ಪಿಯುಸಿ ಕಾಮರ್ಸ್ ಆದ ಮೇಲೆ ಯಾವುದೆಲ್ಲ ಕಲಿಯಬಹುದು ಗೊತ್ತಾ?

By Suvarna NewsFirst Published Jan 4, 2021, 6:34 PM IST
Highlights

ದ್ವಿತೀಯ ಪಿಯುಸಿ ಅಥವಾ 12 ನೇ ತರಗತಿಯ ಕಾಮರ್ಸ್ ನಂತರ ಮುಂದೆ ಏನು ಮಾಡಬೇಕು? ಅನ್ನೋದು ವಿದ್ಯಾರ್ಥಿಗಳ ಸಾಮಾನ್ಯ ಪ್ರಶ್ನೆಯಾಗಿದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ 12 ನೇ ತರಗತಿಯ ನಂತರ ಸಾಕಷ್ಟು ಕೋರ್ಸ್‌ಗಳಿವೆ. ಹೀಗಾಗಿ ಅಂತಿಮ ನಿರ್ಧಾರ ಕೈಗೊಳ್ಳೋಕೆ ವಿದ್ಯಾರ್ಥಿಗಳಿಗೆ ಗೊಂದಲವಾಗುವುದು ಸಹಜ. ಆದರೆ, ಅದಕ್ಕೆ ಆಸ್ಪದ ನೀಡದಂತೆ ನಿರ್ಧಾರ ಕೈಗೊಳ್ಳಬೇಕು

೧೨ನೇ ಕ್ಲಾಸ್ ನಂತರ ಗಣಿತದ ತಲೆಬಿಸಿ ಬೇಡ ಅನ್ನೋ ವಿದ್ಯಾರ್ಥಿಗಳು ಬೇರೆ ವಿಭಾಗಗಳತ್ತ ಹೊರಳಲು ಅನೇಕ ಅವಕಾಶಗಳಿರುತ್ತವೆ.  ಕಲಾ ವಿಭಾಗದಂತಹ ಕೋರ್ಸ್‌ಗಳಾದ ಬಿಎ, ಬಿಎಫ್‌ಎ, ಬಿಸಿಎ, ಬಿಜೆಎಂಸಿ ಮತ್ತಿತ್ತರ ಕೋರ್ಸ್‌ಗಳನ್ನ ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಕಾಮರ್ಸ್ ಸ್ಟ್ರೀಮ್‌ನಲ್ಲೇ ಕಲಿಯಲು ಬಯಸುವವರು ಹಲವು ಕೋರ್ಸ್‌ಗಳಲ್ಲಿ ಪದವಿ ಪಡೆಯಬಹುದು. ೧೨ ತರಗತಿಯ ಕಾಮರ್ಸ್ ಪೂರೈಸಿದ ವಿದ್ಯಾರ್ಥಿಗಳು ಬಿ.ಕಾಂ, ಬಿಬಿಎ, ಸಿಎ, ಬಿ.ಕಾಮ್ ಎಲ್‌ಎಲ್‌ಬಿ ಕೋರ್ಸ್ ಮಾಡಬಹುದು. ಈ ಕೋರ್ಸ್‌ಗಳು ವಿದ್ಯಾರ್ಥಿಗೆ ಅಕೌಂಟಿಂಗ್, ಫೈನಾನ್ಸ್, ಆಡಿಟಿಂಗ್, ತೆರಿಗೆ, ಹೂಡಿಕೆ, ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ವೃತ್ತಿಜೀವನ ಮಾಡಲು ದಾರಿ ಮಾಡಿಕೊಡುತ್ತವೆ.

