ಫ್ರೀ ಟೈಂ ಕಳೆಯುವುದು ಹೇಗೆ? ರೋಬೋಟ್ ಆಗದಂತೆ ಪಿಎಂ ಸಲಹೆ

By Suvarna NewsFirst Published Apr 7, 2021, 8:59 PM IST
Highlights

ಪರೀಕ್ಷಾ ಪೇ ಚರ್ಚಾ ವೇಳೆ ಫ್ರೀ ಟೈಂ ಕಳೆಯುವುದು ಹೇಗೆಂದು ಹೇಳಿಕೊಟ್ಟ ಮೋದಿ| ಚಿಕ್ಕ ಪುಟ್ಟ ವಿಚಾರದ ಬಗ್ಗೆ ಗಮನಹರಿಸಿ| ರೋಬೋಟ್‌ಗಳಾಗಬೇಡಿ

ನವದೆಹಲಿ(ಏ.07): ಇದೇ ಮೊದಲ ಬಾರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವರ್ಚುವಲ್ ಆಗಿ ನಡೆಯುತ್ತಿದೆ. ಹೀಗಿರುವಾಗ ವಿದ್ಯಾರ್ಥಿಗಳೊಂದಿಗೆ ಇಂದು ಪಿಎಂ ಮೋದಿ ಸ್ನೇಹಿತರಾಗಿ ಮಾತುಗಳನ್ನಾರಂಭಿಸಿದ್ದಾರೆ. ಪರೀಕ್ಷೆ ಎದುರಿಸಲು ಬೇಕಾದ ಸಲಹೆ ನೀಡುವುದರೊಂದಿಗೆ, ಧೈರ್ಯವನ್ನೂ ತುಂಬಿದ್ದಾರೆ. 

ನೀಲ್‌ ಅನಂತ್, 12ನೇ ತರಗತಿ, ತಮಿಳುನಾಡು: ಇವರು ಕೇಳಿದ ಪ್ರಶ್ನೆ| ಆನ್‌ಲೈನ್‌ ಕ್ಲಾಸ್‌ ಆರಂಭವಾದ ಬಳಿಕ ಸಾಮಾನ್ಯ ತರಗತಿಗಿಂತ ಹೆಚ್ಚು ಫ್‌ರೀ ಟೈಂ ಸಿಗುತ್ತದೆ. ಹೀಗಿರುವಾಗ ಸಮಯವನ್ನು ಹೇಗೆ ಸದುಪಯೋಗಪಡಿಸಬೇಕು?

ಮೋದಿ ಕೊಟ್ಟ ಉತ್ತರ: ಪರೀಕ್ಷೆಯ ಸಂದರ್ಭದಲ್ಲೂ ನೀವು ಫ್ರೀ ಟೈಂ ಬಗ್ಗೆ ಗಮನಹರಿಸುತ್ತಿದ್ದೀರಿ. ಫ್ರೀ ಟೈಂ ಖಾಲಿ ಸಮಯವಲ್ಲ, ಇದು ಖಜಾನೆಯಂತೆ. ಇದೊಂದು ಸೌಭಾಗ್ಯ ಹಾಗೂ ಅವಕಾಶ. ನಿಮ್ಮ ದಿನಚರಿಯಲ್ಲಿ ಇಂತಹ ಫ್ರೀ ಟೈಂ ಇರಲೇಬೇಕು. ಇಲ್ಲದಿದ್ದರೆ ಜೀವನ ರೋಬೋಟ್‌ನಂತಾಗುತ್ತದೆ. ಆದರೆ ಈ ಫ್ರಿಂ ಟೈಂ ಎರಡು ರೀತಿ ಇರುತ್ತದೆ. ಮೊದನೆಯದಾಗಿ ನಿಮಗೆ ಬೆಳಗ್ಗೆಯೇ ನೀವು ಯಾವ ಹೊತ್ತಿಗೆ ಫ್ರೀಯಾಗಿರುತ್ತೀರೆಂದು ತಿಳಿದಿರುತ್ತದೆ. ಎರಡನೇ ರೀತಿಯಲ್ಲಿ ನೀವು ಫ್ರೀ ಇರುತ್ತೀರೆಂದು ಕೊನೆಯು ಸಂದರ್ಭದಲ್ಲಿ ತಿಳಿಯುತ್ತದೆ. ಒಂದು ವೇಳೆ ನಿಮಗೆ ಮೊದಲೇ ಫ್ರೀಯಾಗಿರುತ್ತೇನೆಂದು ತಿಳಿದಿದ್ದರೆ, ನೀವು ಹೆತ್ತವರೊಂದಿಗೆ, ಒಡಹುಟ್ಟಿದವರಿಗೆ ಸಹಾಯ ಮಾಡಬೇಕಾ? ಎಂದು ಪ್ರಶ್ನಿಸಿ. ಎರಡನೆಯದಾಗಿ ನಿಮಗೆ ಖುಷಿ ಕೊಡುವ ವಿಚಾರ ಯಾವುದೆಂದು ಯೋಚಿಸಿ. 

