Ballari ರೌಡಿ ಶೀಟರ್ ಹತ್ಯೆ, ಶಾಸಕ ಸೋಮಶೇಖರ ರೆಡ್ಡಿ ನೀಡಿದ್ರಾ ಬೆಂಬಲ?

By Suvarna News  |  First Published May 2, 2022, 10:45 AM IST
  • ಬಳ್ಳಾರಿಯಲ್ಲಿ ಝಳಪಿಸಿದ ಮಚ್ಚು ಲಾಂಗು, ರೌಡಿ ಶೀಟರ್  ಕೊಚ್ಚಿ ಕೊಲೆ
  • ರೌಡಿ ಶೀಟರ್ ಹತ್ಯೆಗೆ ಶಾಸಕ ಸೋಮಶೇಖರರೆಡ್ಡಿ ಮಾಡಿದ್ರಾ ಸಪೋರ್ಟ್?
  • ಹಳೇ ದ್ವೇಷ ಮತ್ತು ಹುಡುಗಿಯನ್ನ ಪ್ರೀತಿಸಿದ ವಿಚಾರಕ್ಕೆ 30ಕ್ಕೂ ಹೆಚ್ಚು ಜನರಿಂದ ದಾಳಿ

ವರದಿ: ನರಸಿಂಹ ಮುರ್ತಿ ಕುಲಕರ್ಣಿ 

ಬಳ್ಳಾರಿ (ಎ.2) : ಇಷ್ಟು ದಿನಗಳ ಕಾಲ ಒಂದಷ್ಟು ತಣ್ಣಗಿದ್ದ ಬಳ್ಳಾರಿಯಲ್ಲಿ ಇದೀಗ ಮತ್ತೊಮ್ಮೆ ಮಚ್ಚು ಲಾಂಗುಗಳು ಝಳಪಿಸಿವೆ. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ರೌಡಿಶೀಟರನನ್ನ ನಿನ್ನೆ  ತಡರಾತ್ರಿ ಮಚ್ಚು ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹುಡುಗಿಯನ್ನ ಪ್ರೀತಿಸಿದ ವಿಚಾರದಲ್ಲಿ ಶುರುವಾದ ಜಗಳ ಹಳೇ ಕೊಲೆಯ ದ್ವೇಷವೊಂದರ ಹಿನ್ನೆಲೆ  ಕೊಲೆ ಮಾಡಲಾಗಿದೆ. ಆದ್ರೇ,  ರೌಡಿ ಶೀಟರ್ನನ್ನು ಕೊಂದ ಆರೋಪಿಗಳಿಗೆ ಬಿಜೆಪಿ ಶಾಸಕ ಸೋಮಶೇಖರೆಡ್ಡಿ () ಸಂಪೋರ್ಟ ಮಾಡಿದ್ರು ಅನ್ನೋ ಗಂಭೀರ ಆರೋಪವನ್ನು ರೌಡಿಶೀಟರ್ ಕುಟುಂಬಸ್ಥರು ಮಾಡುತ್ತಿದ್ದಾರೆ.
 
ಮನೆಯ ಮುಂದೆಯೇ ಬರ್ಬರವಾಗಿ ಕೊಂದ್ರು: ಹೌದು, ಈ ರೀತಿ  ರಕ್ತದ ಮಡುವಿನಲ್ಲಿ ಬಿದ್ದು ಸಾವನಪ್ಪಿರುವ ಈತನ ಹೆಸರು ಮಹೇಂದ್ರ (Mahendra). ಬಳ್ಳಾರಿಯ ಅಹಂಬಾವಿ ಪ್ರದೇಶದ ನಿವಾಸಿ. ಈ ಮಹೇಂದ್ರಗೆ ಕ್ರಿಮಿನಲ್ ಹಿನ್ನಲೆಯಿದೆ. ಬೆಳಗಲ್ ತಾಂಡಾ ರಮೇಶ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮಹೇಂದ್ರಗೆ ಇತ್ತೀಚಿಗಷ್ಠೆ ಜಾಮೀನು ದೊರೆತಿತ್ತು. ಕಳೆದ 6 ತಿಂಗಳಿನಿಂದ ಜಾಮೀನಿನ ಮೇಲೆ ಹೊರಗೆ ಇದ್ದ ರೌಡಿಶೀಟರ್ ಮಹೇಂದ್ರನನ್ನ ಕಳೆದ ರಾತ್ರಿ ಆರು ಜನರ  ಕೊಚ್ಚಿ ಕೊಲೆ ಮಾಡಿದೆ.

