ಆರು ವರ್ಷದ ಕಂದನ ಮೇಲೆ ಅತ್ಯಾಚಾರ| ಪುಟ್ಟ ಬಾಲಕಿಯ ಗುಪ್ತಾಂಗಕ್ಕೆ ಗಂಭೀರ ಗಾಯ| ಆರೋಪಿಗಾಗಿ ತೀವ್ರ ಹುಡುಕಾಟ
ಲಕ್ನೋ(ಆ.08): ಆರು ವರ್ಷದ ಬಾಲಕಿನ್ನು ಕಿಡ್ನಾಪ್ ಮಾಡಿದ ವ್ಯಕ್ತಿಯೊಬ್ಬ ಆಖೆಯನ್ನು ಅತ್ಯಾಚಾರಗೈದು, ಹೊಲವೊಂದರಲ್ಲಿ ಸಾಯಲು ಬಿಟ್ಟ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಗ್ರಾಮಸ್ಥರು ಪತ್ತೆ ಹಚ್ಚಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾಳೆ.
ಇನ್ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ ಯುವತಿಯನ್ನು ರೇಪ್ ಮಾಡಿದ!
ಆಗಸ್ಟ್ 6 ರಂದು ಹಾಪುರ್‌ನ ತನ್ನ ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಅಪಹರಿಸಿದ್ದಾನೆ. ಬಳಿಕ ಆಕೆಯನ್ನು ಅತ್ಯಾಚಾರಗೈದ ರಕ್ಕಸ, ಪುಟ್ಟ ಬಾಲಕಿಯ ಗುಪ್ತಾಂಗಕ್ಕೆ ಗಾಯವುಂಟು ಮಾಡಿದ್ದಾನೆ. ಇಷ್ಟಾದ ಬಳಿಕ ಬಾಲಕಿಯನ್ನು ಹಳ್ಳಿಯ ಬಳಿ ಇರುವ ಹೊಲಕ್ಕೆಸೆದು ಪರಾರಿಯಾಗಿದ್ದಾನೆ.
ಇನ್ನು ಇತ್ತ ಆಟವಾಡುತ್ತಿದ್ದ ಮಗಳು ಬಹಳ ಹೊತ್ತಾದರೂ ಕಾಣದಾಗ ಆತಂಕಕ್ಕೀಡಾದ ಪೋಷಕರು ಗ್ರಾಮಸ್ಥರೊಂದಿಗೆ ಆಕೆಯ ಹುಡುಕಾಟ ಆರಂಭಿಸಿದ್ದಾರೆ. ಹೀಗಿದ್ದರೂ ಪ್ರಯೋಜನವಾಗದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಯ ಪ್ರವೃತ್ತರಾದ ಪೊಲೀಸರು ತಂಡವೊಂದನ್ನು ರಚಿಸಿ ಬಾಲಕಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬೆಳಗ್ಗೆ 6 ಗಂಟೆವರೆರೆ ಉಡುಕಾಡಿದರೂ ಬಾಲಕಿ ಪತ್ತೆಯಾಗಲಿಲ್ಲ. ಹೀಗಿರುವಾಗ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹೊಲದಲ್ಲಿ ಪತ್ತೆಯಾಗಿರುವುದಾಗಿ ಕುಟುಂಬ ಸದಸ್ಯರಿಗೆ ಮಾಹಿತಿ ಲಭಿಸುತ್ತದೆ.
ನಟಿ ಖುಷ್ಬೂಗೆ ಅತ್ಯಾಚಾರದ ಬೆದರಿಕೆ ಹಾಕಿದ ಅಪರಿಚಿತ; ಪಾಠ ಕಲಿಸೋಕೆ ಮಾಡಿದ ಪ್ಲಾನ್ ಇದು?
ಕೊನೆಗೂ ನಾಪತ್ತೆಯಾದ 12 ಗಂಟೆಯ ಬಳಿಕ ಆಗಸ್ಟ್ 7 ರಂದು ಬಾಲಕಿ ಪ್ರಜ್ಞಾಹೀನ ಹಾಗೂ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿ ಪತ್ತೆಯಾಘುತ್ತಿದ್ದಂತೆಯೇ ಗ್ರಾಸ್ಥರೆಲ್ಲಾ ಒಟ್ಟು ಸೇರಿ ಹೊಲದಲ್ಲೆಲ್ಲಾ ಆರೋಪಿಗಾಗಿ ಹುಡುಕಾಟದಿದ್ದು, ಗುಪ್ತಾಂಗಕ್ಕೆಎ ತೀವ್ರ ಹಾನಿಯಾಗಿದೆ ಎಂಬುವುದನ್ನು ಖಚಿತಪಡಿಸಿದ್ದಾರೆ.
ಇನ್ನು ಪೊಲೀಸರು ಹಾಗೂ ಕುಟುಂಬ ಸದಸ್ಯರು ಸೇರಿ ಗಮಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹಾಪುರ್‌ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಲ್ಲಿ ಬಾಲಕಿಯನ್ನು ಪರಿಶೀಲಿಸಿದ ವೈದ್ಯರು ಆಪರೇಷನ್ ಅಗತ್ಯವಿದೆ ಎಂದು ಮೀರತ್‌ನ ಮೆಡಿಕಲ್ ಕಾಲೇಜಿಗೆ ಕರೆದೊಯ್ಯುವಂತೆ ಸೂಚಿಸುತ್ತಾರೆ. ಇಲ್ಲಿ ಬಾಲಕಿಯನ್ನು ತಪಾಸಣೆ ನಡೆಸಿದ ವೈದ್ಯರು ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿದ್ದಾರೆ.
ಇನ್ನು ಪೊಲೀಸರು ಎಂಟು ತಂಡಗಳನ್ನು ರಚಿಸಿ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದು, ಎಲ್ಲಾ ರೀತಿಯ ತನಿಖೆ ಆರಂಭಿಸಲಾಗಿದೆ. ಅಲ್ಲದೇ ಅತೀ ಶೀಘ್ರದಲ್ಲಿ ಕಾಮುಕನನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.