Annamalai In Karnataka: ಬೆಳಗಾವಿಯಲ್ಲಿ ಅಣ್ಣಾಮಲೈ, ಬನ್ನಂಜೆ ರಾಜಾ ವಿರುದ್ಧ ಸಾಕ್ಷ್ಯ

*ಭೂಗತಪಾತಕಿ ಬನ್ನಂಜೆ ರಾಜಾ ವಿರುದ್ಧ ಕೆ.ಅಣ್ಣಾಮಲೈ ಸಾಕ್ಷ್ಯ

* ಅಣ್ಣಾಮಲೈರಿಂದ ಸಾಕ್ಷ್ಯ ಪಡೆದ ಬೆಳಗಾವಿಯ ಕೋಕಾ ನ್ಯಾಯಾಲಯ

* ಕೆ. ಅಣ್ಣಾಮಲೈ, ತಮಿಳುನಾಡು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ 

* ಕೋಕಾ ನ್ಯಾಯಾಲಯಕ್ಕೆ ಹಾಜರಾಗಿ  ಬನ್ನಂಜೆ ವಿರುದ್ಧ ಅಣ್ಣಾಮಲೈ ಸಾಕ್ಷ್ಯ

BJP s TN chief Annamalai deposes against gangster Bannanje Raja Belagavi mah

ಬೆಳಗಾವಿ(ಡಿ. 30)  ಅಂಕೋಲಾ (Ankola) ಉದ್ಯಮಿ ಆರ್.ಎನ್. ನಾಯಕ ಕೊಲೆ (Murder) ಪ್ರಕರಣಕ್ಕೆ ಸಂಬಂಧಿಸಿ  ಕೋರ್ಟ್‌ಗೆ ಹಾಜರಾಗಿ ಮಾಜಿ ಐಪಿಎಸ್ ಅಧಿಕಾರಿ, ರಾಜಕಾರಣಿ ಅಣ್ಣಾಮಲೈ (K. Annamalai)ಸಾಕ್ಷ್ಯ ಹೇಳಿದ್ದಾರೆ.

ಭೂಗತಪಾತಕಿ ಬನ್ನಂಜೆ ರಾಜಾ ವಿರುದ್ಧ ಕೆ.ಅಣ್ಣಾಮಲೈ ಸಾಕ್ಷ್ಯ ಹೇಳಿದ್ದಾರೆ. ಅಣ್ಣಾಮಲೈರಿಂದ ಸಾಕ್ಷ್ಯ ಪಡೆದ ಬೆಳಗಾವಿಯ ಕೋಕಾ ನ್ಯಾಯಾಲಯ ವಿಚಾರಣೆ ಮುಂದುವರಿಸಿದೆ. ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದ ಹಲವು ಭಾಗದಲ್ಲಿ ಕೆಲಸ ಮಾಡಿದ್ದ ಕೆ. ಅಣ್ಣಾಮಲೈ ಈಗ ತಮಿಳುನಾಡು ಬಿಜೆಪಿ ರಾಜ್ಯಘಟಕದ ಅಧ್ಯಕ್ಷರಾಗಿದ್ದಾರೆ.

