
ಬೆಂಗಳೂರು (ಅ.01): ಈಗಾಗಲೇ ಶಾಲೆಗಳ ಪುನರಾರಂಭದ ಬಗ್ಗೆ ಚರ್ಚೆಗಳು ಜೋರಾಗಿದೆ. ಕೊರೋನಾ ಹಿನ್ನೆಲೆ ಮುಚ್ಚಿದ್ದ ಶಾಲೆಗಳನ್ನು ತೆರೆಯಲು ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
2020 ನೇ ವರ್ಷವನ್ನು ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 30ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮತ್ತೆ ತೆರೆಯಬೇಕು ಎಂದು ತಜ್ಞರು ಸೂಚಿಸಿದ್ದಾರೆ.
ಈ ಶಾಲೆಗಳು ಮೊದಲ 15 ದಿನ ಅರ್ಧ ದಿನ ಕಾರ್ಯನಿರ್ವಹಿಸಬೇಕು. ಕಿರಿಯ ಪ್ರಾಥಮಿಕ ಶಾಲೆಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ಹೆಚ್ಚನ ವಿದ್ಯಾರ್ಥಿಗಳು ಇರುವ ಶಾಲೆಯನ್ನು ಪಾಳಿ ಪದ್ಧತಿಯಲ್ಲಿ ಆರಂಭಿಸಬೇಲಿ. ಶಾಲೆ ತೆರೆದ ನಂತರ ಮಾರ್ಗಸೂಚಿಗಳನ್ನು ಕಾಲ ಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ರೂಪಿಸಬೇಕು ಎಂದು ಶಾಸಕರು ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಹೊಸ ವ್ಯವಸ್ಥೆ ..
ಇನ್ನು ಸರ್ಕಾರಿ ಶಾಲೆಗಳನ್ನು ಆರಂಭ ಮಾಡುವ ಬಗ್ಗೆ ಸುದೀರ್ಘ ಅಂಶಗಳನ್ನ ಶಿಕ್ಷಣ ತಜ್ಞರು ನೀಡಿದ್ದಾರೆ. ಶಾಲೆಯಲ್ಲಿ ಶಿಕ್ಷಣ ಇಲಾಖೆ ಮಾಡಬೇಕಾದ ಸಿದ್ಧತಾ ಕೆಲಸಗಳು ಮಾಡಿ ಲಭ್ಯವಿರುವ ಅಂಶದ ಪ್ರಕಾರ ಹಾಗೂ ವರದಿಯ ಪ್ರಕಾರ ಶಾಲೆಗಳನ್ನು ತೆರೆಯಬಹುದು ಎಂದು ಸೂಚಿಸಬಹುದಾಗಿದೆ.
ಸಲಹೆಗಳು
ಕೈತೊಳೆಯಲು ಸಾಬೂನು ನಿರಂತರ ಶುಚಿ ನೀರಿನ ವ್ಯವಸ್ಥೆ ಮಾಡುವುದು
ಎಲ್ಲಾ ಮಕ್ಕಳಿಗೂ ಮಾಸ್ಕ್ ನೀಡುವುದು,10 ವರ್ಷಕ್ಕಿಂತ ಕೆಳಗಿರೋ ಮಕ್ಕಳಿಗೆ ಅಗತ್ಯ ಮಾಸ್ಕ್ ವಿತರಿಸುವುದು
ಶಾಲಾ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡುವುದು.
ಕಟ್ಟುನಿಟ್ಟಾಗಿ ದೈಹಿಕ ಅಂತರ ಕಾಪಾಡುವಂತೆ ಅರಿವು ಮೂಡಿಸುವುದು.
ಮಕ್ಕಳಿಗೆ ನೀಡಬೇಕಾದ ಅವಶ್ಯಕ ಪೂರೈಕೆಗಳು
ಮಕ್ಕಳಿಗೆ ಶಾಲೆಯಲ್ಲಿ ದಿನನಿತ್ಯ ಪೌಷ್ಟಿಕ ಆಹಾರ, ಹಾಗೂ ಬೆಳಗ್ಗಿನ ಬಿಸಿ ಹಾಲು ವಿತರಣೆ ಮಾಡಬೇಕು, ಉಚಿತ ಕೋವಿಡ್ ಎಚ್ಚರಿಕಾ ಸಾಧನ ಪೂರೈಸಬೇಕು
ಶಾಲಾ ಎಲ್ಲಾ ಮಕ್ಕಳಿಗೆ ಬಿಸಿ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು
ಆಹಾರದ ಜೊತೆಗೆ ರೋಗ ನಿರೋಧಕ ವಿಟಮಿನ್ ಮಾತ್ರೆಗಳನ್ನು ನೀಡ್ಬೇಕು
ಎಲ್ಲಾ ಮಕ್ಕಳಿಗೆ ನಿರಂತರವಾಗಿ ಆರೋಗ್ಯ ತಪಾಸಣೆ ಮಾಡ್ಬೇಕು
ಶಿಕ್ಷಕರಿಗೆ, ಮಕ್ಕಳಿಗೆ ಸೋಂಕು ಕಂಡು ಬಂದಲ್ಲಿ ತಕ್ಷಣವೇ ವೈದ್ಯಕೀಯ ಸೇವೆ ಲಭ್ಯವಿರಬೇಕು
SDMC ಹಾಗೂ ತಾಲೂಕಿನ ಶಿಕ್ಷಣ ಅಧಿಕಾರಿ ನೋಡ್ಕೊಬೇಕು