಗಳಲ್ಲಿ ಒಂದು.   

Tap to resize

Latest Videos

ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಮಹಿಳಾ ರಥೋತ್ಸವ: ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ  ಜಾತ್ರೆ ನಡೆಯುತ್ತದೆ. ಶ್ರೀ ಕರಿಬಸವೇಶ್ವರ ಸ್ವಾಮೀಯ ರಥೋತ್ಸವದಲ್ಲಿ ಅವಿವಾಹಿತ, ವಿವಾಹಿತ ಮಹಿಳೆಯರು ಪಾಲ್ಗೊಳ್ಳುವುದು ವಾಡಿಕೆ. ಹೆಣ್ಣುಮಕ್ಕಳು ಒಗ್ಗಟ್ಟಾಗಿ ಉತ್ಸವ ಮೂರ್ತಿಯ ರಥ ಎಳೆಯವುದು  ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಸಾರುತ್ತದೆ. ರಾಜ್ಯದ ಯಾವ ಭಾಗದಲ್ಲಿಯೂ ಕೂಡ ಮಹಿಳೆಯರು ಮಾತ್ರ ರಥ ಎಳೆಯೋ ಪದ್ಧತಿ ಇಲ್ಲ. ಆದ್ರೆ, ಯರಗುಂಟೆ ಗ್ರಾಮದಲ್ಲಿ ಮಾತ್ರ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದಿಂದ ನಡೆಯುವ ಈ ರಥೋತ್ಸವದಲ್ಲಿ ಮಹಿಳೆಯರೇ ಡಾಮಿನೆಂಟ್.

 ಈ ಬಾರಿಯ ರಥೋತ್ಸವಕ್ಕೆ ಶ್ರೀ ಕ್ಷೇತ್ರ ಉಜ್ಜಯನಿ ಜಗದ್ಗುರು ಗಳು ಕೂಡ ಭಾಗವಹಿಸಿ, ರಥೋತ್ಸವಕ್ಕೆ‌ಚಾಲನೆ ನೀಡಿದರು. ಮಹಿಳೆಯರಿಂದಲೇ ರಥೋತ್ಸವ ನಡೆದುಕೊಂಡು ಹೋಗಬೇಕೆಂಬುದು ಅನಾಧಿ ಕಾಲದ ಸಂಪ್ರದಾಯವಲ್ಲ. ಇಲ್ಲಿನ   ಮಠದ ಸೇವಾ ಸಮಿತಿ ಆಶಯ ಕಳೆದ  ಐದು ವರ್ಷದಿಂದ ಇಂತಹದೊಂದು ಸಂಪ್ರದಾಯದ ಹುಟ್ಟುಹಾಕಿದೆ. 

ಸ್ತ್ರೀ ಸಮಾನತೆಯನ್ನು ಸಾರುವ ರಥೋತ್ಸವ: ಸ್ತ್ರೀಯರಿಗೆ ಸಮಾನತೆ ಕಲ್ಪಿಸುವುದು ಈ ಜಾತ್ರೆಯ ಆಶಯವಾಗಿದೆ.  ಸೃಷ್ಟಿ ಹುಟ್ಟಿರುವುದೇ ಹೆಣ್ಣಿನಿಂದ ಹೆಣ್ಣಿಗೆ ಗಂಡಿನಷ್ಟೇ ತಾಕತ್ತು ಶಕ್ತಿ ಇದೆ. ಸಮಾಜದಲ್ಲಿ ಸಮಾನತೆ ಸಂದೇಶ ಸಾರಲು  ಮಹಿಳಾ ರಥೋತ್ಸವಕ್ಕೆ ಆಧ್ಯತೆ ಕೊಡಲಾಗಿದೆ ಎಂದು ಗದ್ದಿಗೆ ಮಠದ ಶ್ರೀ ಪರಮೇಶ್ವರ ಸ್ವಾಮೀಜಿ ಅಭಿಪ್ರಾಯಿಸುತ್ತಾರೆ.

ಅತ್ತೆಯನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಎತ್ತಿದ ಕೈ ಈ ರಾಶಿಯವರು!

