ಪುಲ್ವಾಮಾದಲ್ಲಿ ಗುಂಡಿನ ದಾಳಿ: ಉಗ್ರರ ಗುಂಡಿಗೆ ಮತ್ತೊಬ್ಬರು ಕಾಶ್ಮೀರಿ ಪಂಡಿತರ ಬಲಿ

By BK AshwinFirst Published Feb 26, 2023, 1:16 PM IST
Highlights

ಸಂಜಯ್ ಶರ್ಮಾ ಅವರು ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದು, ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತ ಸಂಜಯ್‌ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು ಎಂದು ತಿಳಿದುಬಂದಿದೆ.

ಪುಲ್ವಾಮಾ (ಫೆಬ್ರವರಿ 26, 2023): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾನುವಾರ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ 40 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಕಣಿವೆ ಪ್ರದೇಶದಲ್ಲಿ ಮತ್ತೊಂದು ಉದ್ದೇಶಿತ ಹತ್ಯೆ ನಡೆದಿದ್ದು, ಮೃತಪಟ್ಟವರನ್ನು ಸಂಜಯ್‌ ಶರ್ಮಾ ಎಂದು ಗುರುತಿಸಲಾಗಿದೆ. ಸಂಜಯ್ ಶರ್ಮಾ ಅವರು ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದು, ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತ ಸಂಜಯ್‌ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇನ್ನು, ಈ ಹತ್ಯೆಯನ್ನು ಖಚಿತಪಡಿಸಿದ ಜಮ್ಮು ಕಾಶ್ಮೀರ ಪೊಲೀಸರು (Jammu Kashmir Police) , ಉಗ್ರರನ್ನು ಸೆರೆಹಿಡಿಯಲು ಪ್ರದೇಶವನ್ನು ಸುತ್ತುವರಿದಿದ್ದೇವೆ ಎಂದು ತಿಳಿಸಿದ್ದಾರೆ. “ಭಯೋತ್ಪಾದಕರು (Terrorists) ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಿದ್ದ ಅಲ್ಪಸಂಖ್ಯಾತ ಪುಲ್ವಾಮಾನ ಅಚಾನ್‌ ನಿವಾಸಿ ಕಾಶೀನಾಥ್‌ ಶರ್ಮಾ ಅವರ ಪುತ್ರ ಸಂಜಯ್ ಶರ್ಮಾ (Sanjay Sharma) ಎಂಬ ನಾಗರಿಕನ ಮೇಲೆ ಗುಂಡಿನ ದಾಳಿ (Firing) ನಡೆಸಿದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟರು (Death). ಅವರ ಹಳ್ಳಿಗೆ ಶಸ್ತ್ರಸಜ್ಜಿತ ಬಂದೂಕುಧಾರಿ ಹೋಗಿದ್ದ ಎಂದು ತಿಳಿದುಬಂದಿದ್ದು, ಆ ಪ್ರದೇಶವನ್ನು ಸುತ್ತುವರಿಯಲಾಗಿದೆ. ಮತ್ತಷ್ಟು ವಿವರಗಳನ್ನು ತಿಳಿಸಲಾಗುವುದು ಎಂದು ಕಾಶ್ಮೀರ ಪೊಲೀಸರು ಟ್ವೀಟ್‌ನಲ್ಲಿ (Tweet) ತಿಳಿಸಿದ್ದಾರೆ.

ಇದನ್ನು ಓದಿ: ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಪರ್ಫ್ಯೂಮ್‌ ಬಾಂಬ್‌ ಪತ್ತೆ: ಉಗ್ರನ ಬಳಿ ಇತ್ತು ಸುಗಂಧ ಬಾಟಲ್‌ ಬಾಂಬ್‌..!

