ಕೋವಿಡ್-19 ಲಾಕ್ಡೌನ್ನಿಂದ ರಾಷ್ಟ್ರಾದ್ಯಂತ ಅನಿರ್ದಿಷ್ಟಾವಧಿವರೆಗೆ ಮುಚ್ಚಲ್ಪಟ್ಟಿರುವ ಶಾಲೆ-ಕಾಲೇಜುಗಳನ್ನು ಜುಲೈನಲ್ಲಿ ಪ್ರಾರಂಭಿಸಲು ಹೊರಟ್ಟಿದ್ದ ರಾಜ್ಯ ಸರ್ಕಾರ ಇದೀಗ ಹಿಂದೆ ಸರಿದಿದೆ.
ಬೆಂಗಳೂರು, (ಜೂನ್.08): ಶಾಲಾ ಆರಂಭದ ಕುರಿತಂತೆ ಇದ್ದ ಗೊಂದಲಗಳಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಯಾವುದೇ ಸಂದರ್ಭದಲ್ಲಿಯೂ ಶಿಕ್ಷಣ ಇಲಾಖೆ ಜುಲೈ 1ರಿಂದ ಯಾವ ಶಾಲೆಯನ್ನೂ ಪ್ರಾರಂಭಿಸುವ ಉದ್ದೇಶವನ್ನು ಹೊಂದಿಲ್ಲ. ಈ ಬಗ್ಗೆ ಯಾವುದೇ ಪೋಷಕರು ಅನವಶ್ಯಕವಾಗಿ ಗೊಂದಲಕ್ಕೆ ಒಳಗಾಗುವುದು ಬೇಡ. ರಾಜ್ಯದಲ್ಲಿ ಶಾಲಾರಂಭ ಕುರಿತಂತೆ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಸಹ ಚರ್ಚಿಸಿ ಸಹಮತ ಪಡೆಯಲು ತೀರ್ಮಾನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
undefined
ಶಾಲಾ-ಕಾಲೇಜು ಪ್ರಾರಂಭ ಯಾವಾಗ? ದಿನಾಂಕ ಪ್ರಕಟಿಸಿದ ಕೇಂದ್ರ ಸಚಿವ
ಕೋವಿಡ್-19 ಲಾಕ್ಡೌನ್ನಿಂದ ರಾಷ್ಟ್ರಾದ್ಯಂತ ಅನಿರ್ದಿಷ್ಟಾವಧಿವರೆಗೆ ಮುಚ್ಚಲ್ಪಟ್ಟಿರುವ ಶಾಲೆ-ಕಾಲೇಜುಗಳನ್ನು ಆಗಸ್ಟ್ 15ರ ನಂತರದಲ್ಲಿ ಪುನರಾರಂಭಿಸುವ ಕೇಂದ್ರ ಸರ್ಕಾರದ ನಿರ್ಧಾರಿಸಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಶಿಕ್ಷಣ ಇಲಾಖೆ ಪೋಷಕರ ಅಭಿಪ್ರಾಯವನ್ನು ಸಂಗ್ರಹಿಸಲು ತಯಾರಿ ನಡೆಸಿದ್ದು, ಜೂನ್ 10, 12ರಂದು ಪೋಷಕರ/ ಎಸ್ ಡಿಎಂಸಿ / ಎಸ್ ಎಂಸಿ ಸಭೆಗಳನ್ನು ನಡೆಸಿ ಕ್ರಮ ವಹಿಸಲು ನೀಡಲಾಗಿದ್ದ ಸೂಚನೆಯನ್ನು ಜೂನ್ 20ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
, ಜುಲೈ ಮೊದಲ ವಾರದಲ್ಲಿ ಶಾಲೆ ಪ್ರಾರಂಭ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ದಿನಾಂಕ 05-06-2020ರಿಂದ ಶಾಲೆಗೆ ಹಾಜರಾಗಿ ಶಾಲೆ ಪುನರಾರಂಭದ ಕುರಿತು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿತ್ತು. ಇದಕ್ಕೆ ಪೋಷಕರು ಸೇರಿದಂತೆ ಶಿಕ್ಷಣ ತಜ್ಞರು ಜುಲೈನಲ್ಲಿ ಶಾಲೆ ಪ್ರಾರಂಭಿಸುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದರು.
ಒಟ್ಟಿನಲ್ಲಿ ಕೋವಿಡ್-19 ಲಾಕ್ಡೌನ್ನಿಂದ ರಾಷ್ಟ್ರಾದ್ಯಂತ ಅನಿರ್ದಿಷ್ಟಾವಧಿವರೆಗೆ ಮುಚ್ಚಲ್ಪಟ್ಟಿರುವ ಶಾಲೆ-ಕಾಲೇಜುಗಳನ್ನು ಜುಲೈನಲ್ಲಿ ಪ್ರಾರಂಭಿಸಲು ಹೊರಟ್ಟಿದ್ದ ರಾಜ್ಯ ಸರ್ಕಾರ ಇದೀಗ ಹಿಂದೆ ಸರಿದಿದೆ.