ಕಮಾನು ಆಕರ್ಷಣೆಯುಳ್ಳ  ಸುಮಾರು 21 ಅಡಿ ಎತ್ತರದ ರಥವನ್ನ ಗದ್ದಿಗೆ ಮಠದಿಂದ ಸುಮಾರು ಅರ್ಧ ಕಿಲೋಮೀಟರ್ ದೂರ ಇರುವ ಬನ್ನಿ ಮಂಟಪದವರೆಗೆ ಎಳೆದೊಯ್ದು   ಪುನಃ ಅಲ್ಲಿಂದ ಗದ್ದಿಗೆ ಮಠಕ್ಕೆ ತಂದು ಬಿಡುತ್ತಾರೆ. ಮಹಿಳಾ ರಥೋತ್ಸವಕ್ಕೆ ವಿವಿಧ ಜಾನಪದ ಕಲಾ ತಂಡಗಳು ಮೆರುಗು ನೀಡುತ್ತವೆ. ಇನ್ನು ರಥೋತ್ಸವದಲ್ಲಿ ಯರಗುಂಟೆ ಗ್ರಾಮದ ಮಹಿಳೆಯರು ಅಷ್ಟೇ ಅಲ್ಲದೆ ಅಕ್ಕಪಕ್ಕದ ಊರು ಮತ್ತು ಜಿಲ್ಲೆಯ ಮಹಿಳೆಯರು ಪಾಲ್ಗೊಂಡು ರಥ ಎಳೆದು ಭಕ್ತಿ ಸಮರ್ಪಿಸುತ್ತಾರೆ. ಹೀಗೆ ರಥ ಎಳೆಯೋದ್ರಿಂದ ಬೇಡಿಕೊಂಡ ಹರಕೆ ಈಡೇರತ್ತೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಈ ಜಾತ್ರೆಯಲ್ಲಿ ಮಹಿಳೆಯರ ಸಂಖ್ಯೆಯು ಹೆಚ್ಚುತ್ತಿದೆ.

Shani dev ವಿಗ್ರಹ ಮನೆಗಳಲ್ಲಿಡುವುದಿಲ್ಲ ಏಕೆ?

ದೈವಿಶಕ್ತಿಯಲ್ಲಿ ನಂಬಿಕೆ ಇಟ್ಟಿರೋ ಮಹಿಳೆಯರು: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಸಮಾನತೆ ಕಲ್ಪಿಸುವ ದೃಷ್ಟಿಯಿಂದ ಶ್ರೀಮಠವು ಇಂತಹ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಕರಿಬಸವೇಶ್ವರ ಅಜ್ಜಯ್ಯ ಕೆಲವೊಂದು ಪವಾಡಗಳನ್ನು ಸೃಷ್ಟಿಸಿದ ನಿದರ್ಶನಗಳು ಇವೆ. ದೆವ್ವ ಭೂತ ಪೀಡೆ ಪಿಶಾಚಿಗಳ   ಪುರುಷರಿಗಿಂತ ಮಹಿಳೆಯರಲ್ಲಿ ಹಲವು ನಂಬಿಕೆಗಳಿವೆ.ಆ ನಂಬಿಕೆಗಳಿಂದ ಹೊರಬರಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಅಜ್ಜಯ್ಯನ ತೇರಿನಲ್ಲಿ ಪಾಲ್ಗೊಳ್ಳುತ್ತಾರೆ.  ಶ್ರೀ ಕರಿಬಸವವೇಶ್ವರ ರಥವನ್ನ ಮಹಿಳೆಯರೇ ಎಳದ್ರೆ ಯಾವುದೇ ಗಾಳಿ, ಭೂತ, ದೆವ್ವಗಳ  ಭಯ ಇರೋದಿಲ್ಲ ಅನ್ನೋದು ಭಕ್ತರ ನಂಬಿಕೆ ಇದೆ. ಹಲವು ಸದುದ್ದೇಶದ ಕಾರಣದಿಂದ ನಡೆಯುವ ಮಹಿಳಾ ರಥೋತ್ಸವ ವರ್ಷದಿಂದ ವರ್ಷಕ್ಕೆ‌ ಜನಪ್ರಿಯಗೊಳ್ಳುತ್ತಿರುವುದಂತು ಸತ್ಯ. 

click me!