ಭಾರತದ ಐಸಿಎಐ-ರಷ್ಯಾದ ಐಪಿಎಆರ್ ತಿಳಿವಳಿಕಾ ಒಪ್ಪಂದಕ್ಕೆ ಕೇಂದ್ರ ಒಪ್ಪಿಗೆ

By Suvarna News  |  First Published Aug 27, 2021, 5:05 PM IST

ವಿದೇಶಗಳಿಂದ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಮತ್ತು ಭಾರತದಲ್ಲಿ ತಮ್ಮ ಉದ್ಯಮವನ್ನು ಸ್ಥಾಪಿಸಲು ಉತ್ತಮ ವಿಧಾನಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಭಾರತದ ಐಸಿಎಐ ಮತ್ತು ರಷ್ಯಾದ ಐಪಿಎಆರ್ ನಡುವಿನ ಒಪ್ಪಂದ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ಮತ್ತು ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಅಕೌಂಟೆಂಟ್ಸ್ ಆಫ್ ರಷ್ಯಾ (ಐಪಿಎಆರ್) ನಡುವೆ ಒಪ್ಪಂದಕ್ಕೆ ಸಹಿ ಹಾಕಲು ಅನುಮೋದನೆ ನೀಡಿದೆ.

ವಿದೇಶಗಳಿಂದ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಮತ್ತು ಭಾರತದಲ್ಲಿ ತಮ್ಮ ಉದ್ಯಮವನ್ನು ಸ್ಥಾಪಿಸಲು ಉತ್ತಮ ವಿಧಾನಗಳನ್ನು ಅಳವಡಿಸಿಕೊಳ್ಳಲು ಐಸಿಎಐಗೆ ಈ ಒಪ್ಪಂದ ಸಹಾಯವಾಗಲಿದೆ.

Tap to resize

Latest Videos

ಐಸಿಎಐ ಸಂಸ್ಥೆ,  ಶಿಕ್ಷಣ, ವೃತ್ತಿಪರ ಅಭಿವೃದ್ಧಿ, ಉನ್ನತ ಲೆಕ್ಕಪತ್ರ ನಿರ್ವಹಣೆ, ಲೆಕ್ಕಪರಿಶೋಧನೆ ಮತ್ತು ನೈತಿಕ ಮಾನದಂಡಗಳ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಅಕೌಂಟೆಂಟ್ಸ್ ಆಫ್ ರಷ್ಯಾ (ಐಪಿಎಆರ್) ರಷ್ಯಾದಲ್ಲಿ ಅಕೌಂಟೆಂಟ್‌ಗಳ ಅತಿದೊಡ್ಡ ಲಾಭರಹಿತ ಸಂಸ್ಥೆಯಾಗಿದೆ.

ಅಮೆರಿಕದಲ್ಲಿ ಉನ್ನತ ಶಿಕ್ಷಣ, ಮನೆಯಲ್ಲೇ ಕುಳಿತು ಎಲ್ಲ ಪ್ರಶ್ನೆಗೆ ಉತ್ತರ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಂಪುಟವು ಈ ಒಪ್ಪಂದವನ್ನು ಅನುಮೋದಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿಯನ್ನು ಟ್ವೀಟ್ ಮಾಡಿದೆ. 'ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮತ್ತು ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಅಕೌಂಟೆಂಟ್ಸ್ ಆಫ್ ರಷ್ಯಾ (ಐಪಿಎಆರ್) ನಡುವಿನ ಮಹತ್ವದ ಒಪ್ಪಂದಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ' ಎಂದು ಟ್ವೀಟ್‌ ಮೂಲಕ ಮಾಹಿತಿ ನೀಡಿದೆ.

ಅನುಷ್ಠಾನ ತಂತ್ರ ಮತ್ತು ಗುರಿಗಳು: ರಷ್ಯಾ ಜೊತೆಗಿನ ಈ ಒಡಂಬಡಿಕೆ ಅನುಮೋದನೆಯು ವೀಕ್ಷಣೆಗಳ ವಿನಿಮಯ, ವೃತ್ತಿಪರ ಅಕೌಂಟೆನ್ಸಿ ತರಬೇತಿ, ವೃತ್ತಿಪರ ನೈತಿಕತೆ, ತಾಂತ್ರಿಕ ಸಂಶೋಧನೆ, ಅಕೌಂಟೆಂಟ್‌ಗಳ ವೃತ್ತಿಪರ ಅಭಿವೃದ್ಧಿ ಮೂಲಕ ಅಕೌಂಟೆನ್ಸಿ ವೃತ್ತಿಯ ವಿಷಯಗಳಲ್ಲಿ ಸಹಕಾರವನ್ನು ಬಲಪಡಿಸುವ ಗುರಿ ಹೊಂದಿದೆ. ಇದು ಸೆಮಿನಾರ್‌ಗಳು, ಸಮ್ಮೇಳನಗಳು ಮತ್ತು ಜಂಟಿ ಚಟುವಟಿಕೆಗಳ ಮೂಲಕ ಪರಸ್ಪರ ಸಹಕಾರವನ್ನು ಉತ್ತೇಜಿಸುವ  ಉದ್ದೇಶ ಹೊಂದಿದೆ. ಎರಡೂ ರಾಷ್ಟ್ರಗಳಿಗೆ ಇದು  ಪರಸ್ಪರ ಪ್ರಯೋಜನಕಾರಿಯಾಗಿದೆ.
 

