ಖಾಸಗಿ ಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್ ನೀಡಿದ ಸರ್ಕಾರ!

By Suvarna News  |  First Published Apr 10, 2021, 2:58 PM IST

ಕೊರೋನಾ ಸಂಕಷ್ಟ ಸಮಯದಲ್ಲಿ ಶಾಲೆಗಳಿಲ್ಲದೇ ಕಷ್ಟ ಅನುಭವಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರ ಗುಡ್‌ ನ್ಯೂಸ್ ನೀಡಿದೆ.


ಹೈದರಾಬಾದ್, (ಏ.10): ರಾಜ್ಯದಲ್ಲಿ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗೆ ಸರ್ಕಾರದ ವತಿಯಿಂದ 2 ಸಾವಿರ ರೂಪಾಯಿ ಸಹಾಯ ಧನ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ 25 ಕೆಜಿ ಅಕ್ಕಿಯನ್ನ ಉಚಿತವಾಗಿ ಪ್ರತಿ ತಿಂಗಳು ನೀಡೋದಾಗಿ ತೆಲಂಗಾಣ ಸರ್ಕಾರ ಘೋಷಣೆ ಮಾಡಿದೆ. ಶಾಲೆಗಳು ಪುನಾರಂಭವಾಗುವರೆಗೂ ಏಪ್ರಿಲ್​ ತಿಂಗಳಿನಿಂದ ಈ ಸೌಲಭ್ಯ ಸಿಗಲಿದೆ.

ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಈ ವಿಚಾರವಾಗಿ ಮಾತನಾಡಿ, ಕೊರೋದಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಾಗಿಲು ಹಾಕಿವೆ. ಹೀಗಾಗಿ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ನೆರವಾಗಲಿ ಎಂಬ ಕಾರಣಕ್ಕೆ ಈ ತಿಂಗಳಿನಿಂದ ಶಾಲೆಗಳು ಪುನಾರಂಭವಾಗುವವರೆಗೂ 2000 ರೂ. ಸಹಾಯ ಧನ ಹಾಗೂ 25 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ ಎಂದು ಪ್ರಕಟಿಸಿದ್ದಾರೆ.

Latest Videos

undefined

ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್

ತೆಲಂಗಾಣ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸರಿ ಸುಮಾರು 50 ಲಕ್ಷ ಸಿಬ್ಬಂದಿಗೆ ಇದರಿಂದ ನೆರವಾಗಲಿದೆ ಎಂದು ತೆಲಂಗಾಣ ಸರ್ಕಾರ ಅಂದಾಜಿಸಿದೆ. 

ಈ ಯೋಜನೆಯ ಫಲಾನುಭವಿಯಾಗಲು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ತಮ್ಮ ಬ್ಯಾಂಕ್​ ಖಾತೆ ವಿವರ ಹಾಗೂ ಇತರೆ ಸೂಕ್ತ ಮಾಹಿತಿ ನೀಡಬೇಕು ಸಿಎಂ ತಿಳಿಸಿದ್ದಾರೆ.

click me!