ಭರವಸೆ ಕಳೆದುಕೊಂಡ ಬದುಕಿಗೆ ಗುರಿ ತೋರುವ ಆಶ್ರಮಗಳು

By Suvarna NewsFirst Published Mar 27, 2022, 12:01 PM IST
Highlights

ನಮ್ಮ ದೇಶದಲ್ಲಿ ಬಹಳಷ್ಟು ಆಶ್ರಮಗಳಿವೆ. ಎಲ್ಲವಕ್ಕೂ ಅವುಗಳದೇ ಆದ ಅನುಯಾಯಿಗಳಿದ್ದಾರೆ. ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ನೀಡುವ ಕೆಲಸ ಮಾಡುತ್ತಿರುವ ಈ ಆಶ್ರಮಗಳನ್ನು ಹುಡುಕಿಕೊಂಡು ವಿದೇಶಗಳಿಂದಲೂ ಸಾಕಷ್ಟು ಜನ ಬರುತ್ತಾರೆ. ಅಂಥ ಕೆಲ ಪ್ರಸಿದ್ಧ ಆಶ್ರಮಗಳ ಪಟ್ಟಿ ಇಲ್ಲಿದೆ. 

ಆಶ್ರಮಗಳೆಂದರೆ ಜನರ ನೆಮ್ಮದಿ ಕೇಂದ್ರಗಳು. ಜೀವನದ ಹಲವಾರು ಜಂಜಾಟಗಳಿಂದ ಬೇಸತ್ತವರಿಗೆ, ಬದುಕಲ್ಲಿ ಭರವಸೆ ಕಳೆದುಕೊಂಡವರಿಗೆ ಶಾಂತಿ, ಸಮಾಧಾನ ಕಲ್ಪಿಸಿಕೊಡುವ, ಬದುಕನ್ನು ಹೊಸತಾದ ದೃಷ್ಟಿಕೋನದಿಂದ ನೋಡಲು ಕಲಿಸುವ ಕೆಲಸವನ್ನು ಈ ಆಶ್ರಮಗಳು ಮಾಡುತ್ತವೆ. ಯೋಗ, ಧ್ಯಾನ, ಪ್ರಾಣಾಯಾಮ, ಪ್ರವಚನ, ಸೇವೆ ಮುಂತಾದ ರೀತಿಯಲ್ಲಿ ಬದುಕಲ್ಲಿ ಅರ್ಥ ಕಳೆದುಕೊಂಡವರಿಗೆ ಹೊಸ ಅರ್ಥ ತಂದುಕೊಡುತ್ತವೆ ಆಶ್ರಮಗಳು. ನಮ್ಮ ದೇಶದಲ್ಲಿ ಸಾಕಷ್ಟು ಆಶ್ರಮಗಳಿವೆ. ಅವುಗಳಲ್ಲಿ ಈ ಕೆಲ ಆಶ್ರಮಗಳು ಹೆಚ್ಚು ಪ್ರಸಿದ್ಧವಾಗಿವೆ. ಅವಕ್ಕೆ ಜಗತ್ತಿನಾದ್ಯಂತ ಅನುಯಾಯಿಗಳಿದ್ದಾರೆ. ಎಷ್ಟೋ ಜನ ಇಲ್ಲಿ ನೆಮ್ಮದಿ ಅರಸಿ ಬಂದವರು ಇಲ್ಲಿಯೇ ಸೇವೆ ಮಾಡಿಕೊಂಡು ಶಾಶ್ವತವಾಗಿ ನೆಲೆಸಿದವರೂ ಇದ್ದಾರೆ. ಅಂಥ ಕೆಲ ಆಶ್ರಮಗಳ ಬಗ್ಗೆ ನೋಡೋಣ.

