ಯುದ್ಧದ ಭೀತಿ ಹಿನ್ನೆಲೆ: ಇಲ್ಲೆಲ್ಲ 10, 12 ನೇ ತರಗತಿ ಪರೀಕ್ಷೆ ಮುಂದೂಡಿಕೆ, ಅಧಿಕೃತ ಪ್ರಕಟಣೆ

Published : Mar 01, 2026, 02:57 PM ISTUpdated : Mar 01, 2026, 03:00 PM IST
CBSE Postpones Class 10 and 12 Board Exams

ಸಾರಾಂಶ

ಮಧ್ಯಪ್ರಾಚ್ಯದಲ್ಲಿನ ಯುದ್ಧ ಭೀತಿ ಮತ್ತು ಭದ್ರತಾ ಅಸ್ಥಿರತೆಯಿಂದಾಗಿ, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ.

ನವದೆಹಲಿ: ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಯುದ್ಧ ಭೀತಿ ಮತ್ತು ಭದ್ರತಾ ಅಸ್ಥಿರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಮಹತ್ವದ ತೀರ್ಮಾನ ಕೈಗೊಂಡಿದೆ. ಮಾರ್ಚ್ 02, 2026 ರಂದು ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ನಡೆಯಬೇಕಿದ್ದ 10ನೇ ತರಗತಿ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡುವುದಾಗಿ ಮಂಡಳಿ ಘೋಷಿಸಿದೆ.

ಪ್ರದೇಶದಲ್ಲಿ ವೇಗವಾಗಿ ಬದಲಾಗುತ್ತಿರುವ ಭದ್ರತಾ ಪರಿಸ್ಥಿತಿ, ವಿಮಾನ ಸಂಚಾರದ ವ್ಯತ್ಯಯಗಳು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ. “ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪರೀಕ್ಷಾ ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಪರಿಸ್ಥಿತಿ ಸುಧಾರಿಸಿದ ನಂತರ, ಪರೀಕ್ಷೆಗಳ ಮುಂದಿನ ದಿನಾಂಕಗಳನ್ನು ನಿಗದಿಪಡಿಸಿ ಶಾಲೆಗಳು ಮತ್ತು ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ತಿಳಿಸಲಾಗುವುದು,” ಎಂದು ಸಿಬಿಎಸ್‌ಇ ತಿಳಿಸಿದೆ.

ಈ ದೇಶಗಳಲ್ಲಿ ಪರೀಕ್ಷೆಗಳು ಮುಂದೂಡಿಕೆ

ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳು ಮುಂದೂಡಲ್ಪಟ್ಟಿರುವ ಮಧ್ಯಪ್ರಾಚ್ಯದ ದೇಶಗಗಳೆಂದರೆ ಬಹ್ರೇನ್, ಇರಾನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಈ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬಿಎಸ್‌ಇ ಅಂಗೀಕೃತ ಶಾಲೆಗಳಲ್ಲಿ ಓದುತ್ತಿರುವ ಸಾವಿರಾರು ಭಾರತೀಯ ಹಾಗೂ ಅನ್ಯ ದೇಶಗಳ ವಿದ್ಯಾರ್ಥಿಗಳಿಗೆ ಈ ತೀರ್ಮಾನ ಅನ್ವಯವಾಗಲಿದೆ.

ಪರಿಸ್ಥಿತಿಯ ಬೆಳವಣಿಗೆಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದ್ದು, ಭದ್ರತಾ ಸ್ಥಿತಿ ಸಹಜಗೊಂಡ ಬಳಿಕ ಪರೀಕ್ಷೆಗಳ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಈ ಸಂಬಂಧ ಎಲ್ಲಾ ಮಾಹಿತಿಯನ್ನು ಸಿಬಿಎಸ್‌ಇ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ ನಲ್ಲಿ ಹಾಕಿಕೊಂಡಿದೆ. ಮಂಡಳಿ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಗೊಳ್ಳಬಾರದೆಂದು ಮನವಿ ಮಾಡಿದ್ದು, ಯಾವುದೇ ಗೊಂದಲದ ಮಾಹಿತಿಗೆ ಕಿವಿಗೊಡದೆ ಅಧಿಕೃತ ಪ್ರಕಟಣೆಗಳನ್ನಷ್ಟೇ ಅನುಸರಿಸುವಂತೆ ಸಲಹೆ ನೀಡಿದೆ.

 

 

ನಕಲಿ ಸುತ್ತೋಲೆ ಬಗ್ಗೆ ಸ್ಪಷ್ಟನೆ

ಯುದ್ಧದ ಪರಿಸ್ಥಿತಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಕೆಲವು ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿದ್ದ ನಕಲಿ ಸೂಚನೆಯನ್ನು ಮಂಡಳಿಯು ಇಂದು ಬೆಳಗ್ಗೆ ತಳ್ಳಿಹಾಕಿತು. ಸಿಬಿಎಸ್‌ಇ ನಕಲಿ ಸುತ್ತೋಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿತು ಮತ್ತು ಯಾವುದೇ ಅಧಿಕೃತ ಹೇಳಿಕೆಗಳನ್ನು ಮಂಡಳಿಯೇ ಹಂಚಿಕೊಳ್ಳಲಿದೆ, ವಿದ್ಯಾರ್ಥಿಗಳು ತಮ್ಮ ಶಾಲೆಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ಅಧಿಕೃತ ಪ್ರಕಟಣೆಗಳನ್ನು ಮಾತ್ರ ಅವಲಂಬಿಸುವಂತೆ ಸೂಚಿಸಲಾಗಿದೆ. ಈ ವರ್ಷ, ಭಾರತದಾದ್ಯಂತ ಮತ್ತು ವಿದೇಶಗಳಲ್ಲಿ 26 ದೇಶಗಳಲ್ಲಿ 43 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ.

 

 

PREV
Read more Articles on
click me!

Recommended Stories

Bigg boss ಗಿಲ್ಲಿ ನಟನ ಮುಗಿಯದ ಹವಾ! ಪರೀಕ್ಷೆಯಲ್ಲೂ ಗಿಲ್ಲಿ ಕುರಿತ ಬಿಟ್ಟಸ್ಥಳ ತುಂಬಿ; ಏನಿದು ಪ್ರಶ್ನೆ?
ಹಾವೇರಿ: ಪರೀಕ್ಷೆಗೆ ಹೆದರಿ ಮೊರಾರ್ಜಿ ವಸತಿ ಶಾಲೆಯ 5 ವಿದ್ಯಾರ್ಥಿಗಳು ಕಾಂಪೌಂಡ್‌ ಜಿಗಿದು ರಾತ್ರೋ ರಾತ್ರಿ ನಾಪತ್ತೆ