ಶಾಲೆ ಮಕ್ಕಳಿಗೆ ಹಬ್ಬ, ಜನ್ಮದಿನ ವಿಶೇಷ ಊಟಕ್ಕೆ ಅವಕಾಶ..!

By Kannadaprabha News  |  First Published Aug 3, 2024, 12:27 PM IST

ಕೇಂದ್ರ ಸರ್ಕಾರವು ಪಿಎಂ ಪೋಷಣೆ (ಮಧ್ಯಾಹ್ನದ ಬಿಸಿಯೂಟ) ಯೋಜನೆಯಡಿ ಶಾಲೆಗಳಲ್ಲಿ ಸಮುದಾಯದ ಭಾಗ ವಹಿಸುವಿಕೆ ಕಾರ್ಯಕ್ರಮವಾಗಿ ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೆಗಳು, ವ್ಯಾಪಾರ, ವಾಣಿಜ್ಯ ಸೇರಿದಂತೆ ಸಮುದಾಯದ ಯಾವುದೇ ಸದಸ್ಯರು ತಮ್ಮ ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕೋತ್ಸವ, ಹಬ್ಬಗಳು ಸೇರಿದಂತೆ ಇನ್ನಿತರೆ ವಿಶೇಷ ಸಂದರ್ಭಗಳಲ್ಲಿ ದಿನದ ಭೋಜನ ಕಾರ್ಯಕ್ರಮದಡಿ ಪೌಷ್ಟಿಕ ಮತ್ತು ಆರೋಗ್ಯಕರ ಊಟ/ ಆಹಾರ ಪದಾರ್ಥಗಳನ್ನು ಒದಗಿಸಲು ಅನುಮತಿ ನೀಡಿದೆ. 
 


ಬೆಂಗಳೂರು(ಆ.03):  ರಾಜ್ಯ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಸಾರ್ವಜನಿಕರು ಅಥವಾ ಸಮುದಾಯದ ಸದಸ್ಯರು ಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ 'ವಿಶೇಷ ಭೋಜನ' ವ್ಯವಸ್ಥೆ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದೆ.

ಕೇಂದ್ರ ಸರ್ಕಾರವು ಪಿಎಂ ಪೋಷಣೆ (ಮಧ್ಯಾಹ್ನದ ಬಿಸಿಯೂಟ) ಯೋಜನೆಯಡಿ ಶಾಲೆಗಳಲ್ಲಿ ಸಮುದಾಯದ ಭಾಗ ವಹಿಸುವಿಕೆ ಕಾರ್ಯಕ್ರಮವಾಗಿ ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೆಗಳು, ವ್ಯಾಪಾರ, ವಾಣಿಜ್ಯ ಸೇರಿದಂತೆ ಸಮುದಾಯದ ಯಾವುದೇ ಸದಸ್ಯರು ತಮ್ಮ ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕೋತ್ಸವ, ಹಬ್ಬಗಳು ಸೇರಿದಂತೆ ಇನ್ನಿತರೆ ವಿಶೇಷ ಸಂದರ್ಭಗಳಲ್ಲಿ ದಿನದ ಭೋಜನ ಕಾರ್ಯಕ್ರಮದಡಿ ಪೌಷ್ಟಿಕ ಮತ್ತು ಆರೋಗ್ಯಕರ ಊಟ/ ಆಹಾರ ಪದಾರ್ಥಗಳನ್ನು ಒದಗಿಸಲು ಅನುಮತಿ ನೀಡಿದೆ. ಈ ಸಂಬಂಧ ಕೆಲ ಮಾರ್ಗಸೂಚಿಗಳನ್ನು ನೀಡಿದೆ. ಎಲ್ಲ ಶಾಲೆಗಳಲ್ಲೂ ವಿಶೇಷ ಭೋಜನ ಆಯೋಜನೆ ಸಮಯದಲ್ಲಿ ಅವುಗಳನ್ನು ಪಾಲಿಸಬೇಕೆಂದು ಇಲಾಖೆ ಸೂಚಿಸಿದೆ.

Tap to resize

Latest Videos

ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೆ 2 ದಿನ ಬದಲು 6 ದಿನ ಮೊಟ್ಟೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಭೋಜನದಲ್ಲಿ ತಾಜಾ, ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಆಹಾರವನ್ನು ನೀಡಬೇಕು. ಸ್ಥಳೀಯವಾಗಿ ಲಭ್ಯವಿರುವ ತರಕಾರಿಗಳು, ಕಾಳುಗಳು, ಸಿರಿಧಾನ್ಯಗಳು ವಿಶೇಷ ಭೋಜನದ ಮೆನುವಿನಲ್ಲಿ ಅಳವಡಿ ಸಬೇಕು. ಆಹಾರ ಧಾನ್ಯಗಳ ಸಂಗ್ರಹಣೆ, ಅಡುಗೆ ಮಾಡುವಾಗ/ಬಡಿಸುವಾಗ ಸ್ವಚ್ಛತೆ ಮತ್ತು ನೈರ್ಮಲ್ಯದ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಂಕ್‌ ಫುಡ್ ಗೆ ಅವಕಾಶ ನೀಡಬಾರದು. ಋತುಮಾನದ ಹಣ್ಣುಗಳನ್ನು ನೀಡಬಹುದು.
ವಿದ್ಯಾರ್ಥಿಗಳಿಗೆ ಊಟವನ್ನು ಬಡಿಸುವ ಮೊದಲು ಶಿಕ್ಷಕರು/ಅಡುಗೆಯವರು ರುಚಿ ನೋಡಬೇಕು ಎಂದು ಸೂಚಿಸಲಾಗಿದೆ.

click me!