ಆರ್ಟ್ ಆಫ್ ಲಿವಿಂಗ್, ಬೆಂಗಳೂರು (Art Of Living, Bengaluru)
1982ರಲ್ಲಿ ರವಿಶಂಕರ್ ಗುರೂಜಿ ಹುಟ್ಟು ಹಾಕಿದ ಆರ್ಟ್ ಆಫ್ ಲಿವಿಂಗ್ ಆಶ್ರಮ ಹೆಸರು ಕೇಳದವರು ಬಹುಷಃ ಯಾರೂ ಇಲ್ಲ. ಈ ಆಶ್ರಮವು ಜಗತ್ತಿನಾದ್ಯಂತ ಸುಮಾರು 156 ಶಾಖೆಗಳನ್ನು ಹೊಂದಿದ್ದು, ಸ್ವಯಂಸೇವಕರಿಂದಲೇ ಸಾಕಷ್ಟು ಸಂಸ್ಥೆಗಳು ನಡೆಯುತ್ತಿವೆ. ಒತ್ತಡ ನಿವಾರಣೆ(stress relief) ಹಾಗೂ ವ್ಯಕ್ತಿತ್ವ ವಿಕಸನ(personality development) ಕಾರ್ಯಕ್ರಮಗಳಿಂದಾಗಿ ಪ್ರಸಿದ್ಧಿ ಪಡೆದಿರುವ ಈ ಆಶ್ರಮವು ಜನರ ಜೀವನ ಗುಣಮಟ್ಟ ವೃದ್ಧಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಇಲ್ಲಿ ಹಲವಾರು ಸೆಲ್ಫ್ ಡೆವಲಪ್ಮೆಂಟ್ ಕೋರ್ಸ್‌ಗಳು ಲಭ್ಯವಿದ್ದು, ಉಸಿರಾಟ ತಂತ್ರಗಳು, ಯೋಗ, ಧ್ಯಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. 

Latest Videos

ಈಶ ಯೋಗ ಕೇಂದ್ರ, ಕೊಯಮತ್ತೂರು(Isha Yoga Center, Koyamattur)
ಈಶ ಹೆಸರು ಕೇಳಿದೊಡನೆ ಕಣ್ಮುಂದೆ ಬರುವುದೇ ಸದ್ಗುರು ಜಗ್ಗಿ ವಾಸುದೇವ್ ಹಾಗೂ ಮುಗಿಲೆತ್ತರಕ್ಕೆ ನಿಂತ ಶಿವನ ಸ್ವರೂಪ. ಶಿವನ ಸ್ವರೂಪ ಮನಸ್ಸಿಗೆ ಶಾಂತಿ ನೀಡಿದರೆ, ಸದ್ಗುರುವಿನ ಮಾತು ಗುರಿಯ ಹಾದಿಯ ಎಲ್ಲ ಗೊಂದಲ, ಅನುಮಾನಗಳನ್ನೂ ಬಗೆಹರಿಸುತ್ತದೆ. ಈ ಈಶ ಯೋಗ ಕೇಂದ್ರವನ್ನು  1992ರಲ್ಲಿ ಕೊಯಮತ್ತೂರಿನಲ್ಲಿ ಸದ್ಗುರು ನಿರ್ಮಿಸಿದರು. ಈ ಆಶ್ರಮವು ಹಲವಾರು ಯೋಗ ಹಾಗೂ ಪರಿಸರ ಸಂಬಂಧಿ ಕಾರ್ಯಕ್ರಮಗಳಿಂದ ದೇಶಾದ್ಯಂತ ಹೆಸರು ಮಾಡಿದೆ. ಸಧ್ಯ ಮಣ್ಣು ಹಾಗೂ ಕಾವೇರಿ ಉಳಿಸುವ ಈಶ ಕೆಲಸ ಎಲ್ಲೆಡೆ ಜಾಗೃತಿ ಮೂಡಿಸುತ್ತಿದೆ. ಈಶದ ಇನ್ನರ್ ಇಂಜಿನಿಯರಿಂಗ್ ಪ್ರೋಗ್ರಾಂ ಜನರನ್ನು ತಮ್ಮ ಇನ್ನರ್ ಸೆಲ್ಫ್ ಕುರಿತು ಅಧ್ಯಯನ ಮಾಡುವಂತೆ ಪ್ರೇರೇಪಿಸುತ್ತದೆ. ಧ್ಯಾನ ಹಾಗೂ ಯೋಗ ಇಲ್ಲಿ ಪ್ರತಿದಿನ ನಡೆಯುತ್ತದೆ. ಜನರನ್ನು ಆಧ್ಯಾತ್ಮಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿಸುವ ಕೆಲಸ ಈಶ ಮಾಡುತ್ತಿದೆ. 

