ಯಾವ ಕಾರಣಕ್ಕೂ JEE ಮತ್ತು NEET ಪರೀಕ್ಷೆ ಮುಂದಕ್ಕೆ ಹಾಕುವುದು ಬೇಡ/ ಪ್ರಧಾನಿ ಮೋದಿಗೆ ಶಿಕ್ಷಣ ಸಂಸ್ಥೆಗಳ ಪತ್ರ/ ಕೆಲವರು ಇಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ
ನವದೆಹಲಿ(ಆ. 27) ಕರ್ನಾಟಕದಲ್ಲಿ ಕೊರೋನಾ ನಡುವೆಯೂ SSLC ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿ ಫಲಿತಾಂಶವನ್ನು ನೀಡಲಾಗಿತ್ತು. ಬಾಕಿ ಉಳಿದುಕೊಂಡಿದ್ದ ದ್ವಿತೀಯ ಪಿಯು ಆಂಗ್ಲ ಪರೀಕ್ಷೆಯನ್ನು ಮುಗಿಸಲಾಗಿತ್ತು. ಇದೆಲ್ಲದರ ನಡುವೆ JEE ಮತ್ತು NEET ಪರೀಕ್ಷೆಗಳು ಹತ್ತಿರ ಬಂದಿವೆ. ಸವಾಲುಗಳ ನಡುವೆ ನಡೆಸುತ್ತೇನೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪರೀಕ್ಷೆ ನಡೆಸುವುದು ಬೇಡ ಎಂಬ ಅಭಿಪ್ರಾಯ ಕೆಲ ರಾಜಕೀಯ ಪಕ್ಷಗಳಿಂದ ಕೇಳಿಬರುತ್ತಿದ್ದರೂ 150 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಪರೀಕ್ಷೆ ನಡೆಸಿ ಎಂದು ಮೋದಿ ಬೆಂಬಲಕ್ಕೆ ನಿಂತಿವೆ.
undefined
ದೆಹಲಿ ವಿಶ್ವವಿದ್ಯಾಲಯ, ಜೆಎನ್‌ಯು, ಸೆಂಟ್ರಲ್ ಯುನಿವರ್ಸಿಟಿ ಆಫ್ ಕೇರಳ, ಕ್ಯಾಲಿಫೋರ್ನಿಯಾ ಯುನಿವರ್ಸಿಟಿ ಸೇರಿದಂತೆ 150 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಮತ್ತು ಪ್ರೊಫೇಸರ್ ಗಳು ಪರೀಕ್ಷೆ ನಡೆಸಿ ಎಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿವೆ. ಪರೀಕ್ಷೆ ವಿಳಂಬ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಿನೆರಳು ಬೀರುತ್ತದೆ ಎಂಬ ಆತಂಕವನ್ನು ಹೊರಹಾಕಿವೆ.
ಪರೀಕ್ಷೆ ವಿಚಾರದಲ್ಲಿ ಯಾವ ಗೊಂದಲ ಇಲ್ಲ
ಯುವಕರ ಕನಸು ಮತ್ತು ಭವಿಷ್ಯದ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ. ಕೆಲವರು ರಾಜಕಾರಣ ಉದ್ದೇಶ ಇಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟ ಆಡುವ ಯತ್ನ ಮಾಡುತ್ತಿದ್ದಾರೆ ಎಂದು ಸಂಸ್ಥೆಗಳು ಆರೋಪಿಸಿವೆ.
ಪರೀಕ್ಷೆ ಮುಂದೆ ಹಾಕುವುದರ ಬಗ್ಗೆ ಸುಪ್ರೀಂ ಕೋರ್ಟಗೆ ಅರ್ಜಿ ಸಲ್ಲಿಕೆಯಾಗಿದ್ದು ಸರ್ವೋಚ್ಛ ನ್ಯಾಯಾಲಯ ವಜಾ ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯದ ಒಂದು ವರ್ಷ ಇದರ ಮೇಲೆ ನಿರ್ಧರಿತವಾಗಿದ್ದು ನಿಮ್ಮ ನಾಯಕತ್ವದಲ್ಲಿ ಸಕಲ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಬಹುದು ಎಂಬ ವಿಶ್ವಾಸವನ್ನು ಸಂಸ್ಥೆಗಳು ವ್ಯಕ್ತಪಡಿಸಿವೆ. ಸೆಪ್ಟೆಂಬರ್ 1 ರಿಂದ 6 ರ ನಡುವೆ ಪರೀಕ್ಷೆಗಳು ನಡೆಯಲಿದ್ದು ಸುಮಾರು 25 ಲಕ್ಷ ವಿದ್ಯಾರ್ಥಿಗಳು ಎದುರಿಸಲಿದ್ದಾರೆ.