ಶಿಕ್ಷಕರ ಅರ್ಹತಾ ಪರೀಕ್ಷೆ ( ಟಿಇಟಿ) ದಿನಾಂಕ ಪ್ರಕಟಿಸಿದ ಸುಚಿವ ಸುರೇಶ್ ಕುಮಾರ್

By Suvarna News  |  First Published Aug 17, 2020, 7:26 PM IST

ಕೊರೊನಾ ಸೋಂಕಿನ ಹಿನ್ನೆಲೆ ಮುಂದೂಡಲ್ಪಟ್ಟಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೊಸ ದಿನಾಂಕವನ್ನು ಪ್ರಕಟಿಸಿದ್ದಾರೆ.


ಬೆಂಗಳೂರು, (ಆ.17): ಶಿಕ್ಷಕರ ಅರ್ಹತಾ ಪರೀಕ್ಷೆ ( ಟಿಇಟಿ) ಅಕ್ಟೋಬರ್ 4 ರಂದು ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ.

ಕೊರೋನಾ ಸೋಂಕಿನ ಹಿನ್ನೆಲೆ  ಶಿಕ್ಷಕರ ಅರ್ಹತಾ ಪರೀಕ್ಷೆ ( ಟಿಇಟಿ) ಯನ್ನು ಮುಂದೂಡಲಾಗಿತ್ತು. ಇದೀಗ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ  ಅಕ್ಟೋಬರ್ 4 ರಂದು ಪರೀಕ್ಷೆ ನಡೆಯಲಿದೆ ಎಂದು ಸುರೇಶ್ ಕುಮಾರ್ ಇಂದು (ಸೋಮವಾರ) ಸುದ್ದಿಗಾರರ ಮುಂದೆ  ತಿಳಿಸಿದರು. 

Tap to resize

Latest Videos

undefined

ಜು.12ಕ್ಕೆ ನಿಗದಿಯಾಗಿದ್ದ ರಾಜ್ಯದ 'ಟಿಇಟಿ ಪರೀಕ್ಷೆ' ಮುಂದೂಡಿಕೆ

ಕೊರೋನಾ ಸೋಂಕು ಹರಡುತ್ತಿರುವ ಕಾರಣ ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗುವುದು.. ಈ ಬಗ್ಗೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಟೀಚರ್ ಎಲಿಜಿಬಿಲಿಟಿ ಟೆಸ್ಟ್(ಟಿಇಟಿ) ಜುಲೈ 12ರಂದು ನಡೆಯಬೇಕಿತ್ತು. ಆದ್ರೆ, ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದೂಡಿತ್ತು

click me!