ಪ್ಲೇಸ್‌ಮೆಂಟ್‌: ಪಿಇಎಸ್‌ ವಿವಿ 3 ವಿದ್ಯಾರ್ಥಿಗಳಿಗೆ ವರ್ಷಕ್ಕೆ 39 ಲಕ್ಷ ರು. ವೇತನ..!

By Kannadaprabha News  |  First Published Aug 14, 2020, 10:34 AM IST

8ನೇ ಸೆಮಿಸ್ಟರ್‌ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಂದು ವರ್ಷ ಮೊದಲೇ ಪ್ಲೇಸ್‌ಮೆಂಟ್‌| ಭರಣಿ ಉಜ್ಜಯಿಸಿ ಕೆಂಪಯ್ಯ, ವಿರಾಜ್‌ ಸಿ. ಬುಕಿಟಗರ್‌ ಮತ್ತು ಆಕಾಶ್‌ ಮುಖೋಪಾಧ್ಯಾಯ ಎಂಬ ಮೂವರಿಗೆ ವಾರ್ಷಿಕ 39.2 ಲಕ್ಷ ವೇತನ ನೀಡುವುದಾಗಿ ತಿಳಿಸಿದ ಆ್ಯಪ್‌ ಡೈನಾಮಿಕ್‌ ಟೆಕ್ನಾಲಜಿ ಇಂಡಿಯಾ ಪ್ರೈ.ಲಿಮಿಟೆಡ್‌ ಸಂಸ್ಥೆ| 


ಬೆಂಗಳೂರು(ಆ.14): ಕೊರೋನಾ ಸಂದರ್ಭದಲ್ಲಿಯೂ ಪಿಇಎಸ್‌ ವಿಶ್ವವಿದ್ಯಾಲಯವು ಪ್ಲೇಸ್‌ಮೆಂಟ್‌ ಕಾರ್ಯ ಮುಂದುವರಿಸಿದೆ. ಆ್ಯಪ್‌ ಡೈನಾಮಿಕ್‌ ಟೆಕ್ನಾಲಜಿ ಇಂಡಿಯಾ ಪ್ರೈ.ಲಿಮಿಟೆಡ್‌ ಸಂಸ್ಥೆಯು ಮೂವರು ವಿದ್ಯಾರ್ಥಿಗಳಿಗೆ ವಾರ್ಷಿಕ 39.2 ಲಕ್ಷ ವೇತನ ನೀಡಿ ಪ್ಲೇಸ್‌ಮೆಂಟ್‌ಗೆ ಆಯ್ಕೆ ಮಾಡಿಕೊಂಡಿದೆ.     

ಸದ್ಯ 8ನೇ ಸೆಮಿಸ್ಟರ್‌ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಂದು ವರ್ಷ ಮೊದಲೇ ಪ್ಲೇಸ್‌ಮೆಂಟ್‌ ಆಫರ್‌ ನೀಡಿದೆ. ಭರಣಿ ಉಜ್ಜಯಿಸಿ ಕೆಂಪಯ್ಯ, ವಿರಾಜ್‌ ಸಿ. ಬುಕಿಟಗರ್‌ ಮತ್ತು ಆಕಾಶ್‌ ಮುಖೋಪಾಧ್ಯಾಯ ಎಂಬ ಮೂವರಿಗೆ ವಾರ್ಷಿಕ 39.2 ಲಕ್ಷ ವೇತನ ನೀಡುವುದಾಗಿ ತಿಳಿಸಿದೆ. ಸದ್ಯ ಈ ಮೂವರು ಇದೇ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಿದ್ದು, ತಿಂಗಳಿಗೆ 75 ಸಾವಿರ ರು. ವೇತನ ನೀಡುತ್ತಿದೆ.

Tap to resize

Latest Videos

ಬೆಂಗಳೂರಿನ ಪಿಇಎಸ್‌ ವಿವಿ 5 ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆ ಪಾಸ್‌

ಪಿಇಎಸ್‌ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಕಳೆದ ಬಾರಿ ವಾರ್ಷಿಕ 49.75 ಲಕ್ಷ ರು. ಅತಿ ಹೆಚ್ಚಿನ ಪ್ಲೇಸ್‌ಮೆಂಟ್‌ ದೊರಕಿತ್ತು. ಇದೀಗ 2021ನೇ ಸಾಲಿನ ಪ್ಲೇಸ್‌ಮೆಂಟ್‌ ವರ್ಷಕ್ಕೂ ಮೊದಲೇ ಆರಂಭವಾಗಿದೆ ಎಂದು ವಿವಿ ಕುಲಪತಿ ಡಾ. ಎಂ.ಆರ್‌.ದೊರೆಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!