ವಿದ್ಯಾರ್ಥಿಗಳಿಗೆ ಮನೆಯಲ್ಲೇ ಪಾಠ: ಕರ್ನಾಟಕ ಶಿಕ್ಷಣ ಇಲಾಖೆಯಿಂದ ವಿನೂತನ ಕಾರ್ಯ..!

By Suvarna NewsFirst Published Apr 13, 2020, 9:13 PM IST
Highlights
ಕೊರೋನಾ ಎಫೆಕ್ಟ್ ಹಿನ್ನೆಲೆ ವಿದ್ಯಾರ್ಥಿಗಳ ಪಠ್ಯ ಹಾಗೂ ಪರೀಕ್ಷೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮತ್ತೆ ಲಾಕ್ ಡೌನ್ ವಿಸ್ತರಣೆಗೆ ಸರ್ಕಾರ ನಿರ್ಧರಿಸಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಚಿಂತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆ ಹೊಸ ಐಡಿಯಾಯೊಂದನ್ನು ಮಾಡಿದೆ.
ಬೆಂಗಳೂರು, (ಏ.13): ಇನ್ನೂ 2 ವಾರ ಲಾಕ್​ಡೌನ್​ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಚಿಂತಿಸುತ್ತಿದ್ದಾರೆ. ಮತ್ತೊಂದೆಡೆ ಮಕ್ಕಳು ಏನೂ ಕೂಡ ಓದುತ್ತಿಲ್ಲ.

 ಹೀಗೆ ಆದ್ರೆ ಮುಂದೆ ಏನ್ಮಾಡೋದು ಎಂದು ಯೋಚಿಸುತ್ತಿರುವ ಪೋಷಕರಿಗೆ ರಾಜ್ಯಸರ್ಕಾರ ಖುಷಿಯ ಸಂಗತಿಯೊಂದನ್ನು ನೀಡಿದೆ.  ರಾಜ್ಯದ ಶಾಲಾ ಮಕ್ಕಳಿಗಾಗಿ  ಶಿಕ್ಷಣ ಇಲಾಖೆ "ಯೂಟ್ಯೂಬ್" ಚಾನೆಲ್ ಪ್ರಾರಂಭಿಸುವ ಹೊಸ್ತಿಲಿನಲ್ಲಿದೆ.

SSLC-PUC ಪರೀಕ್ಷೆ: ವಿದ್ಯಾರ್ಥಿ, ಪೋಷಕರಲ್ಲಿ ಸಚಿವ ಸುರೇಶ್ ಕುಮಾರ್ ವಿಶೇಷ ಮನವಿ

ಯೂಟ್ಯೂಬ್​ ಚಾನಲ್​ನ ಮೂಲಕ ನುರಿತರಿಂದ ಮಕ್ಕಳಿಗೆ ಕಲಿಸುವ ಯೋಚನೆಯೊಂದನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ. ಈ ಬಗ್ಗೆ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. 

ಈ ಸಂಬಂಧ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್​ ಕುಮಾರ್​, ಚಿತ್ರ ಬಿಡಿಸುವುದು, ಕಥೆ ಹೇಳುವುದು ಸೇರಿದಂತೆ ವಿವಿಧ ಚಟುವಟಿಕೆಯ ವಿಡಿಯೋಗಳ ಮೂಲಕ ಮಕ್ಕಳಿಗೆ ಆನ್​ಲೈನ್​ ಶಿಕ್ಷಣ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದಿದ್ದಾರೆ.

ಸಚಿವ ಸುರೇಶ್ ಕುಮಾರ್ ಮಾತು..!
ಈ ವರ್ಷದಿಂದ ಸರಕಾರಿ ಶಾಲಾ ಮಕ್ಕಳಿಗೆ "ಬೇಸಿಗೆ_ಸಂಭ್ರಮ" ಎಂಬ ಕಾರ್ಯಕ್ರಮ ಪ್ರಾರಂಭಿಸುವ ಯೋಜನೆ ಶಿಕ್ಷಣ ಇಲಾಕೆಯದ್ದಾಗಿತ್ತು. ಆದರೆ ಕೋವಿಡ್19 ಆ ಸಂಭ್ರಮವನ್ನು ಕಸಿದುಕೊಂಡಿತು.  ಇರಲಿ. ನಾವು ಸೋಲನ್ನೊಪ್ಪುವರಲ್ಲ.

ಈ ಯೂಟ್ಯೂಬ್ ಚಾನೆಲ್ ಮೂಲಕ ನಮ್ಮೆಲ್ಲಾ ಮಕ್ಕಳಿಗೆ ಕಥೆ, ಕವನ, ರಸಪ್ರಶ್ನೆ (ಕ್ವಿಜ್), ಕಲೆ, ಬೌದ್ಧಿಕ ಕಸರತ್ತು.....ಇವುಗಳ ಮೂಲಕ ಮನರಂಜನೆಯ ಮೂಲಕ ಕಲಿಕೆಗೆ ಒಂದು ವೇದಿಕೆ ನಿರ್ಮಿಸುವ ಹಂಬಲ‌ ನಮ್ಮದು. 

ತಾತ್ಕಾಲಿಕವಾಗಿ ಇದಕ್ಕೆ "ಮಕ್ಕಳ ವಾಣಿ" ಎಂದು ಹೆಸರಿಡಲಾಗಿದೆ. ಕೆಲವರು ಇದರ ಬದಲಿಗೆ "ಚಿಣ್ಣರ ಎಕ್ಸ್ ಪ್ರೆಸ್" ಎಂದು ಹೆಸರಿಡಬೇಕೆಂದು ಅಭಿಪ್ರಾಯಿಸಿದ್ದಾರೆ. 

ಇದಕ್ಕೆ ಇನ್ನೂ ಸೊಗಸಾದ, ಆಕರ್ಷಣೀಯ ಹೆಸರನ್ನು ತಮ್ಮಿಂದ ಅಪೇಕ್ಷಿಸಿದ್ದೇವೆ. ದಯವಿಟ್ಟು ತಮ್ಮ‌ ಮಕ್ಕಳಿಗೋಸ್ಕರ ಪ್ರಾರಂಭಿಸುತ್ತಿರುವ ಈ ಚಾನೆಲ್ ಗೆ ತಾವೇ ನಾಮಕರಣ ಮಾಡುವುದು ಇನ್ನಷ್ಟು ಸೊಗಸು ತರುತ್ತದೆ. ಎಂದಿರುವ ಸುರೇಶ್ ಕುಮಾರ್, ಇದೇ ಚಾನೆಲ್ ಮೂಲಕ ಬರುವ ದಿನಗಳಲ್ಲಿ SSLC ಮಕ್ಕಳಿಗೆ ಕಲಿಕಾ ಸಾಮಗ್ರಿಯನ್ನೂ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
click me!