ಈ ಮದ್ಯೆ, ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯು ಶರ್ಮಾ ಹತ್ಯೆಯನ್ನು ತೀವ್ರವಾಗಿ ಖಂಡಿಸಿದೆ ಮತ್ತು ಘಟನೆಯನ್ನು ಹೃದಯ ವಿದ್ರಾವಕ ಮತ್ತು ಹೇಡಿತನದ ಕೃತ್ಯ ಎಂದು ಬಣ್ಣಿಸಿದೆ. ಹಾಗೆ, "ಘೋರ ಅಪರಾಧ" ದ ಅಪರಾಧಿಗಳ ವಿರುದ್ಧ ಅನುಕರಣೀಯ ಶಿಕ್ಷೆಗೆ ಒತ್ತಾಯಿಸಿತು. "ರಕ್ತಪಾತ ಮತ್ತು ಅಮಾಯಕರ ಹತ್ಯೆಯು ಅತ್ಯಂತ ಖಂಡನೀಯ ಮತ್ತು ಪ್ರತಿ ವರ್ಗದ ಜನರ ತೀವ್ರ ಖಂಡನೆಗೆ ಅರ್ಹವಾಗಿದೆ" ಎಂದು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಹೇಳಿದೆ. ಅಲ್ಲದೆ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಮೇ 12, 2022 ರಂದು ಬುದ್ಗಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ ರಾಹುಲ್ ಭಟ್ ಹತ್ಯೆಯ ಆರೋಪದ ಮೇಲೆ ಕಳೆದ ಕೆಲವು ತಿಂಗಳುಗಳಿಂದ ಕಾಶ್ಮೀರಿ ಪಂಡಿತರು ಕಣಿವೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಮತ್ತೊಂದು ಉದ್ದೇಶಿತ ಹತ್ಯೆ ನಡೆದಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ಜಮ್ಮು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ: ವಿಶ್ವಸಂಸ್ಥೆಯಲ್ಲಿ ಭಾರತ ಪುನರುಚ್ಚಾರ; ಪಾಕ್‌ಗೆ ತಿರುಗೇಟು

ಸುಗಂಧ ದ್ರವ್ಯ (ಪರ್ಫ್ಯೂಮ್) ಬಾಂಬ್‌ ಪತ್ತೆಯಾಗಿತ್ತು
ಜಮ್ಮು ಕಾಶ್ಮೀರದಲ್ಲಿ ಫೆಬ್ರವರಿ ತಿಂಗಳ ಆರಂಭದಲ್ಲಿ ಮೊದಲ ಬಾರಿಗೆ ಪರ್ಫ್ಯೂಮ್‌ ಬಾಂಬ್‌ ಪತ್ತೆಯಾಗಿತ್ತು.  ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥರು ಕೇಂದ್ರಾಡಳಿತ ಪ್ರದೇಶದಲ್ಲಿ ಇಂತಹ ಬಾಂಬ್ ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. ನಾವು ಸುಗಂಧ ದ್ರವ್ಯ IED ಅನ್ನು ವಶಕ್ಕೆ ಪಡೆದಿರುವುದು ಇದೇ ಮೊದಲ ಬಾರಿಗೆ. ನಾವು ಈ ಮೊದಲು ಯಾವುದೇ ಸುಗಂಧ ದ್ರವ್ಯ IED ಅನ್ನು ವಶಕ್ಕೆ ಪಡೆದಿರಲಿಲ್ಲ. ಯಾರಾದರೂ ಇದನ್ನು ಒತ್ತಿ ಅಥವಾ ತೆರೆಯಲು ಪ್ರಯತ್ನಿಸಿದರೆ IED ಸ್ಫೋಟಗೊಳ್ಳುತ್ತದೆ. ನಮ್ಮ ವಿಶೇಷ ತಂಡವು ಈ IED ಅನ್ನು ನಿರ್ವಹಿಸುತ್ತದೆ ಎಂದೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ತಿಳಿಸಿದ್ದರು.

ಆರಿಫ್ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಕಳೆದ ವರ್ಷ ಮೇನಲ್ಲಿ ವೈಷ್ಣೋದೇವಿ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸಿನಲ್ಲಿ ನಾಲ್ಕು ಜನರನ್ನು ಕೊಂದು 24 ಜನರನ್ನು ಗಾಯಗೊಳಿಸಿದ ಬಾಂಬ್ ಸ್ಫೋಟದಲ್ಲಿ ತಾನು ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದೂ ದಿಲ್ಬಾಗ್‌ ಸಿಂಗ್ ಹೇಳಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಚುರಪಡಿಸುವುದರಲ್ಲಿ ಕುಖ್ಯಾತವಾಗಿದೆ. ಮತ್ತು ಅದು ಜಮ್ಮು ಹಾಗು ಕಾಶ್ಮೀರದಲ್ಲಿ ಜನರ ನಡುವೆ ಕೋಮು ವಿಭಜನೆ ಸೃಷ್ಟಿಸಲು ಬಯಸುತ್ತದೆ ಎಂದೂ ಹೇಳಿದ್ದರು.

ಇದನ್ನು ಓದಿ: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ದಾಳಿ: 3 ನಾಗರಿಕರು ಬಲಿ, 9 ಮಂದಿಗೆ ತೀವ್ರ ಗಾಯ

click me!