1ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ

By Suvarna News  |  First Published Mar 28, 2021, 2:21 PM IST

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1ರಿಂದ 9ನೇ ತರಗತಿವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.


ಬೆಂಗಳೂರು, (ಮಾ.28):  ಈ ಬಾರಿಯೂ ಒಂದರಿಂದ ಒಂಬತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಕೆ.ಸುಧಾಕರ್ ಹೇಳಿದರು.

ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಗೃಹ ಸಚಿವರು ಕಂದಾಯ ಸಚಿವರೊಂದಿಗೆ ಚರ್ಚಿಸಿ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದರು.

Latest Videos

ಶುರುವಾಯ್ತು ಕೊರೋನಾ 2ನೇ ಅಲೆ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದಲ್ಲಿ ಕೋವಿಡ್ ವೈರಸ್ ಸೋಂಕು ಆತಂಕಾರಿಯಾಗುವ ಮಟ್ಟದಲ್ಲಿ ಹರಡುತ್ತಿದೆ. ಇದು ರೂಪಾಂತರಿ ಸೋಂಕು ಎಂಬುದು ನಿಶ್ಚಿತ. ಸದ್ಯಕ್ಕೆ ಇದರ ಹರಡುವ ವೇಗ ಹೆಚ್ಚಿದೆ. ಸಾವಿನ ಪ್ರಮಾಣ ಕಡಿಮೆ ಇದೆ. ಮುಂದಿನ ಆರು ವಾರಗಳ ಕಾಲ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಅಪಾಯ ನಿಶ್ಚಿತ ಎಂದು ಹೇಳಿದರು.

ಪ್ರಸ್ತುತ ಇರುವ ನಮ್ಮ ಆಸ್ಪತ್ರೆಗಳ ಸಾಮರ್ಥ್ಯದಲ್ಲಿ ಪರಿಸ್ಥಿತಿ ನಿಬಾಯಿಸುವುದು ಕಷ್ಟವಾಗುತ್ತದೆ. ಅನ್ಯ ರಾಜ್ಯಗಳಿಂದ ರಾಜ್ಯ ಪ್ರವೇಶಿಸುವವರು ಹಾಗೂ ಬೆಂಗಳೂರು ನಗರ ಪ್ರವೇಶಕ್ಕೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಬೇಕಾದು ಅನಿವಾರ್ಯವೆನಿಸಿದೆ.ತಾಂತ್ರಿಕ ಸಲಹಾ ಸಮಿತಿಯೂ ಇದೇ ರೀತಿಯ ಸಲಹೆ ಮಾಡಿದೆ ಎಂದು ತಿಳಿಸಿದರು.

click me!