ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌: ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದ ಸರ್ಕಾರ

By Sathish Kumar KH  |  First Published Sep 29, 2023, 7:42 PM IST

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.


ಬೆಂಗಳೂರು (ಸೆ.29): ಸಮಾಜ ಕಲ್ಯಾಣ  ಇಲಾಖೆಯ ವತಿಯಿಂದ  2023-24ನೇ ಸಾಲಿಗೆ ಪರಿಶಿಷ್ಟ  ಜಾತಿ ಮತ್ತು ಪರಿಶಿಷ್ಟ ವರ್ಗದ  ವಿದ್ಯಾರ್ಥಿಗಳು  ಹಾಗೂ ಅನೈರ್ಮಲ್ಯ ವೃತಿಯಲ್ಲಿ ತೊಡಗಿರುವ ಪೋಷಕರ  ಮಕ್ಕಳಿಗೆ,  ಮೆಟ್ರಿಕ್  ಪೂರ್ವ  ವಿದ್ಯಾರ್ಥಿವೇತನಕ್ಕಾಗಿ  ರಾಜ್ಯ  ವಿದ್ಯಾರ್ಥಿವೇತನ ತಂತ್ರಾಂಶ  (https://ssp.karnataka.gov.in) ದಲ್ಲಿ ಆನ್ ಲೈನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸಮಾಜ ಕಲ್ಯಾಣ  ಇಲಾಖೆಯ ವತಿಯಿಂದ  2023-24ನೇ ಸಾಲಿನಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯಾಸಂಗ ಮಾಡುತ್ತಿರುವ ಶಾಲೆಗಳಲ್ಲಿ 01 ರಿಂದ 10ನೇ ತರಗತಿಯ ಅರ್ಹ  ಪರಿಶಿಷ್ಟ  ಜಾತಿ ಮತ್ತು ಪರಿಶಿಷ್ಟ ಪಂಗಡದ ನವೀನ್ (FRESH) ವಿದ್ಯಾರ್ಥಿಗಳು  ಹಾಗೂ ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಪೋಷಕರ  ಮಕ್ಕಳಿಗೆ, ಮೆಟ್ರಿಕ್  ಪೂರ್ವ ವಿದ್ಯಾರ್ಥಿವೇತನಕ್ಕಾಗಿ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ  (State Scholarship Portal) ದಲ್ಲಿ ಆನ್ ಲೈನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Tap to resize

Latest Videos

undefined

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಿದ್ದರೆ ರಾಜ್ಯ ಸರ್ಕಾರ ಡಿಸ್ಮಿಸ್‌ ಆಗುತ್ತೆ: ಸಿಎಂ ಸಿದ್ದರಾಮಯ್ಯ

2022-23ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ.  ವಿದ್ಯಾರ್ಥಿಯ  SATS ID ಸಂಖ್ಯೆ ಸಂಬಂಧಪಟ್ಟ ಶಾಲೆಗಳಿಂದ ಪಡೆದು, ಪೋಷಕರ ಮೊಬೈಲ್ ಸಂಖ್ಯೆ, ಆಧಾರ್ ಇಐಟಿ ಸಂಖ್ಯೆ ಹಾಗೂ ಆಧಾರ್ ಇಐಡಿಯಲ್ಲಿ ನಮೂದಿಸಿರುವಂತೆ ಹೆಸರನ್ನು ಎಂಟ್ರಿ ಮಾಡಬೇಕು, ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ  ಎನ್.ಪಿ.ಸಿ.ಐ ಆಧಾರ್ ಮ್ಯಾಪಿಂಗ್ ಮಾಡಿಸಿಕೊಳ್ಳ್ಳುವುದು ಕಡ್ಡಾಯವಾಗಿರುತ್ತದೆ.

ಆಸಕ್ತ ವಿದ್ಯಾರ್ಥಿಗಳು ರಾಜ್ಯ  ವಿದ್ಯಾರ್ಥಿವೇತನ ತಂತ್ರಾಂಶ  https://ssp.karnataka.gov.in  ದಲ್ಲಿ ಅಕ್ಟೋಬರ್ 20ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ  ಜಿಂಟಿ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ,  ಬೆಂಗಳೂರು ನಗರ ಜಿಲ್ಲೆ, 4ನೇ ಮುಖ್ಯ ರಸ್ತೆ, 16ನೇ ಅಡ್ಡ ರಸ್ತೆ, ಸಂಪಂಗಿರಾಮನಗರ, ಬೆಂಗಳೂರು-27 ಅಥವಾ ದೂರವಾಣಿ ಸಂಖ್ಯೆ : 080- 22240449, ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಉತ್ತರ ತಾಲ್ಲೂಕು  ದೂರವಾಣಿ ಸಂಖ್ಯೆ: 080-28461351, ಮೊಬೈಲ್ ಸಂಖ್ಯೆ -9480843051.,ಬೆಂಗಳೂರು ದಕ್ಷಿಣ ತಾಲ್ಲೂಕು ದೂರವಾಣಿ ಸಂಖ್ಯೆ: 080-26711096, ಮೊಬೈಲ್ ಸಂಖ್ಯೆ 9480843050., ಬೆಂಗಳೂರು ಪೂರ್ವ ತಾಲ್ಲೂಕು ದೂರವಾಣಿ ಸಂಖ್ಯೆ: 080-29535045, ಮೊಬೈಲ್ ಸಂಖ್ಯೆ: 9480843049. ಹಾಗೂ ಆನೇಕಲ್ ತಾಲ್ಲೂಕು ದೂರವಾಣಿ ಸಂಖ್ಯೆ: 080-27859557, ಮೊಬೈಲ್ ಸಂಖ್ಯೆ: 9480843052 ಗೆ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!