ಕುಡಿದ ಮತ್ತಿನಲ್ಲಿ ಏರ್‌ಪೋರ್ಟ್ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಪೊಲೀಸರು ಮಲೆಯಾಂ ನಟ ವಿನಾಯಕನ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಹೈದರಾಬಾದ್: ಕುಡಿದ ಮತ್ತಿನಲ್ಲಿ ಏರ್‌ಪೋರ್ಟ್ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಪೊಲೀಸರು ಮಲೆಯಾಂ ನಟ ವಿನಾಯಕನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ವಿನಾಯಕನ್ ಅವರು ಕೊಚ್ಚಿಯಿಂದ ಹೈದರಾಬಾದ್ ಮೂಲಕ ಗೋವಾಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಶನಿವಾರ ರಾತ್ರಿ ಅವರು ಏರ್‌ಪೋರ್ಟ್ ಗೇಟ್ ಸ್ಟಾಪ್ ಜೊತೆ ಅಸಭ್ಯವಾಗಿ ವರ್ತಿಸಿದ ನಂತರ ಏರ್‌ಪೋರ್ಟ್ ಭದ್ರತೆಗೆ ಇರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ವಿನಾಯಕನ್ ಅವರು ವಿಚಾರಣೆ ನಂತರ ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಲೈಂಗಿಕ ಗುಲಾಮಳಂತೆ ಸತತವಾಗಿ ಬಳಸಿಕೊಂಡ, ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ಸೌಮ್ಯ!
ವಿನಾಯಕನ್ ಅವರು ಮಲೆಯಾಳಂ ಸಿನಿಮಾಗಳಾದ ಕಮ್ಮಟಿಪಾಡಂ ಹಾಗೂ ತೊಟ್ಟಪ್ಪನ್ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದು ಇವರ ನಟನೆ ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ. ಕೊಚ್ಚಿ ಮೂಲದವರಾದ ವಿನಾಯಕನ್ ಅವರು ವಿಲನ್ ರೋಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ರಜನಿಕಾಂತ್ ಅವರ ಇತ್ತೀಚಿನ ಸಿನಿಮಾ ಜೈಲರ್‌ನಲ್ಲಿ ಅವರು ಖಳನಾಯಕನ ಪಾತ್ರ ಮಾಡಿದ್ದು ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ದುಬೈನ ಹೊಟೇಲ್‌ನಲ್ಲಿ ಊಟ ನೀರು ಕೊಡದೇ 3 ದಿನ ಕೂಡಿ ಹಾಕಿದ ನಟ ನಿವಿನ್ ಪೌಲ್ ಗ್ಯಾಂಗ್