ಆರ್.ಎನ್ ನಾಯಕ ಕೊಲೆ ಪ್ರಕರಣದ ತನಿಖಾಧಿಕಾರಿ ಆಗಿ ಅಣ್ಣಾಮಲೈ ಕಾರ್ಯನಿರ್ವಹಿಸಿದ್ದರು. ಅಣ್ಣಾಮಲೈ ಜೊತೆಗೆ ಇತರ ಅಧಿಕಾರಿಗಳು ಕೋರ್ಟ್ ಗೆ ಹಾಜರಾಗಿದ್ದರು.  ಎಡಿಜಿಪಿ ಪ್ರತಾಪ್ ರೆಡ್ಡಿ, ಭಾಸ್ಕರ್ ರಾವ್ ಕೋರ್ಟ್ ಗೆ ಹಾಜರಾಗಿ ಸಾಕ್ಷ್ಯ ಹೇಳಿದರು. ಕೊಲೆ ಪ್ರಕರಣದಡಿ ಬನ್ನಂಜೆ ರಾಜಾ ಸೇರಿ 15 ಆರೋಪಿಗಳ ವಿರುದ್ಧ ಕೋಕಾ ಕೇಸ್ ದಾಖಲಾಗಿತ್ತು. ಬೆಳಗಾವಿಯ ಕೋಕಾ‌ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ಬಂದಿದ್ದು ಕೆಲವೇ ದಿನದಲ್ಲಿ ಅಂತಿಮ ತೀರ್ಪು ಹೊರಕ್ಕೆ ಬರಲಿದೆ. 

ಬಿಜೆಪಿ ನಾಯಕನ ಅಶ್ಲೀಲ ವೀಡಿಯೋ ಬಿಡುಗಡೆಗೆ ಸೂಚಿ​ಸಿದ್ದ ಅಣ್ಣಾ​ಮ​ಲೈ?

ಪ್ರಕರಣ ಸಂಬಂಧ ವಿದೇಶದಲ್ಲಿದ್ದ ಬನ್ನಂಜೆ ರಾಜಾನನ್ನು 2016 ಆಗಸ್ಟ್ ತಿಂಗಳಲ್ಲಿ ವಶಕ್ಕೆ ಪಡೆದಿದ್ದ ಪೊಲೀಸರು ಇಲ್ಲಿನ ಕೋಕಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬೆಳಗಾವಿಯ ಕೋಕಾ‌ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದೆ. ಇದು ರಾಜ್ಯದ ಮೊದಲನೇ ಕೊಕಾ (Colorado Organized Crime Act Defense Attorney ) ಪ್ರಕರಣವಾಗಿದೆ.

ಮೇಕೆದಾಟು ಯೋಜನೆ ವಿವಾದ:   ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೆ ಬಿಜೆಪಿ ನಾಯಕರೇ ಆಗಿರುವ ಅಣ್ಣಾಮಲೈ ಕರ್ನಾಟಕ ಸರ್ಕಾರದ ಮೇಕೇದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದು ಬಹುದೊಡ್ಡ ಚರ್ಚೆಗೆ ವೇದಿಕೆ ಮಾಡಿಕೊಟ್ಟಿತ್ತು. 

 ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಜಾರಿಗೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ  ಅಣ್ಣಾಮಲೈಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ಕೊಟ್ಟಿದ್ದರು.

ನಮ್ಮ ರಾಜ್ಯ, ನಮ್ಮ ನೀರಿಗೆ ಸಂಬಂಧಿಸಿ ಕೆಲಸ ಮಾಡಲು ಯಾರ ಅಪ್ಪಣೆಯೂ ಬೇಕಿಲ್ಲ. ಕಾನೂನಾತ್ಮಕವಾಗಿ ಮೇಕೆದಾಟು ಯೋಜನೆ  ಜಾರಿ ಮಾಡುತ್ತೇವೆ. ಕುಡಿಯುವ ನೀರಿಗೆ ಬಳಸಿ, ವಿದ್ಯುತ್ ಉತ್ಪಾದನೆ ಮಾಡಿ ಬಳಿಕ ನೀರನ್ನು ನದಿಗೆ ಹರಿಬಿಡುತ್ತೇವೆ ಎಂದಿದ್ದರು.  ಸಿಎಂ ಬಸವರಾಜ ಬೊಮ್ಮಾಯಿ ಸಹ ಖಡಕ್ ಆಗಿ ಮಾತನಾಡಿದ್ದರು. ಯಾರ ಅಪ್ಪಣೆಯೂ ಬೇಕಿಲ್ಲ ಎಂದಿದ್ದರು.

 

Latest Videos
Follow Us:
Download App:
  • android
  • ios