ಆರ್‌ವಿ ಎಂಜಿನೀಯರಿಂಗ್ ಕಾಲೇಜಿನಲ್ಲಿ 6 ದಿನಗಳ ಅಧ್ಯಾಪಕರ ತರಬೇತಿ ಕಾರ್ಯಾಗಾರ ಆರಂಭ

By Sathish Kumar KH  |  First Published Dec 4, 2023, 6:36 PM IST

ಬೆಂಗಳೂರಿನ ಆರ್‌ವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ 'ಸಂವಹನ ಹಾಗೂ ಇತರ ತಂತ್ರಜ್ಞಾನಗಳಿಗೆ ಸಿಸ್ಟಮ್ ಆನ್ ಚಿಪ್ ವಿನ್ಯಾಸ'ದ ಬಗ್ಗೆ ಉಪನ್ಯಾಸಕರಿಗೆ ಮಾಹಿತಿ ನೀಡುವ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.


ಬೆಂಗಳೂರು (ಡಿ.4): ಉಪನ್ಯಾಸಕರಿಗೆ 'ಸಂವಹನ ಹಾಗೂ ಇತರ ತಂತ್ರಜ್ಞಾನಗಳಿಗೆ ಸಿಸ್ಟಮ್ ಆನ್ ಚಿಪ್ ವಿನ್ಯಾಸ'ದ ಬಗ್ಗೆ ಮಾಹಿತಿ ನೀಡುವ 6 ದಿನಗಳ ಕಾರ್ಯಾಗಾರಕ್ಕೆ ಸೋಮವಾರ ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ (RV college of Engineering) ಚಾಲನೆ ನೀಡಲಾಯಿತು. 

ಸೋಮವಾರ ಆರಂಭವಾದ ಅಧ್ಯಾಪಕ ಸಿಬ್ಬಂದಿ ತರಬೇತಿ ಕಾರ್ಯಾಗಾರ'ವನ್ನು AICTEಯ ಅಂಗಸಂಸ್ಥೆ ಹಾಗೂ ATAL ಮುಖ್ಯ ಪ್ರಾಯೋಜಕತ್ವ ವಹಿಸಿದ್ದವು. ಉಳಿದಂತೆ ವಿದ್ಯುನ್ಮಾನ ಮತ್ತು ಸಂವಹನ ತಂತ್ರಶಾಸ್ತ್ರ, IEEE RVCE ವಿದ್ಯಾರ್ಥಿ ಶಾಖೆ, SierraEdge AI ಸಂಸ್ಥೆಗಳು ತಾಂತ್ರಿಕ ಸಹ ಪ್ರಾಯೋಜಕತ್ವ ವಹಿಸಿವೆ. 'ಸಂವಹನ ಹಾಗೂ ಇತರೆ ತಂತ್ರಜ್ಞಾನಗಳಿಗೆ ಸಿಸ್ಟಮ್ ಆನ್ ಚಿಪ್ ವಿನ್ಯಾಸ' ಎಂಬ ವಿಷಯದ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ರಾಜ್ಯ, ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಗಳು, ತಂತ್ರಜ್ಞರು, ವಿಜ್ಞಾನಿಗಳು 6 ದಿನಗಳ ಕಾಲ ಪ್ರಬಂಧ ಪ್ರಸ್ತುತಪಡಿಸಲಿದ್ದಾರೆ. ಕೇವಲ ಉಪನ್ಯಾಸಗಳಿಗೆ ಸೀಮಿತವಾಗಿರದ ಈ ಕಾರ್ಯಾಗಾರದಲ್ಲಿ ಸ್ನಾತಕೋತ್ತರ ಹಾಗೂ ಇಂಜಿನಿಯರಿಂಗ್ ಅಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನೂ ವಿವಿಧ ರೀತಿಗಳಿಂದ ನೀಡಲಾಗುತ್ತದೆ.

Tap to resize

Latest Videos

undefined

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ವಜ್ರ ಬಸ್ ಗೂ ರಿಯಾಯಿತಿ ವಿದ್ಯಾರ್ಥಿ ಪಾಸ್ ಕೊಡಲು ಮುಂದಾದ ಬಿಎಂಟಿಸಿ!