Tap to resize

Latest Videos

undefined

ಅಹಂಬಾವಿಯ ಮನೆಯಲ್ಲಿದ್ದ ಮಹೇಂದ್ರನನ್ನ ಕಳೆದ ರಾತ್ರಿ ಕಾಪೋರೇಟರ್ ಪತಿಯೊಬ್ಬರು ಮಾತನಾಡಿಸಿಕೊಂಡು ಹೋದ ಬೆನ್ನಲ್ಲೆ 30ಕ್ಕೂ ಹೆಚ್ಚು ಜನರಿಂದ ತಂಡ ಮಹೇಂದ್ರ ಮನೆ ಮೇಲೆ ದಾಳಿ ಮಾಡಿದೆ. ಹತ್ಯೆ ಮಾಡಲೆಂದು ಪ್ರೀಪ್ಲ್ಯಾನ್ ಮಾಡಿಕೊಂಡು ಬಂದಿದ್ದ ತಂಡದಲ್ಲಿದ್ದ 6 ಜನರು ಮಚ್ಚು ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರಂತೆ. ರೌಡಿ ಶೀಟರ್ ನ ಬೀಕರ ಹತ್ಯೆಗೆ ಹಳೇ ದ್ವೇಷ ಹಾಗೂ ವರ್ಷದ ಹಿಂದೆ ಯುವತಿಯೊಬ್ಬಳ ನ್ನು  ರೌಡಿಶೀಟರ್ ಸಂಬಂಧಿ ಪ್ರೀತಿಸಿದ ಕಾರಣವೇ ಕೊಲೆಗೆ ಕಾರಣ ಎನ್ನಲಾಗ್ತಿದೆ.

TUMAKURU ಎಸ್ಐಟಿ ಕಾಲೇಜು ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಗೆ ಕೊಡುಗೆ!
 
ಕೊಲೆಯಾದವನು ಹಿಂದೆ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿದ್ದವನೇ: ಇನ್ನೂ ಹತ್ಯೆಯಾಗಿರುವ ರೌಡಿ ಶೀಟರ್ ಮಹೇಂದ್ರ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ರು ಕೊಲೆಗೆ ಮಾತ್ರ ಲವ್ ಕೇಸ್ ವಿಚಾರವೇ ಕಾರಣ ಎನ್ನಲಾಗ್ತಿದೆ. ವರ್ಷದ ಹಿಂದೆ ಕೊಲೆಯಾಗಿರುವ ಮಹೇಂದ್ರನ ಪತ್ನಿಯ ಸಹೋದರ ರವಿ ಎನ್ನುವವರ ಮಗಳನ್ನ  ಇತರೆ ವ್ಯಕ್ತಿಯೊಬ್ಬ ಪ್ರೀತಿಸಿದ್ದನಂತೆ. ಈ ವಿಚಾರವಾಗೇ  ಗಲಾಟೆ ನಡೆದು ಮಹೇಂದ್ರ ಮೇಲೆ ಕೇಸ್ ದಾಖಲಾಗಿತ್ತು.

