ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು; ಹಾಡಹಗಲೇ ರೌಡಿಶೀಟರ್ ಗುಂಡಿಕ್ಕಿ ಹತ್ಯೆ!

By Ravi Janekal  |  First Published May 6, 2023, 12:45 PM IST

ನಗರದಲ್ಲಿ ಹಾಡುಹಗಲೇ ಗುಂಡಿನ ದಾಳಿ ನಡೆದಿದೆ. ಕಾರ್ಪೋರೇಟರ್‌ರೊಬ್ಬರ ಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರೌಡಿ ಶೀಟರ್ ಆಗಿದ್ದ ಹೈದರ್ ನದಾಫ್ ಮೇಲೆ ಗುಂಡಿನ ದಾಳಿ‌ ನಡೆದ ಪರಿಣಾಮ ಹೈದರ್ ನದಾಫ್ ಸ್ಥಳದಲ್ಲಿಯೇ ಮೃತಪಟ್ಟದ್ದಾರೆ. 


ವಿಜಯಪುರ (ಮೇ.6) : ನಗರದಲ್ಲಿ ಹಾಡುಹಗಲೇ ಗುಂಡಿನ ದಾಳಿ ನಡೆದಿದೆ. ಕಾರ್ಪೋರೇಟರ್‌ರೊಬ್ಬರ ಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರೌಡಿ ಶೀಟರ್ ಆಗಿದ್ದ ಹೈದರ್ ನದಾಫ್(Rowdy sheeter hyder nadaf) ಮೇಲೆ ಗುಂಡಿನ ದಾಳಿ‌ ನಡೆದ ಪರಿಣಾಮ ಹೈದರ್ ನದಾಫ್ ಸ್ಥಳದಲ್ಲಿಯೇ ಮೃತಪಟ್ಟದ್ದಾರೆ. 

ವಿಜಯಪುರ  ನಗರದಲ್ಲಿ ಚಾಂದಪೂರ ಕಾಲೋನಿ(Chandapur Colony) ಬಳಿ‌ ಇರುವ ತನ್ನ ನಿವಾಸದಿಂದ ಹೊರ ಬಂದು ಕಾರು ಹತ್ತಿತ್ತದ್ದ ವೇಳೆ ಹೈದರ್ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು, ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಹೈದರ್ ಓಡಿ ಹೋಗಲು ಯತ್ನಿಸಿದ್ದಾನೆ. ಆದರೆ ಬೆನ್ನಟ್ಟಿದ್ದ ದುಷ್ಕರ್ಮಿಗಳು 5 ರಿಂದ 6 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಎರಡು ಗುಂಡುಗಳು ಪತ್ತೆಯಾಗಿವೆ.

Tap to resize

Latest Videos

2 ವರ್ಷದಿಂದ ಹಿಂಬಾಲಿಸಿ ಕೊಂದೇ ಬಿಟ್ಟ ಪಾಪಿ : 22 ವರ್ಷದ ಹುಡುಗಿಗೆ ಗುಂಡಿಕ್ಕಿ ಹತ್ಯೆ

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಬಳಿಕ ಮಾಧ್ಯಮಗಳ ಜತೆ ಮಾತನಾಡಿ,  ಕಳೆದ ಬಾರಿ ನಡೆದ ಮಹಾನಗರ ಪಾಲಿಕೆಯ ಚುನಾವಣೆ ದ್ವೇಷದ ಹಿನ್ನೆಲೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 4ಕ್ಕಿಂತ ಹೆಚ್ಚು ಬಾರಿ ಹೈದರ್ ಅಲಿ ನದಾಫ್‌ನ ಮೇಲೆ ಗುಂಡಿನ ದಾಳಿಗೈದು ಹತ್ಯೆ ಮಾಡಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಲೈಸೆನ್ಸ್ ಗನ್  ಮೂಲಕ ಹತ್ಯೆ ಮಾಡಿಲ್ಲ‌‌‌‌‌. ಹತ್ಯೆಯಲ್ಲಿ ಕಂಟ್ರಿಮೇಡ್ ಪಿಸ್ತೂಲು ಉಪಯೋಗವಾಗಿರುವ ಸಾಧ್ಯತೆ ಇದೆ ಎಂದರು. ಈ ಹತ್ಯೆ ಮಹಾನಗರ ಪಾಲಿಕೆಯ ಚುನಾವಣೆ ದ್ವೇಷಕ್ಕಾಗಿ ಹತ್ಯೆ ಮಾಡಲಾಗಿದೆ. ಆದಷ್ಟು ಬೇಗನೆ ದುಷ್ಕರ್ಮಿಗಳನ್ನು ಬಂಧನ ಮಾಡಲಾಗುತ್ತದೆ ಎಂದರು‌.

