ಸಿಇಟಿ ಬೆನ್ನಲ್ಲೇ ಕೆ-ಸೆಟ್‌ ಪರೀಕ್ಷೆ ದಿನಾಂಕ ಪ್ರಕಟ: SSLC ಯಾವಾಗ?

By Suvarna NewsFirst Published May 13, 2020, 4:37 PM IST
Highlights

ಮಾರಣಾಂತಿಕ ಕೊರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದೂಡಿಲ್ಪಟ್ಟಿದ್ದ K-SET (ಕೆಸೆಟ್) ಪರೀಕ್ಷೆಗಳ ದಿನಾಂಕವ ಘೋಷಣೆಯಾಗಿದೆ. 

ಬೆಂಗಳೂರು, (ಮೇ.13):  ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಪರೀಕ್ಷೆಯನ್ನು ಇದೇ ಜೂನ್ 21 ರಂದು ನಡೆಸಲು ತೀರ್ಮಾನಿಸಲಾಗಿದೆ.

ಮೈಸೂರು ವಿಶ್ವವಿದ್ಯಾಲಯ ಪ್ರತೀ ವರ್ಷ ಕರ್ನಾಟಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET)ಯನ್ನು ನಡೆಸುತ್ತದೆ. ಅದರಂತೆ ಈ ವರ್ಷವೂ ಕೊರೋನಾ ಭೀತಿಯ ನಡುವೆಯೂ ಪರೀಕ್ಷೆ ನಡೆಸಲು ಮುಂದಾಗಿರುವ ಮೈಸೂರು ವಿವಿ ಜೂನ್ 21, 2020ರ ಭಾನುವಾರದಂದು ಪರೀಕ್ಷೆ ನಡೆಸಲು ನಿರ್ಧರಿಸಿದೆ.

ವಿದ್ಯಾರ್ಥಿಗಳೇ ರೆಡಿಯಾಗಿ, ಕಾಲೇಜುಗಳ ಶೈಕ್ಷಣಿಕ ಚಟುವಟಿಕೆ ಆರಂಭ 

ಮೈಸೂರು ವಿಶ್ವವಿದ್ಯಾಲಯ ನಡೆಸುವ ಕೆಸೆಟ್‌-2020 ಪರೀಕ್ಷೆಗೆ ರಿಜಿಸ್ಟ್ರೇಷನ್‌ ಮಾಡಲು ಇತ್ತೀಚೆಗೆ ಮತ್ತೊಮ್ಮೆ ಅವಕಾಶ ನೀಡಿದ್ದು, ಆಕಾಂಕ್ಷಿಗಳು ರೂ.250 ದಂಡ ಶುಲ್ಕದೊಂದಿಗೆ ಆನ್‌ಲೈನ್‌ನಲ್ಲಿ ಮೇ 25 ರವರೆಗೆ ಅಪ್ಲಿಕೇಶನ್‌ ಸಲ್ಲಿಸಬಹುದು.

ಇನ್ನು ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಪರೀಕ್ಷೆ (ಸಿಇಟ) ದಿನಾಂಕವನ್ನು ಜುಲೈ 30, 31ಕ್ಕೆ ನಡೆಸಲು ಸರ್ಕಾರ ನಿರ್ಧರಿಸಿದೆ. ಬಹುಮುಖ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಜೂನ್ ನಡೆಸಲು ರಾಜ್ಯ ಸರ್ಕಾರ ಚಿಂತನೆಗಳು ನಡೆಸಿದ್ದು, ಇದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಬೋರ್ಡ್‌ಗೆ ಸಚಿವ ಸುರೇಶ್ ಕುಮಾರ್‌ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹದು.

 ಪದವಿ ಕಾಲೇಜು ಶೈಕ್ಷಣಿಕ ಚಟುವಟಿಕೆಗಳನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿವೆ. ಈ ಬಗ್ಗೆ ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಆಗಿರುವ ಡಾ. ಅಶ್ವಥ್ ನಾರಾಯಣ ಅವರು ತಿಳಿಸಿದ್ದಾರೆ.

click me!