ಖಾಸಗಿ ಶಾಲೆಗಳಲ್ಲಿ ಶುಲ್ಕ ವಿಚಾರ ಕುರಿತು ಸರ್ಕಾರ ಕೊನೆಗೂ ಸಭೆ ನಡೆಸಿ ಒಂದು ಮಹತ್ವದ ಸಲಹೆ ನೀಡಿದೆ. ಅದು ಈ ಕೆಳಗಿನಂತಿದೆ.
ಬೆಂಗಳೂರು, (ಜ.15): ಖಾಸಗಿ ಶಾಲೆಗಳಲ್ಲಿ ಶುಲ್ಕ ವಿಚಾರ ಕುರಿತು ಸರ್ಕಾರ ಸಭೆ ನಡೆಸಿದ್ದು, ಶುಲ್ಕ ಎಷ್ಟೇ ಇರಲಿ ಶೇ.25 ರಷ್ಟು ಕಡಿತ ಮಾಡಿಕೊಳ್ಳಲು ಸಲಹೆ ನೀಡಿದೆ.
ಖಾಸಗಿ ಶಾಲೆಗಳಲ್ಲಿ ಶುಲ್ಕ ವಿಚಾರ ಕುರಿತು ಇಂದು (ಶುಕ್ರವಾರ) ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಭೆ ನಡೆದಿದ್ದು, ಈ ಬಗ್ಗೆ ಸುದೀರ್ಘ ಚರ್ಚೆಗಳು ನಡೆದಿವೆ.
ಶುಲ್ಕ ಕಟ್ಟದಿದ್ದರೆ ಆನ್‌ಲೈನ್ ಕ್ಲಾಸ್ ಬಂದ್: ರಾಜ್ಯ ಸರ್ಕಾರದ ಆದೇಶಕ್ಕೆ ಸಡ್ಡು!
ಶುಲ್ಕ ಎಷ್ಟೇ ಇರಲಿ ಶೇ.25 ರಷ್ಟು ಕಡಿತ ಮಾಡಿಕೊಳ್ಳಲು ಕ್ಯಾಮ್ಸ್ ಒಕ್ಕೂಟ ಶಿಕ್ಷಣ ಇಲಾಖೆಗೆ ಸರ್ಕಾರ ಸಭೆಯಲ್ಲಿ ಸಲಹೆ ನೀಡಿದೆ. ಒಂದೇ ಮಾದರಿಯಲ್ಲಿ ಶುಲ್ಕ ಕಡಿತ ಮಾಡಲು ಕ್ಯಾಮ್ಸ್ ಶಿಕ್ಷಣ ಇಲಾಖೆಗೆ ತಿಳಿಸಿದೆ.
ಖಾಸಗಿ ಶಾಲಾ ಒಕ್ಕೂಟಗಳಾದ ರುಪ್ಸಾ, ಕ್ಯಾಮ್ಸ್, ಕುಸುಮಾ ಹಾಗೂ ಪೋಷಕರ ಸಂಘಟನೆಗಳು ಸಭೆಯಲ್ಲಿ ಪಾಲ್ಗೊಡಿದ್ದವು. ಕೆಲ ಖಾಸಗಿ ಶಾಲೆಗಳು ಪೂರ್ತಿ ಶುಲ್ಕ ಕಟ್ಟುವಂತೆ ಒತ್ತಡ ಹೇರುತ್ತಿರುವುದರಿಂದ ಪೋಷಕರು ಕಂಗಾಲಾಗಿದ್ದಾರೆ. ಫೀಸು ಕಟ್ಟದೇ ಹೋದರೆ ಮಕ್ಕಳಿಗೆ ತರಗತಿ ಅವಕಾಶ ಕೊಡದೇ ಆನ್‌ಲೈನ್ ಐಡಿ ಬ್ಲಾಕ್ ಮಾಡುತ್ತಿದ್ದಾರೆ.