* ರಾಜ್ಯದ ಮೊದಲ ಕೋಕಾ ಪ್ರಕರಣದ ತೀರ್ಪು ಇಂದು ಪ್ರಕಟ
* ಪ್ರಕರಣ ಕುರಿತು ಸಾಕ್ಷ್ಯ ನುಡಿದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು
* ಇಂದು ಬೆಳಗ್ಗೆ 11ಕ್ಕೆ ಬೆಳಗಾವಿ ಕೋಕಾ ನ್ಯಾಯಾಲಯ ಪ್ರಕಟಿಸುವ ಸಾಧ್ಯತೆ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಮಾ.30): ಉತ್ತರ ಕನ್ನಡ(Uttara Kannada) ಜಿಲ್ಲೆ ಅಂಕೋಲಾ(Ankola) ಉದ್ಯಮಿ ಆರ್.ಎನ್.ನಾಯಕ್ ಕೊಲೆ ಆರೋಪ ಪ್ರಕರಣದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ವಿರುದ್ಧ ದಾಖಲಾಗಿರುವ ಕೋಕಾ ಪ್ರಕರಣದ ಅಂತಿಮ ತೀರ್ಪು ಇಂದು(ಬುಧವಾರ) ಬೆಳಗ್ಗೆ 11ಕ್ಕೆ ಬೆಳಗಾವಿ ಕೋಕಾ ನ್ಯಾಯಾಲಯ ಪ್ರಕಟಿಸುವ ಸಾಧ್ಯತೆ ಇದೆ.
2013ರ ಡಿಸೆಂಬರ್ 21ರಂದು ಸುಪಾರಿ ನೀಡಿ ಆರ್.ಎನ್.ನಾಯಕ್(RR Naik) ಹತ್ಯೆ(Murder) ಮಾಡಿಸಿದ ಆರೋಪ ಬನ್ನಂಜೆ ರಾಜಾ ಮೇಲಿದ್ದು, 3 ಕೋಟಿ ರೂ. ಹಫ್ತಾ ನೀಡದ ಹಿನ್ನೆಲೆ ಹತ್ಯೆ ಮಾಡಿದ ಆರೋಪವಿದೆ. 13 ಆರೋಪಿಗಳ(Accused) ಪೈಕಿ ಬನ್ನಂಜೆ ರಾಜಾ 9ನೇ ಆರೋಪಿ. ಬನ್ನಂಜೆ ರಾಜಾ ವಿರುದ್ಧ ಕೋಕಾ ಕಾಯ್ದೆಯಡಿ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಪ್ರಕರಣ ದಾಖಲಿಸಿದ್ದರು.
Annamalai In Karnataka: ಬೆಳಗಾವಿಯಲ್ಲಿ ಅಣ್ಣಾಮಲೈ, ಬನ್ನಂಜೆ ರಾಜಾ ವಿರುದ್ಧ ಸಾಕ್ಷ್ಯ
ಮೊರಕ್ಕೊದಲ್ಲಿ ಸೆರೆ ಸಿಕ್ಕಿದ್ದ ಭೂಗತ ಪಾತಕಿ ಬನ್ನಂಜೆ ರಾಜಾ
ನಕಲಿ ಪಾಸ್‌ಪೋರ್ಟ್(Duplicate Passport) ಹೊಂದಿದ ಆರೋಪದಡಿ 2015ರ ಫೆಬ್ರವರಿ 12ರಂದು ಮೊರಕ್ಕೊದಲ್ಲಿ ಬನ್ನಂಜೆ ರಾಜಾ(Bannanje Raja) ಬಂಧನವಾಗಿತ್ತು(Arrest). ಬಳಿಕ ಭಾರತಕ್ಕೆ ಭೂಗತ ಪಾತಕಿ ಬನ್ನಂಜೆ ರಾಜಾ ಹಸ್ತಾಂತರಿಸಲಾಗಿತ್ತು. 2015ರ ಆಗಸ್ಟ್ 14ರಂದು ಭಾರತಕ್ಕೆ(India) ಬನ್ನಂಜೆ ರಾಜಾ ಕರೆತರಲಾಗಿತ್ತು. ಕೋಕಾ ಕಾಯ್ದೆಯಡಿ ಬನ್ನಂಜೆ ರಾಜಾ ವಿರುದ್ಧ ಕೇಸ್ ದಾಖಲಿಸಲಾಗಿತ್ತು. 2000ರಲ್ಲಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೋಕಾ) ರಚನೆಯಾದ ಬಳಿಕ ಬನ್ನಂಜೆ ರಾಜಾ ವಿರುದ್ಧ ಮೊದಲ ಕೇಸ್ ದಾಖಲಾಗಿತ್ತು.7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ಅಂತಿಮ ತೀರ್ಪನ್ನು ಬೆಳಗಾವಿ ಕೋಕಾ ವಿಶೇಷ ನ್ಯಾಯಾಲಯ ಪ್ರಕಟಿಸಲಿದ್ದು ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 13 ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ರಾಯಚೂರು ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಕಿಡ್ನಾಪ್ ಕೇಸ್
