ಅತ್ಯಾಚಾರ ಆರೋಪ: ಕೆಎಸ್‌ಆರ್‌ಟಿಸಿ ಮೆಕ್ಯಾನಿಕಲ್‌ ಅಮಾನತು

By Kannadaprabha News  |  First Published Aug 27, 2021, 1:43 PM IST

*  ಬಸವರಾಜ ನರಸನ್ನವರ ಸೇವೆಯಿಂದ ಅಮಾನತುಗೊಂಡಿರುವ ಮೆಕ್ಯಾನಿಕಲ್‌
*  ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನದ ಆರೋಪ
*  ಈ ಕುರಿತು ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 


ಬೆಳಗಾವಿ(ಆ.27): ಕೆಎಸ್‌ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಮೆಕ್ಯಾನಿಕಲ್‌ ಒಬ್ಬನನ್ನು ಅಮಾನತು ಮಾಡಿ ಗುರುವಾರ ಡಿಸಿ ಪಿ.ವೈ.ನಾಯಕ ಅವರು ಆದೇಶ ಹೊರಡಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬೆಳಗಾವಿ ಮೂರನೇ ಘಟಕದ ಬಸವರಾಜ ನರಸನ್ನವರ ಸೇವೆಯಿಂದ ಅಮಾನತುಗೊಂಡಿರುವ ಮೆಕ್ಯಾನಿಕಲ್‌. ಬುಧವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ಅವರ ಮನೆಯವರೆಗೂ ಹಿಂಬಾಲಿಸಿಕೊಂಡು ಹೋಗಿದ್ದ ಬಸವರಾಜ, ಆಕೆಯ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಆ ಮಹಿಳೆ ಕಿರುಚಾಟ ನಡೆಸಿದ್ದಾಳೆ. ಇದರಿಂದ ಅಕ್ಕಪಕ್ಕದ ಜನರು ಕೂಡುತ್ತಿದ್ದಂತೆಯೇ ಆರೋಪಿ ಬಸವರಾಜ ಅಲ್ಲಿಂದ ಪರಾರಿಯಾಗಿದ್ದಾನೆ.

Tap to resize

Latest Videos

ಮೈಸೂರು ಗ್ಯಾಂಗ್‌ ರೇಪ್‌: ಪೊಲೀಸರಿಗೇ ಸವಾಲಾಯ್ತಾ ಕಾಮುಕರ ಪತ್ತೆ ಕಾರ್ಯ?

ಈ ಕುರಿತು ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇರೆಗೆ ಮೆಕ್ಯಾನಿಕಲ್‌ ಬಸವರಾಜನನ್ನು ಸೇವೆಯಿಂದ ಮಾಡಿ ಕೆಎಸ್‌ಆರ್‌ಟಿಸಿ ಡಿಸಿ ಪಿ.ವೈ.ನಾಯಕ ಆದೇಶ ಹೊರಡಿಸಿದ್ದಾರೆ.
 

click me!