ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್....!

By Suvarna News  |  First Published Sep 2, 2020, 7:35 PM IST

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಇದರೊಂದಿಗೆ ಹಬ್ಬಿದ್ದ ಎಲ್ಲಾ ವದಂತಿಗಳಿಗೆ ಗೊಂದಲಗಳಿಗೆ ತೆರೆ.


ಬೆಂಗಳೂರು, (ಸೆ.02): ವಿದ್ಯಾರ್ಥಿಗಳ ಬಸ್​ಪಾಸ್​ ದರದಲ್ಲಿ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ವಿದ್ಯಾರ್ಥಿಗಳಿಗೆ ಇಷ್ಟುಕಾಲ ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಬಸ್​ಪಾಸ್​ ದರದಲ್ಲಿ ಹೆಚ್ಚಳ ಮಾಡುವುದಿಲ್ಲ. ಹಿಂದಿನ ಮಾನದಂಡಗಳನ್ನು ಬದಲಿಸುವ ಉದ್ದೇಶವಿಲ್ಲ. ಹಾಗಾಗಿ ವಿದ್ಯಾರ್ಥಿಗಳು, ಪಾಲಕರು ಆತಂಕಪಡುವುದು ಬೇಡ ಎಂದು ಸ್ಪಷ್ಟಪಡಿಸಿದರು.

Latest Videos

undefined

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಬಸ್​ನಲ್ಲಿ ಉಚಿತ ಪ್ರಯಾಣ, ಕಂಡಿಷನ್ ಅಪ್ಲೈ

ವಿದ್ಯಾರ್ಥಿಗಳ ಬಸ್​ಪಾಸ್​ ದರ ಹೆಚ್ಚು ಮಾಡಲಾಗುತ್ತದೆ ಎಂಬುದು ವದಂತಿಯಷ್ಟೇ. ಕಳೆದ ಶೈಕ್ಷಣಿಕ ವರ್ಷದಲ್ಲಿ ಯಾವ ನಿಯಮಗಳ ಅನುಸಾರ ಬಸ್​ಪಾಸ್​ ವಿತರಣೆ ಮಾಡಲಾಗುತ್ತಿತ್ತೋ, ಅದೇ ದರದಲ್ಲಿಯೇ ಈ ಬಾರಿಯೂ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 ಕೊರೋನಾ ವೈರಸ್​, ಲಾಕ್​ಡೌನ್​ ಶುರುವಾದಾಗಿನಿಂದ ರಾಜ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿಯೇ ಇದೆ. ಒಂದಷ್ಟು ಕಾಲ ಬಸ್​​ಗಳು ಸಂಚರಿಸಲಿಲ್ಲ. ಇದರಿಂದ  ಕೆಎಸ್‌ಆರ್‌ಟಿಸಿ ಸಂಸ್ಥೆ ಕೋಟಿಗಟ್ಟಲೇ ನಷ್ಟವಾಗಿದೆ. ಇದರಿಂದ ಈ ಬಾರಿ ವಿದ್ಯಾರ್ಥಿಗಳ ಬಸ್​ ಪಾಸ್​ ದರ ಹೆಚ್ಚಿಸಲಾಗುತ್ತದೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು.

ಈ ವದಂತಿ ಹಬ್ಬುತ್ತಿರುವುದು ಸಚಿವ ಲಕ್ಷ್ಮಣ ಸವದಿ ಅವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. 

ಕಳೆದ ಶೈಕ್ಷಣಿಕ ವರ್ಷದಲ್ಲಿ ಬಸ್ ಪಾಸ್‍ಗಳನ್ನು ಯಾವ ಪ್ರಮಾಣದ ದರದಲ್ಲಿ ವಿತರಿಸಲಾಗಿತ್ತೋ  ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೂ ಸಹ ಅದೇ ರೀತಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.

click me!