- ಬಿ.ಕಾಂ
 ಬಿ.ಕಾಂ ಅಥವಾ ಬ್ಯಾಚುಲರ್ ಆಫ್ ಕಾಮರ್ಸ್ ಅನ್ನೋದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖವಾದ ಚಿರಪರಿಚಿತವಾದದ್ದು. ೩ ವರ್ಷದ ಈ ಡಿಗ್ರಿ ಕೋರ್ಸ್ ಅನ್ನು ರೆಗ್ಯುಲರ್ ಹಾಗೂ ಕರೆಸ್ಪಾಂಡೆನ್ಸ್ ಮಾದರಿಯಲ್ಲಿ ಪಡೆಯಬಹುದು. ಐಜಿಎನ್‌ಒಯು, ಢಿಯು ಎಸ್‌ಒಎಲ್ ಹಾಗೂ ಕೆಲವು ಶೈಕ್ಷಣಕ ಸಂಸ್ಥೆಗಳು ಬಿ.ಕಾಂ ಕೋರ್ಸ್‌ಗಳನ್ನ ಕರೆಸ್ಪಾಡೆನ್ಸ್ ಮಾದರಿಯಲ್ಲಿ ನೀಡುತ್ತವೆ.  ೧೨ನೇ ತರಗತಿಯಲ್ಲಿ ಗಣಿತ ಇಲ್ಲದಿದ್ರೂ ಕೆಲವು ಕಾಲೇಜುಗಳು ಬಿ,ಕಾಂ. ಅಡ್ಮಿಷನ್ ಕೊಡುತ್ತದೆ. ಇನ್ನು ಕೆಲವು ಕಾಲೇಜುಗಳಲ್ಲಿ ಬಿ.ಕಾಂ. ಪದವಿ ಸೇರಲು ಮ್ಯಾಥ್ಸ್ ಕಡ್ಡಾಯ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಕಾಲೇಜ್ ಮೆಂಟರ್‌ಶಿಪ್ ಆರಂಭಿಸಿದ ಆ್ಯಪಲ್ ಕಂಪನಿ!

-ಬಿ,ಕಾಂ ಹಾನರ್ಸ್
ಬ್ಯಾಚುಲರ್ ಆಫ್ ಕಾಮರ್ಸ್ ವಿತ್ ಹಾನರ್ಸ್ ಅನ್ನು ಬಿ.ಕಾಂ ಹಾನ್ಸ್ ಎಂದು ಕರೆಯಲಾಗುತ್ತದೆ. ಇದು ಮೂರು ವರ್ಷಗಳ ಕೋರ್ಸ್ ಆಗಿದೆ. ಸ್ಪೆಷಲೈಜನ್ ಮಾಡಲು ಬಯಸುವ ವಿದ್ಯಾರ್ಥಿಗಳು ವಿಷಯ ಅಥವಾ ಕ್ಷೇತ್ರವನ್ನು ಆಯ್ಕೆ ಮಾಡಬಹುದು. ಅಕೌಂಟ್ಸ್, ಫೈನಾನ್ಸ್, ಮಾರ್ಕೆಟಿಂಗ್ ಆಂಡ್ ಇಂಟರ್‌ನ್ಯಾಷನಲ್ ಬ್ಯುಸಿನೆಸ್, ಟ್ಯಾಕ್ಸ್ ಪ್ಲಾನಿಂಗ್ ಆಂಡ್ ಮಾರ್ಕೆಟಿಂಗ್ ಸೇರಿಕೊಳ್ಳಬಹುದು.

-ಬಿಬಿಎ
ಬಿಬಿಎ ಅಥವಾ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮೂರು ವರ್ಷಗಳ ಕೋರ್ಸ್ ಆಗಿದೆ. ಇದು ವಿದ್ಯಾರ್ಥಿಗಳಿಗೆ ಅವರ ನಿಜ ಜೀವನದ ವ್ಯವಹಾರ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡುತ್ತದೆ. 12 ನೇ ತರಗತಿಯ ವಾಣಿಜ್ಯ ವಿಭಾಗದಲ್ಲಿ ಶೇ 50 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಲು ಅರ್ಹರು. ಕೆಲ ಸಂಸ್ಥೆಗಳು AIMA UGAT, SET, IPU CET ಮತ್ತು ಇತರ ಪ್ರವೇಶ ಪರೀಕ್ಷೆಗಳ ಈ ಕೋರ್ಸ್‌ಗೆ ಪ್ರವೇಶ ನೀಡುತ್ತವೆ.

-ಬಿಎಂಎಸ್ ಕೋರ್ಸ್
ಮ್ಯಾನೇಜ್ಮೆಂಟ್ ಕ್ಷೇತ್ರಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (ಬಿಎಂಎಸ್) ಕೋರ್ಸ್ ಅನ್ನು ಕಲಿಯಬಹುದು. ಕೋರ್ಸ್‌ನ ಅವಧಿ ಒಟ್ಟು 3 ವರ್ಷಗಳು, ಈ ಸಮಯದಲ್ಲಿ ವಿದ್ಯಾರ್ಥಿಗಳು ಸುಧಾರಿತ ನಿರ್ವಹಣಾ ಕೌಶಲ್ಯಗಳನ್ನು ಕಲಿಯುತ್ತಾರೆ. ತಂಡವನ್ನು ಕಟ್ಟುವುದು, ನಾಯಕತ್ವ, ಸಂಘಟಿಸುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳು ನಿರ್ವಹಣಾ ವೃತ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಕೌಶಲ್ಯಗಳಾಗಿವೆ. ಕ್ವಾಲಿಟಿ ಸ್ಪೆಷಲಿಸ್ಟ್, ಹೆಚ್ ಆರ್ ಎಕ್ಸಿಕ್ಯುಟಿವ್, ಬ್ಯುಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್- ಇತ್ಯಾದಿ ಕೆಲ ಉದ್ಯೋಗಗಳು ಬಿಎಂಎಸ್ ವಿದ್ಯಾರ್ಥಿಗಳಿಗೆ ಸೂಕ್ತವಾದವು.

