* ಶಾಲೆ ಪ್ರಾರಂಭದ ಸುಳಿವು ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
* ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಶಾಲೆಗಳ ಭೇಟಿ ವೇಳೆ ಸುಳಿವು
* ತಜ್ಞರು, ಪೋಷಕರು, ಶಿಕ್ಷಕರ ಜೊತೆ ಸಭೆ ಮಾಡಲಾಗಿದೆ ಎಂದ ಸುರೇಶ್ ಕುಮಾರ್
ಬೆಂಗಳೂರು, (ಜು.17): ಕೊರೋನಾ ಸೋಂಕಿನಿಂದಾಗಿ ಸ್ಥಗಿತಗೊಂಡಿದ್ದ ಶಿಕ್ಷಣ ಕ್ಷೇತ್ರದಲ್ಲಿ ಹಂತ-ಹಂತವಾಗಿ ಕಾರ್ಯಚಟುವಟಿಕೆಗಳು ಶುರುವಾಗುತ್ತಿವೆ.
ಅದರಲ್ಲೂ ಪ್ರಮುಖವಾಗಿ ಶಾಲೆ-ಕಾಲೇಜುಗಳು ಪ್ರಾರಂಭ ಯಾವಾಗ ಎನ್ನುವ ಬಗ್ಗೆ ಚರ್ಚೆಗಳು ನಡೆದಿದೆ. ಇದರ ಮಧ್ಯೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಶಾಲೆಗಳ ಪುನರಾಂಭದ ಸುಳಿವು ನೀಡಿದ್ದಾರೆ.
undefined
ಪದವಿ, ಡಿಪ್ಲೊಮೊ ಪರೀಕ್ಷೆಗೆ ಡೆಡ್‌ಲೈನ್, ಕಾಲೇಜು ಆರಂಭದ ಬಗ್ಗೆಯೂ ಡಿಸಿಎಂ ಮಾಹಿತಿ
ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಇಂದು (ಶನಿವಾರ) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಶಾಲೆಗಳ ಭೇಟಿ ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್, ಶಾಲೆ ಆರಂಭಿಸುವ ಬಗ್ಗೆ ಅಕ್ಟೋಬರ್ನಲ್ಲಿ ತೀರ್ಮಾನಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ತಜ್ಞರು, ಪೋಷಕರು, ಶಿಕ್ಷಕರ ಜೊತೆ ಸಭೆ ಮಾಡಲಾಗಿದೆ. ಆರೋಗ್ಯ ಇಲಾಖೆಯ ಸಹಮತ ಕೇಳುತ್ತಿದ್ದೇವೆ. ಶಾಲೆಗಳನ್ನು ಯಾವಾಗ ಪ್ರಾರಂಭ ಮಾಡಬೇಕು, ಯಾವ ರೀತಿ ಆರಂಭ ಮಾಡಬೇಕೆಂದು ತೀರ್ಮಾನಿಸುತ್ತೇವೆ. ಈ ಕುರಿತು ಅಕ್ಟೋಬರ್ ಮೊದಲ ವಾರದಲ್ಲಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಈಗ ಮೂರನೇ ಅಲೆ ಭೀತಿ ಎದುರಾಗಿದ್ದು, ಅದರಲ್ಲೂ ಮಕ್ಕಳಿಗೆ ಹೆಚ್ಚು ಅಪಾಯ ಎಂದು ತಜ್ಞರು ತಿಳಿಸಿದ್ದಾರೆ. ಇದರ ಮಧ್ಯೆ ಶಾಲೆ ಪ್ರಾರಂಭ ಮಾಡುವುದು ಅಪಾಯ.