ಅಂಗೈಯಲ್ಲಿ ಆಕಾಶ: 28 ಶಾಲೆಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ!

By Web DeskFirst Published Jul 13, 2019, 6:43 PM IST
Highlights

28 ಶಾಲೆಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ|ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಿದ ಖಾಸಗಿ ಮತ್ತು ಸರ್ಕಾರಿ ಶಾಲೆಗಳು| ಇತಿಹಾಸ ಬರೆದ ರಾಷ್ಟ್ರ ರಾಜಧಾನಿ ನವದೆಹಲಿಯ ಶಾಲೆಗಳು| ಖಾಸಗಿ NGO ಸಂಸ್ಥೆ SPACE ನಿರಂತರ ಪ್ರಯತ್ನದ ಫಲ|

ನವದೆಹಲಿ(ಜು.13): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ, ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 28 ಶಾಲೆಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಖಾಸಗಿ NGO ಸಂಸ್ಥೆ SPACE, ದೆಹಲಿಯ 25 ಸರ್ಕಾರಿ ಹಾಗೂ 3 ಖಾಸಗಿ ಶಾಲೆಗಳಲ್ಲಿ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಇದೊಂದು ಕ್ರಾಂತಿಕಾರಕ ನಡೆ ಎಂದು ಹೇಳಿರುವ SPACE ಸಂಸ್ಥೆ, ತೃತೀಯ ಲಿಂಗಿ ಎಂಬ ಏಕೈಕ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಮಕ್ಕಳು ಇದೀಗ ಯಾವುದೇ ಸಂಕೋಚವಿಲ್ಲದೇ ಶಿಕ್ಷಣ ಪಡೆಯಬಹುದು ಎಂದು ಸಂತಸ ವ್ಯಕ್ತಪಡಿಸಿದೆ.

click me!