ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಹಾಗೂ ರಾಜಕಾರಣಿ ಖುಷ್ಬೂ ಇತ್ತೀಚಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಬಗ್ಗೆ ಟ್ಟೀಟ್‌ ಮಾಡಿದ್ದಾರೆ.  ಕಾಂಗ್ರೆಸ್‌ ಪಕ್ಷದ ಸದಸ್ಯೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಬದಲಾವಣೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಿ ಪಡಿಸುತ್ತಲೇ ಇರುತ್ತಾರೆ. ಈ ಕಾರಣಕ್ಕೆ ವಿರೋಧ ಪಕ್ಷದವರಿಂದ ಬರುವ ಟೀಕೆ, ನೆಟ್ಟಿಗರ ಬೆದರಿಕೆ ಕರೆ ಸರ್ವೇ ಸಾಮಾನ್ಯವಾದರೂ ಇಲ್ಲೊಬ್ಬ ಅಪರಿಚಿತ ಮಾಡಿದ ಕರೆಯನ್ನು ಗಂಭೀರವಾಗಿ ಪರಿಗಣಿಸಿ ಆತನ ಮಾಹಿತಿಯನ್ನು ಟ್ಟಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಸಲಿ ಹೆಸರಿನ ಬಗ್ಗೆ ಬಿಸಿಬಿಸಿ ಚರ್ಚೆ ; ಮತ್ತೆ ಸುದ್ದಿಯಲ್ಲಿ ನಟಿ ಖುಷ್ಬು

ಟ್ಟೀಟ್‌ ವೈರಲ್:

'ನನಗೆ ಕರೆ ಮಾಡಿದ ವ್ಯಕ್ತಿ ನಾನು ಮುಸ್ಲಿಮಳಾಗಿರುವ ಕಾರಣದಿಂದ ಅತ್ಯಾಚಾರ ಆಗಬೇಕು ಎಂದು ಹೇಳಿದ್ದಾನೆ. ಪ್ರಧಾನಿ ಮೋದಿ ಜೀ ನೀವೇ ಹೇಳಿ ರಾಮನಿರುವ ಭೂಮಿಯಲ್ಲಿ ಇದೆಲ್ಲಾ ಸರೀನಾ?' ಎಂದು ಟ್ಟೀಟ್ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನೆ ಬಿಡದ ಖುಷ್ಬೂ ಆತನ ನಂಬರ್ ಶೇರ್ ಮಾಡಿಕೊಂಡು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾಜರ್ನಿಯನ್ನು ಟ್ಯಾಗ್ ಮಾಡಿ ಈ ಘಟನೆ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

 

'ಸಂಜಯ್ ಶರ್ಮಾ ಎಂಬ ವ್ಯಕ್ತಿ ಈ ನಂಬರ್ ನಿಂದ ನನಗೆ ದಿನ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ ಈ ಕರೆ ಕೋಲ್ಕತ್ತಾಯಿಂದ  ಬಂದಿರುವುದು' ಎಂದು ಹೇಳಿರುವ ಖುಷ್ಬೂ ಈ ವ್ಯಕ್ತಿಯನ್ನು ಸಾರ್ವಜನಿಕವಾಗಿ ಅವಮಾನಿಸಿ ಅವನಿಗೆ ಒಂದು ಕುಟುಂಬವಿದೆ ಎಂದು ನೆನಪಿಸಬೇಕು ಅ ರೀತಿಯ ಒಂದು ಪಾಠ ಕಲಿಸಬೇಕು ಎಂದು ಬರೆದಿದ್ದಾರೆ.

ನಟಿ ಖುಷ್ಬೂ ಹುಡುಗನಾಗಿದ್ರೆ ಹೇಗಿರುತ್ತಿದ್ದರು? ಅವರೇ ಮಾಡಿಕೊಂಡ ಫೋಟೋ!