ಉಪನ್ಯಾಸಕರ ವರ್ಗಾವಣೆ: ಬಯಸಿದೆಡೆ ವರ್ಗಕ್ಕಾಗಿ ಮಾರಕ ಕಾಯಿಲೆಯ ಕಾರಣ!

By Kannadaprabha News  |  First Published Jul 16, 2023, 5:58 AM IST

ಕಾಲೇಜು ಉಪನ್ಯಾಸಕರ ವರ್ಗಾವಣೆಗೆ ಜು. 24ರಂದು ಕೌನ್ಸೆಲಿಂಗ್‌ ನಡೆಯುತ್ತಿದ್ದು, ಈ ಬಾರಿ ರಾಜ್ಯದಲ್ಲಿ 900 ಮಂದಿ ವರ್ಗಾವಣೆ ಪಟ್ಟಿಯಲ್ಲಿದ್ದಾರೆ. ಈ ಪೈಕಿ 180 ಉಪನ್ಯಾಸಕರು ತಾವು ‘ಮಾರಣಾಂತಿಕ ಕಾಯಿಲೆ’ಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ತಮಗೆ ಬೇಕಾದಲ್ಲಿಗೆ ವರ್ಗಾವಣೆ ಮಾಡಿಕೊಡಬೇಕೆಂದು ಕೋರಿಕೆ ಸಲ್ಲಿಸಿದ್ದಾರೆ.


ಗೋಪಾಲ್‌ ಯಡಗೆರೆ

 ಶಿವಮೊಗ್ಗ (ಜು.16):  ಕಾಲೇಜು ಉಪನ್ಯಾಸಕರ ವರ್ಗಾವಣೆಗೆ ಜು. 24ರಂದು ಕೌನ್ಸೆಲಿಂಗ್‌ ನಡೆಯುತ್ತಿದ್ದು, ಈ ಬಾರಿ ರಾಜ್ಯದಲ್ಲಿ 900 ಮಂದಿ ವರ್ಗಾವಣೆ ಪಟ್ಟಿಯಲ್ಲಿದ್ದಾರೆ. ಈ ಪೈಕಿ 180 ಉಪನ್ಯಾಸಕರು ತಾವು ‘ಮಾರಣಾಂತಿಕ ಕಾಯಿಲೆ’ಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ತಮಗೆ ಬೇಕಾದಲ್ಲಿಗೆ ವರ್ಗಾವಣೆ ಮಾಡಿಕೊಡಬೇಕೆಂದು ಕೋರಿಕೆ ಸಲ್ಲಿಸಿದ್ದಾರೆ.

Tap to resize

Latest Videos

ಯಾವುದೇ ಉಪನ್ಯಾಸಕರು ತಮಗೆ ‘ಮಾರಣಾಂತಿಕ ಕಾಯಿಲೆ ಇದೆ’ ಎಂದು ವೈದ್ಯರಿಂದ ಸರ್ಟಿಫಿಕೆಟ್‌ ತಂದರೆ ಅವರು ಕೇಳಿದ ಜಾಗಕ್ಕೆ ಆದ್ಯತೆ ಮೇಲೆ ವರ್ಗಾವಣೆ ಮಾಡಿಕೊಡುವ ಕ್ರಮವಿದ್ದು, ಇದನ್ನೇ ಕೆಲವರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಬೇಕಾದಲ್ಲಿಗೆ ವರ್ಗಾವಣೆ ಮಾಡಿಸಿಕೊಳ್ಳಲು ‘ಮಾರಣಾಂತಿಕ ಕಾಯಿಲೆ’ ಕಾರಣ ನೀಡುತ್ತಿರುವುದು ಕಂಡು ಬರುತ್ತಿದೆ. ಇದೇ ವೇಳೆ, ಮಾರಣಾಂತಿಕ ಕಾಯಿಲೆಯ ಸರ್ಟಿಫಿಕೆಟ್‌ ನೀಡಲು ಇಂತಿಷ್ಟುಎಂದು ವೈದ್ಯರು ಹಣ ಪಡೆಯುತ್ತಿರುವ ಸಾಧ್ಯತೆಯೂ ಇದೆ ಎಂಬುದಾಗಿ ಹೆಸರು ಹೇಳಲು ಇಚ್ಛಿಸದ ಉಪನ್ಯಾಸಕರೊಬ್ಬರು ಆರೋಪಿಸಿದ್ದಾರೆ.