ನಿಮ್ಮ ಹೆಸರು A ಅಕ್ಷರದಿಂದ ಶುರುವಾಗುತ್ತಾ? ಅದು ನಿಮ್ಮ ಬಗ್ಗೆ ಏನು ಹೇಳ್ತಿದೆ ಗೊತ್ತಾ?

ಓಶೋ ಮೆಡಿಟೇಶನ್ ರೆಸಾರ್ಟ್, ಪೂನಾ(Osho meditation resort, Pune)
ಲೈಂಗಿಕ ವಿಷಯದ ಕುರಿತ ತಮ್ಮ ನಿಲುವಿನಿಂದಾಗಿ ಓಶೋ ಭಾರತದ ಬಹು ವಿವಾದಾತ್ಮಕ ಆಧ್ಯಾತ್ಮ ನಾಯಕ(Spiritual leader)ರೆನಿಸಿಕೊಂಡಿದ್ದವರು. ಇಲ್ಲಿ ಮೊದಲು ನಗ್ನತೆ ಹಾಗೂ ಫ್ರೀ ಲವ್ ಪ್ರೋತ್ಸಾಹಿಸಲಾಗುತ್ತಿತ್ತು. ಆದರೆ ಈಗ ಬದಲಾಗಿದೆ. ಆದರೆ, ಓಶೋ ಆಶ್ರಮದಲ್ಲಿ ಎಲ್ಲಿಯೂ ಲಿಂಗಬೇಧವಿಲ್ಲ. ಇದು ಆಶ್ರಮಕ್ಕಿಂತ ರೆಸಾರ್ಟ್ ಹಾಗಿದ್ದು, ಜನರಿಗೆ ಆರಾಮಾಗಿ ಇಷ್ಟ ಬಂದಂತೆ ಇರಲು ಪ್ರೇರೇಪಿಸುತ್ತದೆ. ಆದರೆ, ಇಲ್ಲಿರುವವರು ಕೆಂಪು ಬಣ್ಣದ ವಸ್ತ್ರ ಧರಿಸಬೇಕು. ಇದು ಭಾರತಕ್ಕಿಂತ ವಿದೇಶಿ ಸಂಸ್ಕೃತಿಯಂತಿದೆ. ಹೊಸ ತಲೆಮಾರಿನ ಸ್ಪಾ ಹಾಗೂ ಸಾಂಪ್ರದಾಯಿಕ ಆಶ್ರಮದ ಸಮ್ಮಿಲನದಂತಿರುವ ಇಲ್ಲಿ ಜಗತ್ತಿನಾದ್ಯಂತದ ಓಶೋ ಫಾಲೋವರ್ಸ್ ಬಂದು ಶಾಂತಿ ಕಂಡುಕೊಳ್ಳುತ್ತಾರೆ.

