ಬೆಂಗಳೂರಿನ ಐಐಎಸ್‌ಸಿಗೆ ವಿಶ್ವದಲ್ಲೇ ನಂ. 2 ಗೌರವ| ರಿಸರ್ಚ್ ಇಂಪ್ಯಾಕ್ಟ್ ವಿಭಾಗದಲ್ಲಿ ಹೊಸ ಸಾಧನೆ
ನವದೆಹಲಿ[ಜೂ.20]: ಉನ್ನತ ಶಿಕ್ಷಣ ಕುರಿತ ಜಾಗತಿಕ ಸಲಹಾ ಸಂಸ್ಥೆಯಾಗಿರುವ ಕ್ವಾಕರೆಲ್ಲಿ ಸೈಮಂಡ್ಸ್ ಸಂಸ್ಥೆ, ವಿಶ್ವದ ಟಾಪ್ ವಿಶ್ವವಿದ್ಯಾಲಯಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. 2020ನೇ ಸಾಲಿಗೆ ಸೇರಿದ ಈ ಪಟ್ಟಿಯಲ್ಲಿ ಟಾಪ್ 100ರಲ್ಲಿ ಭಾರತದ ಯಾವುದೇ ವಿವಿಗಳು ಸ್ಥಾನ ಪಡೆದಿಲ್ಲ.
ಆದರೆ ವಿಶೇಷವೆಂದರೆ ಸಂಶೋಧನಾ ಪರಿಣಾಮಗಳ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ವಿಶ್ವ ದಲ್ಲೇ ನಂ.2 ಸ್ಥಾನ ಪಡೆದುಕೊಂಡಿದೆ. ಪ್ರತಿ ಬೋಧಕರ ಉಲ್ಲೇಖದಲ್ಲಿ ಐಐ ಎಸ್‌ಸಿ 100ಕ್ಕೆ 100 ಅಂಕ ಪಡೆದುಕೊಂಡಿದೆ ಎಂದು ವರದಿ ತಿಳಿಸಿದೆ
ಇನ್ನು ಟಾಪ್ 200 ವಿವಿ ಗಳ ಪಟ್ಟಿಯಲ್ಲಿ ಮುಂಬೈ ಐಐಟಿ 152, ಐಐಟಿ ದೆಹಲಿ 182, ಐಐಎಸ್‌ಸಿ 184ನೇ ಸ್ಥಾನ ಪಡೆದುಕೊಂಡಿದೆ.
ಉಳಿದಂತೆ ಮೆಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಪ್ ಟೆಕ್ನಾಲಜಿ, ಸ್ಟ್ಯಾನ್ ಫೋರ್ಡ್ ವಿವಿ ಮತ್ತು ಹಾರ್ವಡ್ ವಿವಿಗಳೂ ವಿಶ್ವದ ಟಾಪ್ 3 ವಿವಿಗಳಾಗಿ ಹೊರಹೊಮ್ಮಿವೆ. ಟಾಪ್ 10ರಲ್ಲಿ ಅಮೆರಿಕದ 5, ಇಂಗ್ಲೆಂಡ್‌ನ 4 ಹಾಗೂ ಸ್ವಿಜರ್‌ಲೆಂಡ್‌ನ 1 ವಿವಿ ಇದೆ.