ವರ್ಗಾವಣೆ ಏಕಿಲ್ಲ? ಸಿಡಿದೆದ್ದ ಪಿಯು ಶಿಕ್ಷಕರು

ಸಾಮಾನ್ಯವಾಗಿ ಸರ್ಕಾರಿ ಉಪನ್ಯಾಸಕರ ವರ್ಗಾವಣೆಯಲ್ಲಿ ನಾಲ್ಕು ಅಂಶಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದರಲ್ಲಿ ಮಾರಣಾಂತಿಕ ಕಾಯಿಲೆ ಮೊದಲ ಆದ್ಯತಾ ಪಟ್ಟಿಯಲ್ಲಿದ್ದರೆ, 2ನೇ ಆದ್ಯತೆಯಲ್ಲಿ ವಿಧವೆಯರು, 3ನೇ ಆದ್ಯತೆಯಲ್ಲಿ ಅಂಗವಿಕಲರು, 4ನೇ ಆದ್ಯತಾ ಪಟ್ಟಿಯಲ್ಲಿ ಗಂಡ-ಹೆಂಡತಿಯರು ಬರುತ್ತಾರೆ. ಪಟ್ಟಿಯ ಕೊನೆಯಲ್ಲಿ ಸಾಮಾನ್ಯ ವರ್ಗಾವಣೆ ಇದೆ. ಹೀಗಾಗಿ, ಮೊದಲ ಆದ್ಯತೆಯಾದ ‘ಮಾರಣಾಂತಿಕ ಕಾಯಿಲೆ’ಯ ಕಾರಣವನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಕೆಲವರು ನೈಜ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ನಿಜವಾದರೂ ಸುಮಾರು ಶೇ.50ರಷ್ಟುಮಂದಿ ಈ ಸಂಬಂಧ ನಕಲಿ ಸರ್ಟಿಫಿಕೆಟ್‌ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

180 ಮಂದಿಗೆ ಮಾರಣಾಂತಿಕ ಕಾಯಿಲೆ:

ಜು.24ರಂದು ವರ್ಗಾವಣೆಯ ಕೌನ್ಸೆಲಿಂಗ್‌ ಇದ್ದು, ಮಾರಣಾಂತಿಕ ಕಾಯಿಲೆ ಇದ್ದವರು ಸರ್ಟಿಫಿಕೆಟ್‌ ಪಡೆದು ಜು.17ರಂದು ಸಲ್ಲಿಸಬೇಕಿದೆ. ಇದಕ್ಕೆ ಎರಡು ಹಂತದಲ್ಲಿ ವೈದ್ಯಕೀಯ ತಪಾಸಣಾ ಸಮಿತಿ ಕೂಡ ಇದೆ. ಈ ಎರಡೂ ಹಂತದಲ್ಲಿ ಮಾರಣಾಂತಿಕ ಕಾಯಿಲೆ ಇರುವುದು ದೃಢಪಡಬೇಕು.

ಈ ಬಾರಿ ರಾಜ್ಯದಲ್ಲಿ 900 ಮಂದಿ ವರ್ಗಾವಣೆ ಪಟ್ಟಿಯಲ್ಲಿದ್ದಾರೆ. ಇವರಲ್ಲಿ 180 ಜನ ತಾವು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದೇವೆ ಎಂದು ಅರ್ಜಿ ಸಲ್ಲಿಸಿದ್ದು, ಇದಕ್ಕೆ ಪೂರಕವಾಗಿ ದಾಖಲೆಗಳನ್ನು ಪಡೆಯುವ ಯತ್ನದಲ್ಲಿದ್ದಾರೆ. ಇಷ್ಟುಮಂದಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರು ಇದುವರೆಗೆ ಹೇಗೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದೇ ಆಶ್ಚರ್ಯದ ಸಂಗತಿ.

ಹೊಸದುರ್ಗ ಕಾಲೇಜೊಂದರಲ್ಲಿ 30 ಜನ ಉಪನ್ಯಾಸಕರಿದ್ದು, ಇವರಲ್ಲಿ 9 ಮಂದಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸರ್ಟಿಫಿಕೆಟ್‌ ಸಲ್ಲಿಸಿದ್ದಾರೆ. ಶಿವಮೊಗ್ಗದಲ್ಲಿ 8 ಜನ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದೇವೆ ಎಂದು ಅರ್ಜಿ ಸಲ್ಲಿಸಿದ್ದಾರೆ.

