ಬೆಸ್ಟ್ ಕರಿಯರ್ ನಿಮ್ಮದಾಗಲೂ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಎಂದು ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ಕೆಲವೊಂದಿಷ್ಟು ಬೆಸ್ಟ್ ಜಾಬ್‌ಗಳ ವಿವರ. ಅವುಗಳಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಉತ್ತಮ ಕರಿಯರ್ ನಿಮ್ಮದಾಗುತ್ತೆ.
ಹೆಚ್ಚಿನ ಜನರಿಗೆ ಐಟಿ ವಿಭಾಗದಲ್ಲಿ ಕೆಲಸ ಮಾಡುವುದೆಂದರೆ ಇಷ್ಟ. ಹಾಗಂತ ಅದೇ ಕ್ಷೇತ್ರದಲ್ಲಿ ಕಂಪ್ಯೂಟರ್ ಮುಂದೇ ಕುಳಿತು ನೀವು ಕೆಲಸ ಮಾಡಬೇಕು ಎಂದೇನಿಲ್ಲ. ಐಟಿ ಕ್ಷೇತ್ರಕ್ಕಿಂತ ಹೆಚ್ಚು ಸ್ಕೋಪ್ ಇರುವ , ಹಲವು ಡಿಮ್ಯಾಂಡಿಂಗ್ ಕೆಲಸಗಳಿವೆ. ಅವುಗಳು ಯಾವುದೆಂದು ತಿಳಿದು ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಕರಿಯರ್‌ನಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.
ವೆಬ್ ಡೆವಲಪರ್: ವೆಬ್ ಪೇಜ್, ವೆಬ್ ಅಪ್ಲಿಕೇಶನ್, ವೆಬ್ ಕಂಟೆಂಟ್ ಇವನ್ನೆಲ್ಲಾ ವೆಬ್ ಡೆವಲಪರ್ ಮಾಡುತ್ತಾರೆ. ಅದಕ್ಕಾಗಿ ಮುಖ್ಯವಾಗಿ ಸಿಸ್ಟಮ್ ಹೇಗೆಲ್ಲಾ ಓಪೆರೇಟ್ ಮಾಡಬೇಕು ಅನ್ನೋ ಸ್ಕಿಲ್ ತಿಳಿದಿರಬೇಕು. ಜೊತೆಗೆ ಮೊಬೈಲ್ ಟೆಕ್, ಬೇರೆ ಬೇರೆ ಟೆಕ್ನಿಕಲ್ ಸ್ಕಿಲ್, ವೆಬ್ ಲ್ಯಾಂಗ್ವೇಜ್, ಎಚ್‌ಟಿಎಂಎಲ್ ಮತ್ತು ಜಾವಾಸ್ಕ್ರಿಪ್ಟ್ ಗೊತ್ತಿರಬೇಕು.
PUC ನಂತರ ಮುಂದೇನು? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಫ್ಟ್‌ವೇರ್ ಎಂಜಿನಿಯರ್: ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿ ಬರುವ ಎಲ್ಲಾ ಪ್ರೋಗ್ರಾಮ್‌ಗಳ ಕಾರ್ಯವನ್ನು ಸಾಫ್ಟ್‌ವೇರ್ ಎಂಜಿನಿಯರ್ ನೋಡಿಕೊಳ್ಳುತ್ತಾರೆ. ಈ ಕ್ಷೇತ್ರದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಹಲವಾರು ಕೆಲಸಗಳಿವೆ. ನೀವು ಅಲ್ಲಿ ಕಾರ್ಯ ನಿರ್ವಹಿಸಬಹುದು.
ಡಾಟಾ ಮಾಡೆಲರ್: ಐಟಿ ಪ್ರೊಫೆಷನಲ್ಸ್ ಡಾಟಾ ಡಿಸೈನಿಂಗ್ ಮತ್ತು ಡಾಟಾ ಫೀಲ್ಡ್‌ಗಳನ್ನು ಕ್ರಿಯೇಟ್ ಮಾಡುತ್ತಾರೆ. ಎಲ್ಲ ಕಂಪನಿಗಳಿಗೂ ಈ ಕೆಲಸ ಮಾಡುವವರು ಬೇಕಾಗಿರುತ್ತಾರೆ.
ರಜೆಯಲ್ಲಿ ಮಾಡಬಹುದಾದ ಪಾರ್ಟ್ ಟೈಮ್ ಉದ್ಯೋಗಗಳು
ಐಟಿ ಕನ್ಸಲ್ಟೆಂಟ್: ಈ ಹುದ್ದೆಯ ಮುಖ್ಯ ಕೆಲಸವೆಂದರೆ ಕಂಪ್ಯೂಟರ್ ಸಿಸ್ಟಮ್ ಇವ್ಯಾಲ್ಯೂಯೇಟ್ ಮಾಡುವುದು ಮತ್ತು ಇತರರು ಮಾಡಲು ಸಾಧ್ಯವೇ ಇರದಂತಹ ವಿಷಯದ ಬಗ್ಗೆ ರಿಸರ್ಚ್ ಮಾಡುವುದು. ಹೆಚ್ಚಿನ ಕಂಪನಿಗಳಿಗೆ ಐಟಿ ಕನ್ಸಲ್ಟೆಂಟ್ ಅಗತ್ಯವಿದೆ. ಕಂಪ್ಯೂಟರ್ ಚೆನ್ನಾಗಿ ಕೆಲಸ ಮಾಡಲು ಯಾವ ರೀತಿಯ ಟೆಕ್ನಿಕ್ ಬಳಕೆ ಮಾಡಬಹುದು ಅನ್ನೋದು ಅವರಿಗೆ ತಿಳಿದಿರಬೇಕು.
ಮೊಬೈಲ್ ಅಪ್ಲಿಕೇಶನ್ ಡೆವಲಪರ್: ಹೆಚ್ಚಿನ ಎಲ್ಲಾ ಜನರ ಬಳಿ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಕಂಪ್ಯೂಟರ್ ಇರುತ್ತದೆ. ಬೇಸಿಕ್ ಕೋಡಿಂಗ್ ಲ್ಯಾಂಗ್ವೇಜ್ ಬಳಸಿ ಡೆವಲಪರ್ಸ್ ಫ್ಯೂಚರ್ ಐಓಎಸ್ ಮತ್ತು ಆಂಡ್ರಾಯ್ಡ್ ಡಿವೈಸ್ ಗಳಿಗೆ ಪ್ರೋಗ್ರಾಮ್ ಕ್ರಿಯೇಟ್ ಮಾಡುತ್ತಾರೆ. ಈ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಇದೆ.
ಪ್ರೊಫೆಷನಲ್ ಫೋಟೋಗ್ರಾಫರ್ ಆಗೋ ಆಸೆ ಇದ್ರೆ ಟ್ರೈ ಮಾಡಿ