ಆರ್‌ವಿ ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ತಂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ವಿ.ರವೀಶ್ ಆರಾಧ್ಯ ಅವರು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಾಗಾರಗಳ ಮಹತ್ವದ ವಿಸ್ಕೃತವಾಗಿ ಮಾತನಾಡಿ, ಪ್ರಸ್ತುತ ತಾಂತ್ರಿಕ ಯುಗದಲ್ಲಿ ಇಂಥ ಕಾರ್ಯಗಳು ಹೇಗೆ ಅಧ್ಯಾಪಕರು ಹಾಗೂ ತಾಂತ್ರಿಕ ವಿದ್ಯಾರ್ಥಿಗಳಿಗೆ ಸಹಕಾರಿ ಎಂಬುದನ್ನು ವಿವರಿಸಿದರು. ಕಾರ್ಯಾಗಾರದ ಮುಖ್ಯ ಸಂಚಾಲಕರಾದ ಡಾ.ಶೈಲಶ್ರೀ ಎನ್ ಅವರು ಕಾರ್ಯಾಗಾರದ ಸಂಪೂರ್ಣ ರೂಪು ರೇಷೇಗಳನ್ನು, ನಡೆಯುವ ಉಪನ್ಯಾಸಗಳ ಸಂಪೂರ್ಣ ಚಿತ್ರಣವನ್ನು ಅಭ್ಯರ್ಥಿಗಳಿಗೆ ನೀಡಿದ್ದಲ್ಲದೆ, ಆರೂ ದಿನಗಳ ಕಾಲ ಅಭ್ಯರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡವುದಾಗಿಯೂ ಭರವಸೆ ನೀಡಿದರು. 

ಕಾರ್ಯಕ್ರಮದ ಮುಖ್ಯ ಅತಿಥಿ SierraEdge AI ಸಂಸ್ಥೆಯ ಸಂಸ್ಥಾಪಕ ಸಿಇಒ ಆಗಿರುವ ಗಿರೀಶ್ ದೇಸಾಯಿ  ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆಯ (Artificial Inteligence) ಉಪಯೋಗಗಳು ಹಾಗೂ ತಂತ್ರಜ್ಞಾನದಲ್ಲಿ ಅದರ ಬಳಕೆಯ ಬಗ್ಗೆ ವಿಸ್ತಾರವಾಗಿ ತಿಳಿಸಿ, ವಿದ್ಯುನ್ಮಾನ ಉತ್ಪಾದನೆಯಲ್ಲಿ ಅಮೂಲಾಗ್ರ  ಹೆಚ್ಚಳವನ್ನು ತರುವುದಾಗಿ ಹೇಳಿದರು. ನಂತರ ಮಾತನಾಡಿದ ಪ್ರಾಚಾರರ್ಯ ಡಾ.ಕೆ.ಎನ್. ಸುಬ್ರಮಣ್ಯ ಅವರು, ಪ್ರಸ್ತುತ ಉದ್ಯಮದಲ್ಲಿ ನೂತನ ಶಿಕ್ಷಣ ನೀತಿ ಯಾವ ರೀತಿಯಲ್ಲಿ ಬದಲಾವಣೆ ತರಲಿದೆ ಹಾಗೂ ಇಂಡಸ್ಟ್ರಿ 4.0 ದ ಬಗ್ಗೆ ಮಾತನಾಡಿದರು. ಜರ್ಮನಿಗೆ ಹೋದಾಗೊಮ್ಮೆ ಅಲ್ಲಿನ ರೋಬೋಟಿಕ್ ಹಾಗೂ ಆಟೋಮ್ಯಾಷನ್ ಬಗ್ಗೆ ನಡೆದ ಅಧ್ಯಯನಗಳನ್ನು ನೋಡಿ, ನಮ್ಮ ವಿದ್ಯಾಲಯದಲ್ಲೂ ಅವುಗಳ ಶಿಕ್ಷಣ ಪ್ರಾರಂಭಿಸುವುದಾಗಿ ಹೇಳಿದರು. 

ಪಾಠ ಪ್ರವಚನ ಬಿಟ್ಟು ಬಹಿಷ್ಕಾರಕ್ಕೆ ಇಳಿದ ಅತಿಥಿ ಉಪನ್ಯಾಸಕರು: ಬೆಳಗಾವಿ ಅಧಿವೇಶನದಲ್ಲಿ ಹೋರಾಟ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಂಶುಪಾಲರಾದ ಡಾ.ಕೆ.ಎಸ್. ಗೀತಾ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ, ತೈವಾನ್ ಜೊತೆ ನಮ್ಮ ವಿದ್ಯಾಲಯ ಮುಂದಿನ ದಿನಗಳಲ್ಲಿ ಕೈ ಜೋಡಿಸಲಿದೆ ಎಂದರು. ಕಾರ್ಯಾಗಾರದ ಸಹ ಸಂಚಾಲಕರಾದ ಡಾ.ಶಿಲ್ಪಾ ಡಿ.ಆರ್ ವಂದನಾರ್ಪಣೆ ಮಾಡಿದರು.

click me!