ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ : ಪದವಿ ವಿದ್ಯಾರ್ಥಿಗಳಿಗೆ 10 ಸಾವಿರ ವಿದ್ಯಾರ್ಥಿ ವೇತನ

By Kannadaprabha News  |  First Published Sep 4, 2021, 10:11 AM IST
  • ನೃಪತುಂಗ ಕನ್ನಡ ಮಾಧ್ಯಮ ವಿಜ್ಞಾನ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಪ್ರಸ್ತುತ ಪದವಿ ಪೂರ್ವ ಶಿಕ್ಷಣದಲ್ಲಿ ಕನ್ನಡದಲ್ಲಿ ವಿಜ್ಞಾನ ಶಿಕ್ಷಣ
  • ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ  10 ಸಾವಿರ ರು. ವಿದ್ಯಾರ್ಥಿವೇತನ

ಮೈಸೂರು (ಸೆ.04): ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ನೃಪತುಂಗ ಕನ್ನಡ ಮಾಧ್ಯಮ ವಿಜ್ಞಾನ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಪ್ರಸ್ತುತ ಪದವಿ ಪೂರ್ವ ಶಿಕ್ಷಣದಲ್ಲಿ ಕನ್ನಡದಲ್ಲಿ ವಿಜ್ಞಾನ ಶಿಕ್ಷಣವನ್ನು ನೀಡುತ್ತಿರುವ ರಾಜ್ಯದ ಏಕೈಕ ಹಾಗೂ ಪ್ರಥಮ ಕಾಲೇಜು ಆಗಿದೆ.

 ಈ ವರ್ಷ ಪಿಯುಸಿಯಲ್ಲಿ ವಿಜ್ಞಾನ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ಓದಲು ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ  10 ಸಾವಿರ ರು. ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

Latest Videos

undefined

21 ಪಿಯು ಕಾಲೇಜುಗಳಲ್ಲಿ ಕನ್ನಡದಲ್ಲಿ ವಿಜ್ಞಾನ ಬೋಧನೆ

ಸಂಸ್ಥೆಯ ಕಾರ್ಯದರ್ಶಿ ಸ.ರ. ಸುದರ್ಶನ, ಎಚ್‌.ಜಿ. ಕೃಷ್ಣಪ್ಪ ವಿದ್ಯಾರ್ಥಿಗಳ  ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಿದ್ದಾರೆ. ರಾಜ್ಯಾದ್ಯಂತ ಇರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಆ.30 ಕೊನೆಯ ದಿನ. ಹೆಚ್ಚಿನ ವಿವರಗಳಿಗೆ ಮೊ. 97433 66883 ಸಂಪರ್ಕಿಸಬಹುದು.

click me!