ಇದು ಸಾಮಾನ್ಯ ವರ್ಗಾವಣೆ ಲಿಸ್ಟ್‌ನಲ್ಲಿ ಇರುವವರಿಗೆ ತೀವ್ರ ಬೇಸರ ತಂದಿದೆ. ಯಾವುದೇ ಲಾಬಿ ಮಾಡದೆ, ಯಾವುದೇ ಮೋಸ ಮಾಡದೆ ನಿಯಮದಂತೆ ಕೌನ್ಸೆಲಿಂಗ್‌ಗೆ ಹೋದರೆ ತಮಗೆ ಇಷ್ಟವಿಲ್ಲದ ಜಾಗಕ್ಕೆ ಹೋಗಬೇಕಾಗುತ್ತದೆ. ಯಾವ ಕಾರಣಕ್ಕೂ ತಮಗೆ ಬೆಂಗಳೂರು, ಮೈಸೂರು ಅಥವಾ ಮಂಗಳೂರಿನಂತಹ ಸ್ಥಳ ಸಿಗುವುದಿಲ್ಲ. ಇರುವ ಅವಕಾಶಗಳನ್ನು ನಕಲಿ ಸರ್ಟಿಫಿಕೆಟ್‌ ತಂದವರೇ ಕಬಳಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಈ ಮೊದಲು ಕಾನ್ಯರ್‌, ಏಡ್‌್ಸ ಮತ್ತು ಹೃದಯ ಸಮಸ್ಯೆ ಇದ್ದರೆ ಚಿಕಿತ್ಸೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಆದರೀಗ ಇದರ ಜೊತೆಗೆ ನರರೋಗ ಸಮಸ್ಯೆ, ಕರುಳು ರೋಗ ಎಂಬ ಹಲವು ರೋಗಗಳನ್ನು ಸೇರಿಸಲಾಗಿದೆ. ಹೀಗಾಗಿ, ಸುಲಭವಾಗಿ ಇದರ ದುರ್ಲಾಭ ಪಡೆಯಲಾಗುತ್ತಿದೆ.

Koppal: ಉಪನ್ಯಾಸಕರ ಕೈಲಿ ಚಾಕ್ ಪೀಸ್ ಬದಲು ಕಸಬರಿಗೆ: ಏನಿದು..?

ಪ್ರಮುಖ ಲಾಭವೇನು?

ಪ್ರಮುಖ ಲಾಭವೆಂದರೆ ಗೃಹಭತ್ಯೆ ಪಡೆಯುವುದು. ಉದಾಹರಣೆಗೆ, ಬೆಂಗಳೂರು ನಗರದಲ್ಲಿ ಶೇ.30ರಷ್ಟುಗೃಹ ಭತ್ಯೆ ಪಡೆದರೆ, ಮೈಸೂರು ಮತ್ತು ಮಂಗಳೂರಿನಂತಹ ಎರಡನೇ ಸ್ತರದ ನಗರಗಳಲ್ಲಿ ಶೇ.20ರಷ್ಟುಗೃಹಭತ್ಯೆ ಪಡೆಯುತ್ತಾರೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ತುಮಕೂರು ಸೇರಿದಂತೆ ಮೂರನೇ ಸ್ತರದ ನಗರಗಳಲ್ಲಿ ಶೇ.8ರಷ್ಟುಗೃಹಭತ್ಯೆ ನೀಡಲಾಗುತ್ತದೆ. ಸುಮಾರು 1.30 ಲಕ್ಷ ರು. ಬೇಸಿಕ್‌ ಸಂಬಳ ಇರುವ ವ್ಯಕ್ತಿ ಶಿವಮೊಗ್ಗದಲ್ಲಿ ಇದ್ದರೆ ಅವರಿಗೆ .10,400 ಗೃಹಭತ್ಯೆ ಸಿಗುತ್ತದೆ. ಇವರು ಮೈಸೂರು ಮತ್ತು ಮಂಗಳೂರಿಗೆ ವರ್ಗಾವಣೆಯಾದರೆ ಶೇ.20 ಎಂದರೆ .26 ಸಾವಿರ ಹೆಚ್ಚುವರಿಯಾಗಿ ಸಿಗುತ್ತದೆ. ಇದೇ ಬೆಂಗಳೂರಿಗೆ ವರ್ಗಾವಣೆಯಾದರೆ ಶೇ.40 ಎಂದರೆ .52 ಸಾವಿರ ಹೆಚ್ಚುವರಿ ಭತ್ಯೆ ಸಿಗುತ್ತದೆ. ಬೆಂಗಳೂರಿನಲ್ಲಿ ಕೂಡ ಸರಿ ಸುಮಾರು .20ರಿಂದ .25 ಸಾವಿರಗಳಿಗೆ ಬಾಡಿಗೆ ಮನೆ ಸಿಗುತ್ತದೆ. ಉಳಿದದ್ದು ಬೋನಸ್‌.

click me!