ಹಳ್ಳಿಯ ಒಂದೇ ಕುಟುಂಬದ ಮೂವರು ಸೋದರಿಯರಿಂದ ಇತಿಹಾಸ ಸೃಷ್ಟಿ, ಏನದು?

-ಬಿ.ಕಾಂ ಎಲ್‌ಎಲ್‌ಬಿ
ಬ್ಯಾಚುಲರ್ ಆಫ್ ಕಾಮರ್ಸ್ ಮತ್ತು ಬ್ಯಾಚುಲರ್ ಆಫ್ ಲೆಜಿಸ್ಲೇಟಿವ್ ಲಾ ಕೋರ್ಸ್, ಐದು ವರ್ಷಗಳ ಸಮಗ್ರ ಕಾನೂನು ಕಾರ್ಯಕ್ರಮವಾಗಿದೆ. 12 ನೇ ತರಗತಿಯಲ್ಲಿ ಶೇಕಡಾ 45ರಷ್ಟು ಅಂಕಗಳನ್ನು (ಎಸ್‌ಸಿ / ಎಸ್‌ಟಿ ವಿದ್ಯಾರ್ಥಿಗಳು ಶೇ.40) ಗಳಿಸಿದ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಅರ್ಹರಾಗಿದ್ದಾರೆ. CLAT, MH CET Law ಐದು ವರ್ಷದ LLB, LSAT-India ಮತ್ತು ನಿರ್ದಿಷ್ಟ ಕಾಲೇಜಿನಿಂದ ಸ್ವೀಕಾರಾರ್ಹವಾದ ಯಾವುದೇ ಪ್ರವೇಶ ಪರೀಕ್ಷೆಯಲ್ಲಿ ಸಾಧನೆಯ ಆಧಾರದ ಮೇಲೆ ಪ್ರವೇಶವನ್ನು ನೀಡಲಾಗುತ್ತದೆ.

-ಚಾರ್ಟೆಡ್ ಅಕೌಂಟೆಂಟ್ (ಸಿಎ)
ಹಣಕಾಸಿನ ಬಜೆಟ್, ಲೆಕ್ಕಪರಿಶೋಧನೆಯನ್ನು ನಿರ್ವಹಿಸುವ ಮತ್ತು ನಿರ್ದೇಶಕರ ಮಂಡಳಿಗೆ ಆರ್ಥಿಕ ಸಲಹೆಗಳನ್ನು ನೀಡುವ ಕಂಪನಿಯ ಪ್ರತಿಷ್ಠಿತ ಸ್ಥಾನಗಳಲ್ಲಿ ಸಿಎ ಒಂದು. 12 ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಸಿಎ ಕೋರ್ಸ್‌ಗೆ ಅರ್ಹರಾಗಿದ್ದಾರೆ. ಸಿಎ ಕೋರ್ಸ್‌ಗೆ ಸಂಬಂಧಿಸಿದ ಅರ್ಜಿಗಳನ್ನು ಐಸಿಎಸ್‌ಐ ಅಧಿಕೃತ ವೆಬ್‌ಸೈಟ್:icai.org ಮೂಲಕ ಸ್ವೀಕರಿಸಲಾಗುತ್ತದೆ. ಈ ಕೋರ್ಸ್‌ನ ಅವಧಿ 5 ವರ್ಷಗಳು, ಇದರಲ್ಲಿ ಸಾಮಾನ್ಯ ಪ್ರಾವೀಣ್ಯತೆ ಪರೀಕ್ಷೆ (ಸಿಪಿಟಿ), ಇಂಟಿಗ್ರೇಟೆಡ್ ಪ್ರೊಫೆಷನಲ್ ಕಾಂಪಿಟೆನ್ಸಿ ಕೋರ್ಸ್ (ಐಪಿಸಿಸಿ), ಲೇಖನ ತರಬೇತಿ, ಅಂತಿಮ ಪರೀಕ್ಷೆ ಇರುತ್ತದೆ.

ಹೊಸ ವರ್ಷದಲ್ಲಿ ಅತಿ ಹೆಚ್ಚು ಸಂಭಾವನೆ ನೀಡುವ ಉದ್ಯೋಗಗಳಿವು

click me!