ಶ್ರೀ ಅರಬಿಂದೋ ಆಶ್ರಮ, ಪುದುಚೆರಿ(Arabindo Ashram, Puducherry)
ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಅರಬಿಂದೋ ಆಶ್ರಮಕ್ಕೆ ಬೇರೆ ವಿವರಣೆಗಳೇ ಬೇಕಿಲ್ಲ. ಫ್ರೆಂಚ್ ಮಹಿಳೆ ಮೀರಾ ಅಲ್ಫಾಸಾ ಹಾಗೂ ಅರಬಿಂದೋ ಅವರು ಸೇರಿ 1926 ನಿರ್ಮಿಸಿದ ಈ ಆಶ್ರಮದ ಶಾಖೆಗಳು ಇಂದು ದೇಶಾದ್ಯಂತ ಹಬ್ಬಿವೆ. ಹೊಸ ಜಗತ್ತು, ಹೊಸ ಮಾನವತೆ ನಿರ್ಮಾಣದ ಕನಸಿನಲ್ಲಿ ಸಾಗುತ್ತಿರುವ ಆಶ್ರಮದಲ್ಲಿ 80 ವಿಭಾಗಗಳಿದ್ದು, ಇಲ್ಲಿರಲು ಬರುವವರು ದಿನಕ್ಕೊಂದು ವಿಭಾಗದಲ್ಲಿರಬೇಕಾಗುತ್ತದೆ. ಇಲ್ಲಿ ಲೈಬ್ರರಿ, ಆಟದ ಮೈದಾನ, ಡೈರಿ, ನರ್ಸಿಂಗ್ ಹೋಂ, ಗಾರ್ಡನ್, ತೋಟ, ಗೆಸ್ಟ್ ಹೌಸ್ ಮುಂತಾದ ವ್ಯವಸ್ಥೆಗಳಿವೆ.

ಏಪ್ರಿಲ್‌ನಲ್ಲಿ ನಡೆಯಲಿದೆ 'ಮಹಾಗೋಚಾರ', ಈ ಐದು ರಾಶಿಗಳಿಗೆ ಶುಭ ವಿಚಾರ

ಮಾತಾ ಅಮೃತಾನಂದಮಯಿ ಆಶ್ರಮ, ಕೊಲ್ಲಂ(Mata Amritanandamayi Ashram, Kollam)
ಹಗ್ಗಿಂಗ್ ಮದರ್ ಎಂದೇ ಹೆಸರಾಗಿರುವ ಮಾತಾ ಅಮೃತಾನಂದಮಯಿ ಅವರು ದೇಶದ ಖ್ಯಾತ ಆಧ್ಯಾತ್ಮ ನಾಯಕರಲ್ಲಿ ಒಬ್ಬರಾಗಿದ್ದಾರೆ. ಜಗತ್ತಿನಲ್ಲಿ ಕೊರತೆಯಿರುವ ಪ್ರೀತಿಯನ್ನು ತುಂಬುವ ನಿಟ್ಟಿನಲ್ಲಿ ಅಮ್ಮನ ಆಸರೆ ಬೇಡಿ ಬರುವ ಅನುಯಾಯಿಗಳನ್ನು ತಬ್ಬಿಕೊಂಡು ಸಾಂತ್ವಾನ ಹೇಳುತ್ತಾರೆ ಅವರು. ಕೊಲ್ಲಂನಲ್ಲಿರುವ ಇವರ ಆಶ್ರಮದಲ್ಲಿ ಅಮ್ಮ ತಮ್ಮನ್ನು ನಂಬಿ ಬಂದವರ ಸಮಸ್ಯೆಗಳನ್ನು ಆಲಿಸಿ, ಅವೆಲ್ಲಕ್ಕೂ ಉತ್ತರ ನೀಡುತ್ತಾರೆ. ಸಮಸ್ಯೆಯಿಂದ ಹೊರಬರಲು ದಾರಿ ತೋರಿಸುತ್ತಾರೆ. ಅಮ್ಮನನ್ನು ನೋಡಲೆಂದೇ ಸಾವಿರಾರು ಸಂಖ್ಯೆಯಲ್ಲಿ ಶಿಶ್ಯವರ್ಗ ಇಲ್ಲಿಗೆ ಆಗಮಿಸುತ್ತದೆ. ವಾರದ ನಾಲ್ಕು ದಿನ ಬೆಳಗ್ಗೆ 10ರಿಂದ ಅಮ್ಮ ದರ್ಶನ ನೀಡುತ್ತಾರೆ. 

click me!