2 ವರ್ಷದಿಂದ ಹಿಂಬಾಲಿಸಿ ಕೊಂದೇ ಬಿಟ್ಟ ಪಾಪಿ : 22 ವರ್ಷದ ಹುಡುಗಿಗೆ ಗುಂಡಿಕ್ಕಿ ಹತ್ಯೆ
ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 22 ವರ್ಷದ ಹುಡುಗಿಯೊಬ್ಬಳನ್ನು ಭಗ್ನಪ್ರೇಮಿಯೋರ್ವ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಆರೋಪಿ 2 ವರ್ಷಗಳಿಂದ ಆತನನ್ನು ಹಿಂಬಾಲಿಸುತ್ತಲೇ ಇದ್ದು, ಈಗ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಭೋಪಾಲ್: ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 22 ವರ್ಷದ ಹುಡುಗಿಯೊಬ್ಬಳನ್ನು ಭಗ್ನಪ್ರೇಮಿಯೋರ್ವ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಆರೋಪಿ 2 ವರ್ಷಗಳಿಂದ ಆತನನ್ನು ಹಿಂಬಾಲಿಸುತ್ತಲೇ ಇದ್ದು, ಈಗ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಅಲ್ಲದೇ ಆತನನ್ನು ಬಂಧಿಸಲು ಹೊದ ಪೊಲೀಸರ ಮೇಲೆಯೂ ಆರೋಪಿ ಗುಂಡು ಹಾರಿಸಿದ್ದು ಈ ವೇಳೆ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ದೀಪಕ್ ರಾಥೋರೆ ಎಂಬಾತನೇ ಹೀಗೆ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಯುವಕ. ಪೂಜಾ ಹತ್ಯೆಯಾದ ಯುವತಿಯಾಗಿದ್ದು, ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆರೋಪಿ ದೀಪಕ್ ನಡುರಸ್ತೆಯಲ್ಲೇ ಪೂಜಾ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಮಧ್ಯಪ್ರದೇಶದ (Madhya Pradesh) ಧಾರ್ ನಗರದಲ್ಲಿ ಈ ಘಟನೆ ನಡೆದಿದೆ.
Kodagu: ನಾಂಗಾಲದ ಯುವತಿ ಹತ್ಯೆ ಆರೋಪಿ ತಿಮ್ಮಯ್ಯ ಶವವಾಗಿ ಪತ್ತೆ: ಕೊಲೆ ಮಾಡಿದ್ಯಾರು?
ಆರೋಪಿ ದೀಪಕ್ ಪೂಜಾಳಿಗೆ ತನ್ನನ್ನು ಮದುವೆಯಾಗುವಂತೆ ಹೇಳಿ ನಿರಂತರವಾಗಿ ಒತ್ತಾಯಿಸುತ್ತಿದ್ದ. ಆದರೆ ಪೂಜಾ ಈತನ ನಿವೇದನೆಯನ್ನು ತಿರಸ್ಕರಿಸಿದ್ದಳು. ಮೃತ ಪೂಜಾಳಿಗೆ ತಂದೆ ಇಲ್ಲ, ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ಧಾರ್ ಸಮೋಪದ ನಗರವಾದ ಬ್ರಹ್ಮಕುಂಡದಲ್ಲಿ ಈಕೆ ನೆಲೆಸಿದ್ದಳು. ಧಾರ್‌ನ (Dhar) ರೆಸ್ಟೋರೆಂಟ್ (restaurant) ಒಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ ಎಂದಿನಂತೆ ಇಂದು ಕೆಲಸಕ್ಕೆ ಆಗಮಿಸುತ್ತಿದ್ದ ವೇಳೆ ಈಕೆಗೆ ಆರೋಪಿ ಎದುರಾಗಿದ್ದು, ಗುಂಡು ಹಾರಿಸಿದ್ದಾನೆ.
ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾಥೋರ್ ಈ ಹಿಂದೆಯೂ ಹಲವು ಬಾರಿ ಪೂಜಾಳನ್ನು ಹಿಂಬಾಲಿಸಿದ್ದ, ಅಲ್ಲದೇ ಆಕೆಯ ಕುಟುಂಬ ಹಾಗೂ ಸ್ನೇಹಿತರಿಗೂ ಬೆದರಿಕೆಯೊಡ್ಡಿದ್ದ. ಈ ಹಿನ್ನೆಲೆಯಲ್ಲಿ ಪೂಜಾ ಆತನ ವಿರುದ್ಧ ಪೊಲಿಸರಿಗೆ ದೂರು ನೀಡಿದ್ದಳು.
ಕೊಡಗಿನಲ್ಲಿ ಯುವತಿಯ ಕೊಲೆ: ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ
ಘಟನೆಯ ಬಳಿಕ ಆರೋಪಿ ರಾಥೋರ್‌ನನ್ನು ಪೊಲೀಸರು ಬ್ರಹ್ಮಕುಂಡದಲ್ಲಿರುವ (Brahmakund) ಆತನ ಮನೆಯಿಂದ ಬಂಧಿಸಿದ್ದಾರೆ. ಬಂಧನಕ್ಕೂ ಮೊದಲು ಆರೋಪಿ ಪೊಲೀಸರ ಮೇಲೆಯೂ ಗುಂಡಿನ ದಾಳಿ ನಡೆಸಿದ್ದಾನೆ. ಆತನ ಬಂಧನಕ್ಕೆ ಮನೆಗೆ ತೆರಳಿದ ಪೊಲೀಸರ ಮೇಲೆ ಆರೋಪಿ ದೀಪಕ್ ಗುಂಡು ಹಾರಿಸಿದ್ದು, ಇದರಿಂದ ಪೊಲೀಸರಲ್ಲಿ ಒಬ್ಬರಿಗೆ ಗಾಯವಾಗಿದೆ.
ಈ ವೇಳೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಬಂಧಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿರುವ ಆತ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ (police custody). ಪೊಲೀಸರು ರಾಥೋರ್‌ನ ನಿವಾಸವನ್ನು ಕೂಡ ಧ್ವಂಸ ಮಾಡಿದ್ದಾರೆ. ಅಕ್ರಮವಾಗಿ ಸಾರ್ವಜನಿಕ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಈ ಮನೆ ನಿರ್ಮಿಸಲಾಗಿತ್ತು. ಇಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಜೊತೆಗೂಡಿ ಹಲವು ಮನೆಗಳನ್ನು ಅಕ್ರಮ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ. ಪೂಜಾ ಹತ್ಯೆಗೆ ಆ ಊರವರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಂಡು ಪೂಜಾ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.