ಕೊರೋನಾ ಮುಗಿದಾಯ್ತು ಆನ್‌ಲೈನ್ ಕ್ಲಾಸ್ ಮಾತ್ರ ಮುಗಿಯಂಗಿಲ್ಲ!

By Suvarna News  |  First Published Jan 26, 2021, 4:10 PM IST

ಕೊರೋನಾ ಹಿನ್ನೆಲೆಯಲ್ಲಿ ಆನ್‌ಲೈನ್ ಶಿಕ್ಷಣ ಅನಿವಾವಾರ್ಯವಾಗಿತ್ತು. ಸೋಂಕು ತಡೆಯಲು ಎಲ್ಲ ಶಾಲಾ ಕಾಲೇಜುಗಳನ್ನು ಮುಚ್ಚಿದ್ದರಿಂದ ಆನ್‌ಲೈನ್ ಮೂಲಕ ಮಕ್ಕಳಿಗೆ ಕಲಿಸಲಾಗುತ್ತಿತ್ತು. ಆದರೆ, ಅಧ್ಯಯನದ ವರದಿಯೊಂದರ ಪ್ರಕಾರ, ಕೊರೋನಾ ಬಳಿಕವೂ ಆನ್‌ಲೈನ್ ಕಲಿಕೆ ಅನಿವಾರ್ಯವಾಗಲಿದೆ.


ಕೊರೋನಾ ಬಂದ್ಮೇಲೆ ಮಕ್ಕಳಿಗೆ ಅಂತರ್ಜಾಲವೇ ಲೋಕ ಆಗ್ಬಿಟಿದೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಓದು, ಬರಹ ಕಲಿಯಬೇಕಾದ ಪರಿಸ್ಥಿತಿ ಅವರದ್ದು. ಸದ್ಯ ದೇಶದಲ್ಲಿ ಕೊರೋನಾ ಆರ್ಭಟ ಇಳಿಕೆಯಾಗುತ್ತಿದ್ದು, ಬಹುತೇಕ ರಾಜ್ಯಗಳಲ್ಲಿ ಶಾಲೆ-ಕಾಲೇಜುಗಳು ಶುರುವಾಗಿವೆ.

ಕೆಲವು ರಾಜ್ಯಗಳಲ್ಲಿ ಇನ್ನು ಪ್ರಾಥಮಿಕ ಹಂತದ ಶಾಲೆಗಳನ್ನು ತೆರೆದಿಲ್ಲ. ಕೊರೋನಾ ಸಣ್ಣ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಸದ್ಯದ ಮಟ್ಟಿಗೆ ಶಾಲೆಗಳನ್ನು ತೆರೆಯುವ ಗೋಜಿಗೆ ಹೋಗಿಲ್ಲ. ಇದರ ನಡುವೆ ಕೊರೋನಾ ಮುಗಿದ ನಂತರವೂ ಆನ್‌ಲೈನ್ ಶಿಕ್ಷಣ ಮುಂದುವರಿಯಬೇಕು ಎಂದು ಅಧ್ಯಯನವೊಂದು ಹೇಳಿದೆ.

Latest Videos

undefined

ಅಂತರ್ಜಾಲ ಸಂಪರ್ಕ ಮತ್ತು ಉಪಕರಣಗಳ ಕೊರತೆಯಂತಹ ಮೂಲಸೌಕರ್ಯ ಸಮಸ್ಯೆಗಳಿದ್ದರೂ, ಸಾಂಕ್ರಾಮಿಕ ರೋಗ ಕಾಲ ಮುಗಿದ ನಂತರವೂ ಆನ್‌ಲೈನ್ ಶಿಕ್ಷಣ ಕ್ರಮವನ್ನು ಮುಂದುವರಿಸಬೇಕು ಎಂದು ಗಾಂಧಿನಗರದ ಭಾರತೀಯ ಶಿಕ್ಷಕರ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ನಡೆಸಿದ ಸಂಶೋಧನೆಯ ವರದಿ ತಿಳಿಸಿದೆ.