ಆದ್ರೆ ಇತ್ತೀಚಿಗೆ ಜೈಲಿನಿಂದ ಆಚೇ ಬಂದಿದ್ದ ಮಹೇಂದ್ರನ ಹತ್ಯೆ ಮಾಡಲು ಯತ್ನಿಸಿದ ಮರಯ್ಯಾ ಕುಟುಂದವರು ಹಾಗೂ ನವೀನ್. ಕೇಶವ. ಶಂಕರ್.  ನಾರಾಯಣಿ. ವಂಶಿ. ಧನಂಜಯ ಎನ್ನುವವರು ಪ್ಲ್ಯಾನ್ ಮಾಡಿ ಹತ್ಯೆ ಮಾಡಿದ್ದಾರಂತೆ. ಅಷ್ಠೇ ಅಲ್ಲ ಮಹೇಂದ್ರನನ್ನ ಮನೆಯಿಂದ ಆಚೇ ಎಳೆದು ತಂದು ಕೊಲೆಗೆ ಯತ್ನಿಸಿದ ವೇಳೆ ಮಹೇಂದ್ರನ ಸಹೋದರಿಯರು,‌ಮನೆಯಲ್ಲಿದ್ದ ಮಹಿಳೆಯರು ಆರೋಪಿಗಳಿಗೆ ಕೈ ಮುಗಿದು ಕಾಲಿಗೆ ಬಿದ್ದು ಬೇಡಿದ್ರು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.  ಇನ್ನೂ ಕೊಲೆ ಮಾಡಿದ ಆರೋಪಿಗಳ ಬೆನ್ನಿಗೆ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಇರುವುದರಿಂದಲೇ ಆರೋಪಿಗಳು ರಾಜಾರೋಷವಾಗಿ ಕೊಲೆ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ. 

ರಂಜಾನ್ ಹಬ್ಬದ ಹಿನ್ನೆಲೆ ಮೈಸೂರು ವಿವಿ ಪರೀಕ್ಷೆಗಳು ಮುಂದೂಡಿಕೆ

ಸ್ಥಳಕ್ಕೆ ಪೊಲೀಸರ ಭೇಟಿ ಪರಿಸ್ಥಿತಿ ನಿಯಂತ್ರಣ: ಕೊಲೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮೀಣ ಠಾಣೆಯ ಪೊಲೀಸರು ಪರಿಸ್ಥಿತಿ ಹತೋಟಿ ತಗೆದುಕೊಳ್ಳಲು ಕೆಲ ಕಾಲ ಹೆಣಗಾಡಿದ್ರು. ನಂತರ ಕೊಲೆಯಾದ ಮಹೇಂದ್ರನ ಶವವನ್ನ ವಿಮ್ಸ್ ಆಸ್ಪತ್ರೆಗೆ ರವಾನಿಸಿದ ಪೊಲೀಸರು ಸ್ಥಳದಲ್ಲಿದ್ದವರನ್ನ ಚದುರಿಸಿ ಪರಿಸ್ಥಿತಿಯನ್ನ ಹತೋಟಿಗೆ ತಗೆದುಕೊಂಡಿದ್ದಾರೆ.
 
ಕೊಲೆಗೆ ರಾಜಕೀಯ ಬಣ್ಣ ಲೇಪನ? ತನಿಖೆಯಿಂದಲೇ ಹೊರಬರಬೇಕಿದೆ: ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್ ಮಹೇಂದ್ರನ ಹತ್ಯೆಯಾಗಿದೆ. ಹತ್ಯೆಯ ಹಿಂದೆ ಯಾರಿದ್ದಾರೆ. ?  ಶಾಸಕ ಸೋಮಶೇಖರ ರೆಡ್ಡಿ ಹೆಸರು ಯಾಕೆ ಕೇಳಿ ಬಂತು. ಕೊಲೆಯಾಗೋ ಸ್ವಲ್ಪ ಸಮಯದ ಮುಂದೆ ಕಾರ್ಪೋರೇಟರ್ ಗಂಡನೊಬ್ಬ ಯಾಕೆ ಭೇಟಿ ಮಾಡಿದ ಎನ್ನುವ ಎಲ್ಲ ಪ್ರಶ್ನೆಗೆ ತನಿಖೆಯ ನಂತರ ಉತ್ತರ ಸಿಗಲಿದೆ.  

click me!