ಪರೀಕ್ಷೆ ಬರೆಯೋ ಮುನ್ನವೇ SSLC ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಶಾಕ್‌!

Published : Oct 03, 2026, 11:53 AM IST
SSLC Exam

ಸಾರಾಂಶ

2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಪರೀಕ್ಷಾ ಶುಲ್ಕವನ್ನು ಶೇ.5ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ. ಹೊಸದಾಗಿ ಪರೀಕ್ಷೆ ಬರೆಯುವವರು, ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕಗಳು ಏರಿಕೆಯಾಗಿವೆ. ಈಗಾಗಲೇ ನೋಂದಾಯಿಸಿಕೊಂಡವರೂ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.

ಬೆಂಗಳೂರು: 2026-27ನೇ ಸಾಲಿನ SSLC ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಿದ್ದತೆ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಶಾಕ್ ನೀಡಿದ್ದು, ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದೆ. ಇದೀಗ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿಯು ಪರೀಕ್ಷಾ ಶುಲ್ಕದಲ್ಲಿ 5% ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ.

ಹೆಚ್ಚುವರಿ ಪರೀಕ್ಷಾ ಶುಲ್ಕ ಪಾವತಿಗೆ ಆದೇಶ:

ಈಗಾಗಲೇ 10ನೇ ತರಗತಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೂ ಹೆಚ್ಚುವರಿ ಶುಲ್ಕ ಪಾವತಿ ಮಾಡುವಂತೆ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿ ಆದೇಶದಲ್ಲಿ ತಿಳಿಸಿದೆ. ಪ್ರಥಮ ಬಾರಿಗೆ 10ನೇ ತರಗತಿ ಪರೀಕ್ಷೆ ಬರೆಯುವವರು, ಇದೀಗ ಪರೀಕ್ಷಾ ಶುಲ್ಕ 5% ಹೆಚ್ಚಳವಾಗಿದ್ದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ 710 ರುಪಾಯಿಗಳಿಂದ 746 ರುಪಾಯಿಗೆ ಏರಿಕೆಯಾಗಿದೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ₹76 ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.

ಎಸ್‌ಎಸ್‌ಎಲ್‌ಸಿ ನೋಂದಣಿ ಶುಲ್ಕವೂ ಏರಿಕೆ..!

ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಮಾತ್ರವಲ್ಲದೇ ಎಸ್‌ಎಸ್‌ಎಲ್‌ಸಿ ನೋಂದಣಿ ಶುಲ್ಕವೂ ಇದೀಗ ಏರಿಕೆಯಾಗಿದೆ. ಈ ಮೊದಲು ಹೊಸದಾಗಿ ನೋಂದಣಿಯಾಗುವ ಖಾಸಗಿ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ನೋಂದಣಿ ಶುಲ್ಕ 248 ರುಪಾಯಿ ಪಾವತಿಸಬೇಕಿತ್ತು. ಆದರೀಗ ಎಸ್‌ಎಸ್‌ಎಲ್‌ಸಿ ನೋಂದಣಿ ಶುಲ್ಕವು 248 ರುಪಾಯಿಗಳಿಂದ 260 ರುಪಾಯಿಗೆ ಏರಿಕೆಯಾಗಿದೆ. ಅಂದರೆ ಖಾಸಗಿ ಅಭ್ಯರ್ಥಿಗಳು ನೋಂದಣಿ ಶುಲ್ಕವನ್ನೂ 12 ರುಪಾಯಿ ಹೆಚ್ಚುವರಿಯಾಗಿ ವಿದ್ಯಾರ್ಥಿಗಳು ಪಾವತಿಸಬೇಕಿದೆ. ಇನ್ನು ಈಗಾಗಲೇ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ಶುಲ್ಕ 72 ರುಪಾಯಿಗಳಿಂದ 76 ರುಪಾಯಿಗೆ ಏರಿಕೆಯಾಗಿದೆ.

ಇನ್ನು ಪುನರಾವರ್ತಿತವಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಶುಲ್ಕದಲ್ಲೂ ಏರಿಕೆಯಾಗಿದೆ. ಈ ಮೊದಲು ಒಂದು ವಿಷಯಕ್ಕೆ 448 ರುಪಾಯಿ ಪಾವತಿಸಬೇಕಿತ್ತು. ಆದರೆ ಇದೀಗ ಒಂದು ವಿಷಯಕ್ಕೆ 470 ರುಪಾಯಿ ಶುಲ್ಕ ಪಾವತಿಸಬೇಕಿದೆ. ಇನ್ನು ಎರಡು ವಿಷಯಕ್ಕೆ 559 ರುಪಾಯಿಯಿಂದ 587 ರುಪಾಯಿಗೆ ಏರಿಕೆಯಾಗಿದೆ. ಇದಷ್ಟೇ ಅಲ್ಲದೇ ಮೂರು ಅಥವಾ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ ಪರೀಕ್ಷೆ ಬರೆಯುವವರು 752 ರುಪಾಯಿಗಳ ಬದಲಿಗೆ 790 ರುಪಾಯಿ ಶುಲ್ಕ ಪಾವತಿಸಬೇಕಿದೆ.

PREV
Read more Articles on
click me!

Recommended Stories

51 ಶಾಲೆಗಳಿಗೆ ಸಹಾಯ ಮಾಡಿ ವಿಶ್ವ ದಾಖಲೆ ನಿರ್ಮಿಸಿದ 15ರ ಬಾಲೆ! ವಿಷ್ಣುಪ್ರಿಯಾ ಹೆಸರಿನ ಹಿಂದಿದೆ ಆ ಮಹಾನ್ ನಟನ ನೆನಪು
‘ಜೈ ಜವಾನ್, ಜೈ ಕಿಸಾನ್’… ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಈ ಮಾತುಗಳು ಇಂದಿಗೂ ಸ್ಪೂರ್ತಿ