ಇದೇ ಪ್ರಶ್ನೆ ನನ್ನ ಬಳಿ ಕೇಳಿದ್ರೆ, ನನಗೆ ನಾನು ಫ್ರೀಯಾಗಿದ್ದು ಪಕ್ಕದಲ್ಲಿ ಜೋಕಾಲಿ ಇದ್ದರೆ, ನಾನು ತಪ್ಪದೇ ಜೋಕಾಲಿಯಲ್ಲಿ ಕುಳಿತು ಆಯಾಸ ಪರಿಹರಿಸಿಕೊಳ್ಳುತ್ತೇನೆ.  ಇದರಿಂದ ಮನಸ್ಸಿಗೆ ಖುಷಿಯಾಗುತ್ತದೆ. ಫ್ರಿಂ ಟೈಂ ನಿಮಗಿಷ್ಟವಾಗುವಂತೆ ಕಳೆದರೆ ಅದರ ಬೆಲೆ ತಿಳಿಯುತ್ತದೆ. ಹೀಗಾಗಿ ನಿಮ್ಮ ಜೀವನದಲ್ಲಿ ಫ್ರೀ ಟೈಂ ಅತೀ ಹೆಚ್ಚು ಆನಂದ ನೀಡುವಂತೆ ಕಳೆಯಿರಿ.  ಇಲ್ಲಿ ಯಾವೆಲ್ಲಾ ವಿಚಾರಗಳಿಂದ ದೂರವಿರಬೇಕೆಂದೂ ನಿಮಗೆ ತಿಳಿದಿರಬೇಕು. ಇಲ್ಲದಿದ್ದರೆ ಇದು ನಿಮ್ಮ ಸಮಯವನ್ನು ಹಾಳು ಮಾಡುತ್ತದೆ ಎಂದು ನಿಮಗೇ ತಿಳಿಯುವುದಿಲ್ಲ. ಕೊನೆಯಲ್ಲಿ ಖುಷಿಯಾಗುವ ಬದಲು ಆಯಾಸವಾಗಬಹುದು. 

ಇನ್ನು ಫ್ರಿಂ ಟೈಂನಲ್ಲಿ ನಿಮ್ಮ ಕುತೂಹಲ ಕೆರಳಿಸುವ ವಿಚಾರಗಳ ಮೇಲೆ ಗಮನಹರಿಸಿ. ಹೊಸ ವಿಚಾರ ತಿಳಿದುಕೊಳ್ಳಲು ಯತ್ನಿಸಿ. ಸಣ್ಣ ಪುಟ್ಟ ವಿಚಾರಗಳೂ ಜೀವನದಲ್ಲಿ ಬಹಳ ಪ್ರಭಾವ ಬೀರುತ್ತವೆ. ಇದನ್ನು ತಿಳಿದುಕೊಳ್ಳಿ. ಇದು ಮುಂದೆ ಜೀವನದಲ್ಲಿ ನಿಮ್ಮನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬಹುದು. 

click me!