ಭಾರತ ಹಾಗೂ ರಷ್ಯಾದಲ್ಲಿ ಅಕೌಂಟೆನ್ಸಿ ವೃತ್ತಿಯನ್ನು ಅಭಿವೃದ್ಧಿಪಡಿಸಿ ವಿಶ್ವದ ಮಟ್ಟದಲ್ಲಿ ವೃತ್ತಿಯನ್ನು ಉತ್ತೇಜಿಸಲು ನೆರವಾಗಲಿದೆ. ಮಾಹಿತಿ ಬೆಂಬಲದ ಸಾಧನವಾಗಿ ಎರಡು ಸಂಸ್ಥೆಗಳು ಪರಸ್ಪರ ವೆಬ್‌ಸೈಟ್‌ಗಳಿಗೆ ಸಂಪರ್ಕವನ್ನು ರಚಿಸುತ್ತವೆ.

ಆ.28 ರಿಂದ ಸಿಇಟಿ ಪರೀಕ್ಷೆ: ಅನುಸರಿಸಬೇಕಾದ ಕ್ರಮಗಳು

ಪ್ರಯೋಜನಗಳು: ಐಸಿಎಐ ಸದಸ್ಯರು ದೇಶಾದ್ಯಂತ ವಿವಿಧ ಸಂಸ್ಥೆಗಳಲ್ಲಿ ಮಧ್ಯಮ ಮಟ್ಟದಿಂದ ಉನ್ನತ ಮಟ್ಟದ ಹುದ್ದೆಗಳನ್ನು ಹೊಂದಿದ್ದಾರೆ ಮತ್ತು ದೇಶದ ಆಯಾ ಸಂಸ್ಥೆಗಳ ನಿರ್ಧಾರ/ನೀತಿ ಮಾಡುವ ತಂತ್ರಗಳ ಮೇಲೂ ಅವರು ಪ್ರಭಾವ ಬೀರಬಹುದು.

ಐಸಿಎಐ ತನ್ನ ವಿಶಾಲವಾದ ಅಧ್ಯಾಯಗಳ ಜಾಲ ಮತ್ತು ಪ್ರಪಂಚದ 45 ದೇಶಗಳ 68 ನಗರಗಳಲ್ಲಿ ಪ್ರತಿನಿಧಿ ಕಚೇರಿಗಳಲ್ಲಿ ಪ್ರಚಲಿತವಿರುವ ಪದ್ಧತಿಗಳನ್ನು ಹಂಚಿಕೊಳ್ಳುವ ಮೂಲಕ ಪ್ರಮುಖ ಪಾತ್ರ ವಹಿಸಲು ಬದ್ಧವಾಗಿದೆ. ವಿದೇಶಿ ಹೂಡಿಕೆಯನ್ನು ಆಕರ್ಷಿಸಿ, ಇಲ್ಲಿ ತಮ್ಮ ಉದ್ಯಮವನ್ನು ಸ್ಥಾಪಿಸಲು ಪ್ರೋತ್ಸಾಹಿಸೋ ಮ‌ೂಲಕ ಭಾರತ ಸರ್ಕಾರವು ಅನುಸರಿಸುತ್ತಿರುವ ಉತ್ತಮ ಅಭ್ಯಾಸಗಳನ್ನು ರಷ್ಯಾ ಅಳವಡಿಸಿಕೊಳ್ಳಬಹುದು. 

ಪ್ರಮುಖ ಪರಿಣಾಮ: ಐಸಿಎಐ ಮತ್ತು ಐಪಿಎಆರ್ ನಡುವಿನ ಒಪ್ಪಂದದಿಂದಾಗಿ ದೀರ್ಘಾವಧಿ ಭವಿಷ್ಯದಲ್ಲಿ ಐಸಿಎಐ ಸದಸ್ಯರು, ರಷ್ಯಾದಲ್ಲಿ ವೃತ್ತಿಪರ ಅವಕಾಶಗಳನ್ನು ಪಡೆಯಲು ಅವಕಾಶ ಒದಗಿಸುವ ನಿರೀಕ್ಷೆಯಿದೆ.  ಎರಡು ಸಂಸ್ಥೆಗಳ ಹಿತಾಸಕ್ತಿಗಾಗಿ ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡುವುದು ಈ ಒಪ್ಪಂದದ ಗುರಿಯಾಗಿದೆ.  ICAI ಅಕೌಂಟೆನ್ಸಿ ವೃತ್ತಿಯಲ್ಲಿ ಸೇವೆಗಳ ರಫ್ತು ಒದಗಿಸುವ ಮೂಲಕ ರಷ್ಯಾ ಜೊತೆಗಿನ ಪಾಲುದಾರಿಕೆಯನ್ನು ಬಲಪಡಿಸಲು ಈ ಒಡಂಬಡಿಕೆ ಸಹಾಯ ಮಾಡುತ್ತದೆ.

ಸೆ.15ರವರೆಗೆ ಯುಜಿ, ಪಿಜಿ ತರಗತಿ ಆರಂಭಿಸದಂತೆ ಡಿಸಿ ಸೂಚನೆ

click me!