ಕೆಲಸ ಖಾಲಿ ಇದೆ! 52 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿರುವ ಬಿಇಎಲ್

15 ಜನ ಶಿಕ್ಷಕರ ತಂಡ, ಶಿಕ್ಷಣ ಇಲಾಖೆಯಲ್ಲಿ ಮುಖ್ಯ ಸಂಶೋಧಕರಾಗಿರುವ ಇಬ್ಬರು ಸಹಾಯಕ ಪ್ರಾಧ್ಯಾಪಕರು ಜೊತೆಗೂಡಿ ಜುಲೈ 2020 ರಿಂದ ಐದು ತಿಂಗಳುಗಳಲ್ಲಿ ಗುಜರಾತ್ ಶಾಲಾ ಶಿಕ್ಷಣದಲ್ಲಿ ಆನ್‌ಲೈನ್ ಶಿಕ್ಷಣದ ಪ್ರಭಾವ ಕುರಿತು ಅಧ್ಯಯನವನ್ನು ನಡೆಸಿತು.

ಇಂಟರ್ನೆಟ್ ಸಂಪರ್ಕದಂತಹ ಹಲವು ಸಮಸ್ಯೆಗಳಿದ್ರೂ, ವಿಶೇಷವಾಗಿ ಪ್ರೀ-ಪ್ರೈಮರಿ ಅಥವಾ ಲೋಯರ್ ಪ್ರೈಮರಿ ತರಗತಿಗಳಿಗೆ ಕೋವಿಡ್ ಸಾಂಕ್ರಾಮಿಕ ರೋಗ ಮುಗಿದ ನಂತರವೂ ಆನ್‌ಲೈನ್ ಶಿಕ್ಷಣವನ್ನು ಮುಂದುವರಿಸಬೇಕೆಂದು ಸಮಿತಿ ಸಲಹೆ ನೀಡಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆಗೆ, ಶಿಕ್ಷಣ ತಜ್ಞರು ಸಹ ಆನ್‌ಲೈನ್ ಮತ್ತು ಆಫ್‌ಲೈನ್ ಶಿಕ್ಷಣದ ಮಿಶ್ರಣವನ್ನು ಹೊಂದಿರಬೇಕು ಅನ್ನೋದು ಶಿಕ್ಷಣ ಇಲಾಖೆಯ ಐಐಟಿಇ ವಿಭಾಗದ ಪ್ರೊಫೆಸರ್ ನಿಶಾಂತ್ ಜೋಶಿ ಅಭಿಪ್ರಾಯ.

ಈ ಅಧ್ಯಯನವು ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಪ್ರತಿನಿಧಿಸುವ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ತಜ್ಞರು, ಸರ್ಕಾರದ ಅನುದಾನಿತ ಮತ್ತು ಪೂರ್ವ ಪ್ರಾಥಮಿಕದಿಂದ ದ್ವಿತೀಯ ಮತ್ತು ಉನ್ನತ ಮಾಧ್ಯಮಿಕ ತರಗತಿಗಳನ್ನು ನಡೆಸುವ ಖಾಸಗಿ ಶಾಲೆಗಳನ್ನು ಒಳಗೊಂಡಿದೆ.

ಇದು ಹೊಸ ಸಾಮಾನ್ಯ  ಪರಿಸ್ಥಿತಿಯ ವಾಸ್ತವ ಮತ್ತು ಅದನ್ನು ನಿರ್ಲಕ್ಷಿಸಲಾಗುವುದಿಲ್ಲ. ಆದಾಗ್ಯೂ, ಆನ್‌ಲೈನ್ ಶಿಕ್ಷಣ ಕ್ರಮವು ಮುಖಾಮುಖಿ ಬೋಧನೆಯ ಪರ್ಯಾಯವಾಗಿರಲು ಸಾಧ್ಯವೇ ಇಲ್ಲ ಎಂದು ಅರ್ಥಮಾಡಿಕೊಳ್ಳುವುದಷ್ಟೇ ಇಲ್ಲಿ ಮುಖ್ಯ. ಆದ್ರೆ ಇದು ಯಾವಾಗಲೂ ಪೂರಕ ವ್ಯವಸ್ಥೆಯಾಗಿರುತ್ತದೆ. ಇದನ್ನು ಪರಿಗಣಿಸಿ, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಶಾಲೆಗಳು ಆನ್‌ಲೈನ್ ಬೋಧನಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ”ಎಂದು ಸಂಶೋಧನೆ ಹೇಳಿದೆ. ಮಕ್ಕಳಲ್ಲಿ ಶಿಸ್ತು ಬೆಳೆಸುವ ಮತ್ತು ಕಲಿಕೆಯ ಅಭ್ಯಾಸವನ್ನು ಬದಲಾಯಿಸುವ ಅಗತ್ಯವನ್ನು ಈ ಅಧ್ಯಯನ ಸೂಚಿಸುತ್ತದೆ ಅಂತಾರೆ ಪ್ರೊಫೆಸರ್ ಜೋಶಿ.