ಮೊನ್ನೆ ನಡೆದ ಪಾಲಿಕೆ ಚುನಾವಣೆಯಲ್ಲಿ ಹೈದರ್ ನದಾಫ್ ವಾರ್ಡ್ ನಂ.19 ರಿಂದ ತಮ್ಮ ಪತ್ನಿ ನಿಶಾತ್ ನದಾಫ್ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು. ಅಲ್ಲದೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಹೈದರ್ ನದಾಫ್.

ಕೊಲೆ: ಮೃತನ ಪತ್ನಿ ಸೇರಿದಂತೆ 3 ಬಂಧನ

ಮಾಲೂರು: ಇಲ್ಲಿಗೆ ಸಮೀಪದ ಇರಬನಹಳ್ಳಿ ತೋಪಿನಲ್ಲಿ ಐದು ದಿನದ ಹಿಂದೆ ಕಂಡು ಬಂದಿದ್ದ ಅಪರಿಚಿತ ಶವ ಪ್ರಕರಣವನ್ನು ಸ್ಥಳೀಯ ಪೊಲೀಸರು ಭೇದಿಸಿದ್ದು, ಕೊಲೆ ಸಂಬಂಧ ಮೃತನ ಪತ್ನಿ ಸೇರಿದಂತೆ ಮಹದೇವಪುರದ ಮೂವರನ್ನು ಬಂಧಿಸಿದ್ದಾರೆ.

ಕಚೇರಿಯಲ್ಲಿ ಕುರ್ಚಿಗಾಗಿ ಕದನ: ಸಹೋದ್ಯೋಗಿಯ ಮೇಲೆ ಗುಂಡಿನ ದಾಳಿ

ಮೃತ ತಿಮ್ಮಪ್ಪನ ಪತ್ನಿ ಬೆಂಗಳೂರಿನ ಮಹದೇವಪುರದ ವಿಜಯಮ್ಮ ಅದೇ ಗ್ರಾಮದ ಪೆರಮಾಳ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಇದಕ್ಕೆ ಅಡ್ಡಿಯಾಗಿದ್ದ ತಿಮ್ಮಪ್ಪನನ್ನು ಕೊಲೆ ಮಾಡಲು ಪೆರಮಾಳ್‌ ಹಾಗೂ ಇನ್ನೋರ್ವ ಆರೋಪಿ ವೆಂಕಟಾಚಲಪತಿ ಜತೆ ಪುಲಾಯಿಸಿದಲ್ಲದೇ ಏಪ್ರಿಲ್‌ 28 ರ ರಾತ್ರಿ ಮಧ್ಯದ ಜತೆ ವಿಷ ಬೇರಿಸಿ ಕುಡಿಸಿದಳು. ನಂತರ ಪೆರಮಾಳ್‌ ತಂದಿದ್ದ ಟೆಂಪೂನಲ್ಲಿ ತಿಮ್ಮಪ್ಪನನ್ನು ಮೇಡಹಳ್ಳಿ ಮೂಲಕ ಮಾಲೂರಿಗೆ ಕರೆತರುವಾಗ ಬಾಟಲಿನಲ್ಲಿ ಉಳಿದಿದ್ದ ವಿಷವನ್ನು ಮತ್ತೇ ಕುಡಿಸಿದರಲ್ಲದೇ ತಿಮ್ಮಪ್ಪ ಸಾವನ್ನು ಖಚಿತಗೊಳಿಸಿಕೊಂಡ ಮೇಲೆ ಇಲ್ಲಿನ ಯಶವಂತಪುರ ಅರಣ್ಯ ವ್ಯಾಪ್ತಿಯ ಇರಬನಹಳ್ಳಿ ತೋಪಿನಲ್ಲಿ ಶವವನ್ನು ಎಸೆದು ಪರಾರಿಯಾಗಿದ್ದರು. ಇವೆಲ್ಲವನ್ನೂ ವಿಚಾರಣೆ ವೇಳೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಠಾಣೆಯ ಸಿಪಿಐ ಚಂದ್ರಾದಾರ್‌ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ. ಕೊಲೆಯಾದ ಐದೇ ದಿನದಲ್ಲಿ ಪ್ರಕರಣವನ್ನು ಭೇದಿಸಿದ ಸ್ಥಳೀಯ ಪೊಲೀಸರ ಕಾರ‍್ಯ ವೈಖರಿಯನ್ನು ಕೋಲಾರ ಪೊಲೀಸ್‌ ಅಧೀಕ್ಷಕರು ಶ್ಲಾಘೀಸಿದ್ದಾರೆ.

click me!