ಡೆಂಗ್ಯೂ ಎಂಬ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತೇವೆ. ಅಷ್ಟೆಲ್ಲಾ ಸುಸ್ತು ಹೊಡೆಸುವ ಈ ರೋಗ ಮಳೆಗಾಲದಲ್ಲಿ ಮಾತ್ರ ಕಾಡುತ್ತೆ ಎಂಬ ನಂಬಿಕೆ ಜನರಲ್ಲಿ ಇದೆ. ಅಷ್ಟಕ್ಕೂ ಈ ರೋಗದ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳೆ ಬಗ್ಗೆ ಮಾಹಿತಿ ಇಲ್ಲಿದೆ.
ಸೊಳ್ಳೆಯಿಂದ ಹರಡುವ ವೈರಸ್ ರೋಗ ಡೆಂಗ್ಯೂ. ರೋಗದ ಬಗ್ಗೆ ಜಾಗೃತಿ ಏನೋ ಮೂಡಿಸಲಾಗುತ್ತಿದೆ. ಅದರ ಜೊತೆ ಜೊತೆಗೆ ಡೆಂಗ್ಯೂ ಪೀಡಿತರ ಸಂಖ್ಯೆಯೂ ವಿಪರೀತವಾಗುತ್ತಿವೆ. ಸೊಳ್ಳೆ ಕಾಟದ ಬಗ್ಗೆ ಜನರು ಚಿಂತಿತರಾಗುತ್ತಿದ್ದಾರೆ. ಆದರೂ, ಡೆಂಗ್ಯೂ ಬಗ್ಗೆ ಇರುವ ತಪ್ಪು ಕಲ್ಪನೆಗಳಿನ್ನೂ ತೊಲಗಿಲ್ಲ. ಮೇ 26, 2019ರವರೆಗೆ ಭಾರತದಲ್ಲಿ 5500 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಅದರಲ್ಲಿಯೂ ಕರ್ನಾಟಕದಲ್ಲಿಯೇ ಈ ಸಂಖ್ಯೆ ಹೆಚ್ಚು.
ಜನರಿಗೆ ಡೆಂಗ್ಯೂ ಹರಡುವ ಬಗ್ಗೆ ಅರಿವಿದ್ದರೂ, ಸೊಳ್ಳೆ ಕಾಟ ಮಾತ್ರ ಕಡಿಮೆಯಾಗುತ್ತಿಲ್ಲ. ಡೆಂಗ್ಯೂ ಬಂದರೆ ರೋಗಿ ದೇಹದಲ್ಲಿ ಪ್ಲೇಟ್‌ಲೆಟ್ಸ್ ಸಂಖ್ಯೆ ಕಡಿಮೆಯಾಗಿ ಅನುಭವಿಸುವ ಯಾತನೆ ಒಂದೆರಡಲ್ಲ. ಅನೇಕ ಬಾರಿ ಸಾವಿಗೂ ಈ ರೋಗ ಕಾರಣ ವಾಗಬಹುದು. ಅದಕ್ಕೆ ಇದು ಕೇವಲ ಮಳೆಗಾಲಕ್ಕೆ ಮಾತ್ರ ಸೀಮಿತವಾದ ರೋಗವಲ್ಲ ಎಂಬುದನ್ನು ಜನರು ನೆನಪಿನಲ್ಲಿಟ್ಟುಕೊಳ್ಳಬೇಕು.
ವರ್ಷಪೂರ್ತಿ ಸೊಳ್ಳೆ ಕಾಟ ಹೆಚ್ಚಾಗದಂತೆ ನೋಡಿಕೊಂಡು, ಡೆಂಗ್ಯೂಹರಡದಂತೆಎಚ್ಚರವಹಿಸಬೇಕು. ಮಳೆಗಾಲದಲ್ಲಿ ಡೆಂಗ್ಯೂ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗುವುದು ಹೌದು. ಆದರೂ, ಉಳಿದೆಲ್ಲ ಋತುಗಳಲ್ಲಿಯೂ ಈ ರೋಗ ಹರಡುವ ಸೊಳ್ಳೆಗಳು ಸಕ್ರಿಯವಾಗಿರುತ್ತವೆ. ಎಲ್ಲೆಲ್ಲಿ ನಿಂತ, ಕೊಳಕು ನೀರಿರುತ್ತೋ, ಅಲ್ಲಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಲೇ ಹೋಗುತ್ತವೆ. ಬೇಸಿಗೆಯಾದರೂ ಸರಿ.
ಆಗಾಗಚೆಕ್ಮಾಡಿ...
ಮನೆ ಹಾಗೂ ಕೆಲಸ ಮಾಡುವ ಆಫೀಸ್ ಸು ತ್ತಮುತ್ತ ನಿಂತ ಕೊಳಕು ನೀರಿಲ್ಲ ಎಂಬುದನ್ನು ಸದಾ ಪರೀಕ್ಷಿಸುತ್ತಲೇ ಇರಬೇಕು. ಟೈರ್‌ಗಳು, ಬಕೆಟ್, ಬೇಡದ ವಸ್ತುಗಳು ಹಾಗೂ ಯಾವುದೇ ನೀರು ನಿಲ್ಲುವಂಥ ವಸ್ತುಗಳು ಇರದಂತೆ ನೋಡಿಕೊಳ್ಳಿ. ಇವೆಲ್ಲವೂ ಮಾರಾಣಾಂತಿಕ ಕೀಟಗಳಿಗೆ ಹೇಳಿ ಮಾಡಿಸಿದ ಜಾಗಗಳು. ಅಂಥ ಕಡೆಗಳಲ್ಲಿ ಆಗಾಗಸೊಳ್ಳೆ ಸಾಯಿಸುವ ಸ್ಪ್ರೇ ಬಳಸಬೇಕು.
ಡೆಂಗ್ಯೂ ಕಾಡಲು ಮತ್ತೊಂದು ಕಾರಣ ಪತ್ತೆ
ಪ್ರೀತಿಪಾತ್ರರನ್ನುಸೇಫ್ ಆಗಿಡಿ...
ವಯಸ್ಸು, ಧರ್ಮ, ಜಾತಿ ಯಾವುದೂ ನೋಡದೇ ಡೆಂಗ್ಯೂ ಸೊಳ್ಳೆ ಕಚ್ಚಬಹುದು. ಅದಕ್ಕೆಮಕ್ಕಳಿಗೆ ಪೂರ್ತಿ ಸ್ಲೀವ್ಸ್ ಇರೋಬಟ್ಟೆಯನ್ನು ಸದಾ ಹಾಕಿ. ಅಲ್ಲದೇ ಸೊಳ್ಳೆ ಕಚ್ಚದಂಥ ಔಷಧಿಗಳನ್ನು ಹಚ್ಚಿಕೊಳ್ಳಿ.
ಒಂದು ಸೊಳ್ಳೆಯೂ ಜೀವಕ್ಕೆ ಅಪಾಯ ತರುವಂಥರೋಗವನ್ನು ತರಬಹುದು. ಡೆಂಗ್ಯೂ, ಮಲೇರಿಯಾ ಜೀವಕ್ಕೇ ಅಪಾಯ. ಅದಕ್ಕೆ ಯಾವುದೇ ಕಾರಣಕ್ಕೆ ಸೊಳ್ಳೆಯನ್ನು ನಿರ್ಲಕ್ಷಿಸಬೇಡಿ.