5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಕೌಶಲ್ಯ ತರಬೇತಿ

ಮುಖಾಮುಖಿ ಬೋಧನಾ ಕ್ರಮದಿಂದ ಆನ್‌ಲೈನ್ ಕಲಿಕಾ ಪರಿವರ್ತನೆಯ ಪ್ರಕ್ರಿಯೆಯು ಸುಲಭ, ನೈಸರ್ಗಿಕ, ನಿಧಾನ ಮತ್ತು ಪ್ರಗತಿಪರವಾಗಿರಬೇಕು ಎಂದು ಡೇಟಾದ ಪ್ರತಿಕ್ರಿಯೆ ಮತ್ತು ವಿಶ್ಲೇಷಣೆಯಿಂದ ತಿಳಿದುಬಂದಿದೆ. ಆನ್‌ಲೈನ್ ಕಲಿಕೆಯು ಜ್ಞಾನವನ್ನು ವಹಿವಾಟು ಮಾಡುವ ಉದ್ದೇಶವನ್ನು ಸಾಧಿಸಬಹುದು, ಆದರೆ ಇತರ ಉದ್ದೇಶಗಳನ್ನು ಸಾಧಿಸಲು ಕೇಂದ್ರೀಕೃತ ಪ್ರಯತ್ನಗಳು ಬೇಕಾಗುತ್ತವೆ ಎಂದು ಹೇಳುತ್ತಾರೆ ಪ್ರೊ.ಜೋಶಿ.

ಆನ್‌ಲೈನ್ ಬೋಧನೆಯು ವಿದ್ಯಾರ್ಥಿಗಳ ವೈಯಕ್ತಿಕ ಕಲಿಕೆಯ ಅಗತ್ಯಗಳನ್ನು ಸುಗಮಗೊಳಿಸುತ್ತದೆ ಎಂದು ಡೇಟಾ ವಿಶ್ಲೇಷಣೆಯು ಹೇಳಿದೆ. ಆನ್‌ಲೈನ್ ಶಿಕ್ಷಣದ ಪಠ್ಯಕ್ರಮವು ಚಿಕ್ಕದಾಗಿರಬೇಕು ಮತ್ತು ಚಟುವಟಿಕೆ ಆಧಾರಿತವಾಗಿರಬೇಕು ಅನ್ನೋದು ಪ್ರೊ.ಜೋಶಿ ಸಲಹೆ.

ಆನ್‌ಲೈನ್ ಕಲಿಕೆಯ ಯಶಸ್ಸು ಮತ್ತು ಸಾಮಾಜಿಕ ಅಸಮಾನತೆಗೆ ಕಾರಣವಾಗದಂತೆ ತಡೆಯುವುದು ಸಂಪೂರ್ಣವಾಗಿ ಶಾಲೆಗಳ ಮಟ್ಟದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಸ್ಥಾಪಿಸುವುದರ ಮೇಲೆ ಮತ್ತು ಟ್ಯಾಬ್ಲೆಟ್‌ಗಳು ಮತ್ತು ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕದಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಸಂವಾದಾತ್ಮಕ ತರಗತಿಯಂತಹ ವಾತಾವರಣವನ್ನು ಸೃಷ್ಟಿಸುವ ಅಗತ್ಯವನ್ನು ಅಧ್ಯಯನವು ತೋರಿಸಿದೆ  ಅಂತಾರೆ ಮತ್ತೊಬ್ಬ ಸಂಶೋಧಕ ಪ್ರೊ.ಸುಧೀರ್ ತಂಡೆಲ್.

ಆಂಧ್ರದ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಆ್ಯಪ್ ಬಳಕೆ

click me!