ಸರ್ಕಾರದ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ಕೆ.ಜಿ.ಪುರಾಣಿಕಮಠ
ಸರ್ಕಾರದ(Government of Karnataka) ಪರ ವಿಶೇಷ ಅಭಿಯೋಜಕ ಕೆ.ಜಿ. ಪುರಾಣಿಕಮಠ ವಕಲಾತ್ತು ವಹಿಸಿದ್ದರು. ಪ್ರಕರಣ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್(Asianet Suvarna News) ಜೊತೆ ಮಾತನಾಡಿದ ವಿಶೇಷ ಅಭಿಯೋಜಕ ಕೆ.ಜಿ.ಪುರಾಣಿಕಮಠ, 2013ರ ಡಿಸೆಂಬರ್ 21ರ ಮಧ್ಯಾಹ್ನ 1.30ರ ಸುಮಾರಿಗೆ ಆರೋಪಿ ವಿವೇಕ್ ಉಪಾಧ್ಯಾಯ ಸೇರಿ ನಾಲ್ವರು ಆರೋಪಿಗಳು ಪ್ಲ್ಯಾನ್ ಮಾಡಿ ಪಿಸ್ತೂಲ್ ತಗೆದುಕೊಂಡು ಬಂದು ಹತ್ಯೆ ಮಾಡೀರ್ತಾರೆ. ರಮೇಶ್ ಗೌಡ ಗನ್‌ಮ್ಯಾನ್ ಬೆನ್ನುಹತ್ತಿ ಫೈರಿಂಗ್ ಮಾಡ್ತಾನೆ. ಈ ವೇಳೆ ಮೊದಲ ಆರೋಪಿ ವಿವೇಕ ಉಪಾಧ್ಯಯ ಮೃತಪಡುತ್ತಾನೆ. ಕೊಲೆ ಮಾಡುವ ಉದ್ದೇಶಕ್ಕಾಗಿ ಮಾರುತಿ ವ್ಯಾನ್ ಖರೀದಿ ಮಾಡೀರ್ತಾರೆ. ಪ್ರಕರಣದಲ್ಲಿ ಮೂರು ಆರೋಪಿಗಳು ಕೇರಳದವರು, ಮೂರು ಉತ್ತರ ಪ್ರದೇಶದವರು ಹಾಗೂ ಹತ್ತು ಆರೋಪಿಗಳು ಕರ್ನಾಟಕದವರು. ಪ್ರಕರಣದಲ್ಲಿ 9ನೇ ಆರೋಪಿ ಬನ್ನಂಜೆ ರಾಜಾ ಈ ಟೀಮ್‌ಗೆ ಮುಖ್ಯಸ್ಥ. ಅದಿರು ಉದ್ಯಮಿ ಆರ್.ಎನ್.ನಾಯಕ್ ಬಳಿ ವಿದೇಶದಿಂದ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡ್ತಿರ್ತಾನೆ. ಕೊಲೆಯಾಗುವ ಆರು ತಿಂಗಳ ಮುಂಚೆ ಕರೆ ಮಾಡಿ ಬೆದರಿಕೆ ಹಾಕಿದ ಬಗ್ಗೆ ಆರ್.ಎನ್.ನಾಯಕ್ ಪೊಲೀಸ್ ಠಾಣೆಗೆ ದೂರು ಸಹ ನೀಡಿರುತ್ತಾನೆ. ನನ್ನ ವಕೀಲ ವೃತ್ತಿಯಲ್ಲಿ ಇದು ದೊಡ್ಡ ಪ್ರಕರಣ' ಎಂದು ತಿಳಿಸಿದ್ದಾರೆ.
ಪ್ರಕರಣ ಕುರಿತು ಸಾಕ್ಷ್ಯ ನುಡಿದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು
ಆರ್. ಎನ್. ನಾಯಕ ಕೊಲೆ ಪ್ರಕರಣದಲ್ಲಿ ಒಟ್ಟು 16 ಆರೋಪಿಗಳಿದ್ದು ಇನ್ನೂ ಮೂವರು ತಲೆಮರಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿ 210 ಜನರು ಸಾಕ್ಷಿ ನುಡಿದಿದ್ರು. ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಅಲೋಕಕುಮಾರ್, ಮಾಜಿ ಪೊಲೀಸ್ ಅಧಿಕಾರಿಗಳಾದ ಭಾಸ್ಕರ ರಾವ್, ಅಣ್ಣಾಮಲೈ ಸೇರಿ 210 ಜನ ಸಾಕ್ಷಿ ನುಡಿದಿದ್ರು. 1027 ದಾಖಲೆ ಪತ್ರ ಹಾಗೂ 138 ಮುದ್ದೆಮಾಲನ್ನು ಕೋರ್ಟ್‌ಗೆ ಸಲ್ಲಿಸಲಾಗಿತ್ತು ಎಂದು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ವಿಶೇಷ ಅಭಿಯೋಜಕ ಕೆ.ಜಿ.ಪುರಾಣಿಕಮಠ ಮಾಹಿತಿ ನೀಡಿದ್ದಾರೆ.