ಅಹಮದಾಬಾದ್(ಆ.09): ತಾನು ಇನ್ಸ್ಟಾಗ್ರಾಂ ಬ್ಲಾಕ್ ಮಾಡಿದ ವ್ಯಕ್ತಿ ತನ್ನನ್ನು ಅತ್ಯಾಚಾರಗೈದಿರುವುದಾಗಿ ಗುಜರಾತ್‌ನ ಸೂರತ್ ಜಿಲ್ಲೆಯ 21 ವರ್ಷದ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯನ್ನು 24 ವರ್ಷದ ಇಕ್ರಾಂ ಪಾನ್ಸಿ ಎಂದು ಗುರುತಿಸಲಾಗಿದೆ. ವಿಶೇಷವೆಂದರೆ ಯುವತಿಯ ಮನೆಯವರ ಒಪ್ಪಿಗೆ ಬಳಿಕ ಇಬ್ಬರಿಗೂ ನಿಶ್ಚಿತಾರ್ಥವಾಗಿತ್ತೆನ್ನಲಾಗಿದೆ.

ಇನ್ನು ಆರೋಪಿ ಯುವತಿಯನ್ನು ಮದುವೆಯಾಗುವುದಾಗಿಯೂ ಮಾತು ಕೊಟ್ಟಿದ್ದ. ಆದರೆ ಇದಾದ ಬಳಿಕ ಯುವತಿ ಆತನ ಬಳಿ ಮದುವೆಯಾಗುವಂತೆ ಒತ್ತಾಯಿಸಲಾರಂಭಿಸಿದ್ದು, ಈ ವೇಳೆ ಆತ ತನ್ನ ಮನೆಯವರನ್ನು ಮದುವೆಗೆ ಒಪ್ಪಿಸುವುದಾಗಿ ಹೆಳಿ ಆಕೆಯನ್ನು ಸುಮ್ಮನಾಗಿಸುತ್ತಿದ್ದ. ಆದರೆ ಆತನ ನೆಪಗಳನ್ನು ಕೇಳಿ ಬೇಸತ್ತಿದ್ದ ಯುವತಿ ಒಂದು ದಿನ ವಿಷವನ್ನೂ ಸೇವಿಸಿದ್ದಳು. ಇದಾದ ಬಳಿಕ ಆರೋಪಿ ಹಾಗೂ ಯುವತಿಯ ಮನೆಯವರು ಈ ಮದುವೆಗೆ ಒಪ್ಪಿದ್ದರು. ಇದರ ಅನ್ವಯ ನಿಶ್ಚಿತಾರ್ಥವೂ ನಡೆದಿತ್ತು. 

ಆದರೆ ನಿಶ್ಚಿತಾರ್ಥ ನಡೆದ ಬಳಿಕ ಆರೋಪಿ ಅನೇಕ ಬಾರಿ ಯುವತಿಯನ್ನು ಹೊಟೇಲ್‌ಗೆ ಕರೆದೊಯ್ಯಲಾರಂಭಿಸಿದ್ದ ಹಾಗೂ ಲೈಂಗಿಕ ಸಂಬಂಧವನ್ನೂ ಬೆಳೆಸಿದ್ದ. ಆಧರೆ ಈ ನಡುವೆ ಯುವಕನ ಹೆತ್ತವರು, ಯುವತಿಯ ಕುಟುಂಬದವರ ಜೊತೆ ತನ್ನ ಮಗನನ್ನು ಆಕೆಯೊಂದಿಗೆ ಮದದುವೆ ಮಾಡಿಕೊಡಲು ತಯಾರಿಲ್ಲ ಎಂದಿದ್ದರು. ಹೀಗಿದ್ದರೂ ಆರೋಪಿ ಯುವತಿಯನ್ನು ಭೇಟಿಯಾಗುವಂತೆ ಒತ್ತಾಯಿಸಲಾರಂಭಿಸಿದ್ದ. 

ಹೀಗಿರುವಾಗ ಯುವತಿಗೆ ತಾನು ಮೋಸ ಹೋಗುತ್ತಿರುವ ಅರಿವಾಗಿ ಆಕೆ ವಿಷ ಸೇವನೆ ಮಾಡಿದ್ದಾಳೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಯುವತಿ  ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.